image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ದಕ್ಷಿಣ ಕೊರಿಯಾವನ್ನು ಮಣಿಸಿ ಫೈನಲ್‌ಗೇರಿದ ಭಾರತ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ದಕ್ಷಿಣ ಕೊರಿಯಾವನ್ನು ಮಣಿಸಿ ಫೈನಲ್‌ಗೇರಿದ ಭಾರತ

ಹೈದರಾಬಾದ್ : 2026ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಭಾರತದ ಪುರುಷರ ಹಾಕಿ ತಂಡವು ದಕ್ಷಿಣ ಕೊರಿಯಾ ವಿರುದ್ಧ 8-1 ಗೋಲುಗಳ ಬೃಹತ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ.

ಆರಂಭದಿಂದಲೇ ಪಂದ್ಯದ ಮೇಲೆ ಪೂರ್ಣ ಹಿಡಿತ ಸಾಧಿಸಿದ ಭಾರತೀಯ ಆಟಗಾರರು ಎದುರಾಳಿ ತಂಡಕ್ಕೆ ಯಾವುದೇ ಅವಕಾಶ ನೀಡದೆ ಸತತ ಗೋಲುಗಳ ಸುರಿಮಳೆಗರೆದರು. ಭಾರತದ ಪರ ಶಿಲಾನಂದ್ ಲಾಕ್ರಾ ಮತ್ತು ದಿಲ್‌ಪ್ರೀತ್ ಸಿಂಗ್ ತಲಾ ಎರಡು ಗೋಲು ಗಳಿಸಿ ಮಿಂಚಿದರೆ, ನಾಯಕ ಹರ್ಮನ್‌ಪ್ರೀತ್ ಸಿಂಗ್, ಸುಖ್‌ಜೀತ್ ಸಿಂಗ್, ಅಂಗದ್ ಬೀರ್ ಸಿಂಗ್ ಮತ್ತು ವಿವೇಕ್ ಸಾಗರ್ ಪ್ರಸಾದ್ ತಲಾ ಒಂದು ಗೋಲು ಬಾರಿಸಿ ಗೆಲುವಿಗೆ ಕೊಡುಗೆ ನೀಡಿದರು.

ಈ ಪ್ರಭಾವಿ ಪ್ರದರ್ಶನದೊಂದಿಗೆ ಭಾರತ ತಂಡವು ದಾಖಲೆಯ ಏಳನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ಗೆ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ. ಈ ಪಂದ್ಯಾವಳಿಯಲ್ಲಿ ಇದುವರೆಗೆ ಸೋಲಿಲ್ಲದ ಓಟವನ್ನು ಮುಂದುವರಿಸಿರುವ ಹಾಕಿ ಇಂಡಿಯಾ, ಇದೀಗ ಪ್ರಶಸ್ತಿಗಾಗಿ ಜಪಾನ್ ತಂಡವನ್ನು ಎದುರಿಸಲಿದೆ.

Category
ಕರಾವಳಿ ತರಂಗಿಣಿ