ಹೈದರಾಬಾದ್ : ದೋಹಾದಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಶೂಟಿಂಗ್ ವಿಶ್ವ ಚಾಂಪಿಯನ್ಷಿಪ್ನ ಪುರುಷರ 50 ಮೀಟರ್ ಪಿಸ್ಟಲ್ ವಿಭಾಗದಲ್ಲಿ ಭಾರತವು ಒಂದು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಗೆಲ್ಲುವ ಮೂಲಕ ತನ್ನ ಪದಕದ ಖಾತೆಯನ್ನು ತೆರೆದಿದೆ. ರವೀಂದರ್ ಸಿಂಗ್, ಸೌರಭ್ ಚೌಧರಿ ಮತ್ತು ಅಮನ್ಪ್ರೀತ್ ಸಿಂಗ್ ಅವರನ್ನೊಳಗೊಂಡ ಭಾರತೀಯ ತ್ರಿವಳಿ ತಂಡವು ಒಟ್ಟು 1659-24x ಅಂಕಗಳನ್ನು ಗಳಿಸಿ ತಂಡ ವಿಭಾಗದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತು. ಚೀನಾ ತಂಡವು 1648-26x ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರೆ, ದಕ್ಷಿಣ ಕೊರಿಯಾ 1643-26x ಅಂಕಗಳೊಂದಿಗೆ ಮೂರನೇ ಸ್ಥಾನ ಗಳಿಸಿತು.
ವೈಯಕ್ತಿಕ ಫೈನಲ್ನಲ್ಲಿ ರವೀಂದರ್ ಒಟ್ಟು 559-11x ಅಂಕಗಳನ್ನು ಗಳಿಸಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ವೈಯಕ್ತಿಕ ತಟಸ್ಥ ಕ್ರೀಡಾಪಟುವಾಗಿ ಸ್ಪರ್ಧಿಸಿದ್ದ ರಷ್ಯಾದ ಆಂಟನ್ ಅರಿಸ್ಟಾಕೋವ್ 561-9x ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದರು. ರೊಮೇನಿಯಾದ ಲುಕಾ ಜೊಲ್ೂಯಿಯಾ 558-5x ಅಂಕಗಳೊಂದಿಗೆ ಕಂಚಿನ ಪದಕ ಪಡೆದರು. ಈ ಕೂಟವು ಒಲಿಂಪಿಕ್ಸ್ನ ಭಾಗವಾಗಿಲ್ಲದಿದ್ದರೂ, ಒಲಿಂಪಿಕ್ಸ್ನ ಭಾಗವಾಗಿರುವ 12 ವೈಯಕ್ತಿಕ ಸ್ಪರ್ಧೆಗಳ ಪೈಕಿ ಪ್ರತಿಯೊಂದರಲ್ಲೂ ಮೂರು ಕೋಟಾ ಸ್ಥಾನಗಳು ಇಲ್ಲಿ ಲಭ್ಯವಿವೆ ಮತ್ತು ಭಾರತವು ಈ ಸ್ಪರ್ಧೆಗಳಲ್ಲಿ 35 ಶೂಟರ್ಗಳನ್ನು ಕಣಕ್ಕಳಿಸಿದೆ.