image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಸಿಸಿ ಪುರುಷರ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ವೇಳಾಪಟ್ಟಿ ಪ್ರಕಟ: ನವೆಂಬರ್ 22ಕ್ಕೆ ಹೈದರಾಬಾದ್ : ಭಾರತ-ಪಾಕ್ ಹೈ-ವೋಲ್ಟೇಜ್ ಕದನ

ಎಸಿಸಿ ಪುರುಷರ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ವೇಳಾಪಟ್ಟಿ ಪ್ರಕಟ: ನವೆಂಬರ್ 22ಕ್ಕೆ ಹೈದರಾಬಾದ್ : ಭಾರತ-ಪಾಕ್ ಹೈ-ವೋಲ್ಟೇಜ್ ಕದನ

ಹೈದರಾಬಾದ್ : ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಂಬರುವ ಎಸಿಸಿ ಪುರುಷರ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಯುವ ಕ್ರಿಕೆಟ್ ಪ್ರತಿಭೆಗಳಿಗೆ ಅತ್ಯುತ್ತಮ ವೇದಿಕೆಯಾಗಿರುವ ಈ ಪ್ರತಿಷ್ಠಿತ ಏಕದಿನ ಟೂರ್ನಿಯು 2026ರ ನವೆಂಬರ್ 19 ರಿಂದ ನವೆಂಬರ್ 29 ರವರೆಗೆ ಖತಾರ್‌ನ ದೋಹಾದಲ್ಲಿ ಜರುಗಲಿದೆ.

ಈ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿದ್ದು, ಅವುಗಳನ್ನು ತಲಾ ನಾಲ್ಕರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಗ್ರೂಪ್ 'ಎ' ನಲ್ಲಿ ಶ್ರೀಲಂಕಾ 'ಎ', ಬಾಂಗ್ಲಾದೇಶ್ 'ಎ', ಅಫ್ಘಾನಿಸ್ತಾನ್ 'ಎ' ಮತ್ತು ಹಾಂಗ್ ಕಾಂಗ್ ತಂಡಗಳು ಸ್ಥಾನ ಪಡೆದಿದ್ದರೆ, ಗ್ರೂಪ್ 'ಬಿ' ನಲ್ಲಿ ಭಾರತ 'ಎ', ಪಾಕಿಸ್ತಾನ್ 'ಎ', ನೇಪಾಳ ಹಾಗೂ ಯುಎಇ ತಂಡಗಳು ಕಣಕ್ಕಿಳಿಯಲಿವೆ.

ದೋಹಾದ ಎರಡು ಪ್ರಮುಖ ಮೈದಾನಗಳಾದ ವೆಸ್ಟ್ ಎಂಡ್ ಪಾರ್ಕ್ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ (WEICS) ಮತ್ತು ಯೂನಿವರ್ಸಿಟಿ ಆಫ್ ದೋಹಾ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ (UDST) ಕ್ರಿಕೆಟ್ ಗ್ರೌಂಡ್‌ನಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಕ್ರಿಕೆಟ್ ಪ್ರಿಯರು ಕಾತರದಿಂದ ಕಾಯುತ್ತಿರುವ ಭಾರತ 'ಎ' ಮತ್ತು ಪಾಕಿಸ್ತಾನ್ 'ಎ' ನಡುವಿನ ಹೈ-ವೋಲ್ಟೇಜ್ ಪಂದ್ಯವು ನವೆಂಬರ್ 22 ರಂದು ವೆಸ್ಟ್ ಎಂಡ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಈ ಪಂದ್ಯವು ಮಧ್ಯಾಹ್ನ 3:30 ಕ್ಕೆ ಆರಂಭವಾಗಲಿದೆ.

ಈ ಬಾರಿಯ ಟೂರ್ನಿಯು ಉದಯೋನ್ಮುಖ ‘ಎ’ ತಂಡಗಳು ಹಾಗೂ ಯುಎಇ, ಹಾಂಗ್ ಕಾಂಗ್‌ನಂತಹ ಪ್ರಮುಖ ಅಂತರರಾಷ್ಟ್ರೀಯ ತಂಡಗಳ ನಡುವಿನ ತೀವ್ರ ಪೈಪೋಟಿಗೆ ಸಾಕ್ಷಿಯಾಗಲಿದ್ದು, ಯುವ ಆಟಗಾರರ ಕೌಶಲಕ್ಕೆ ದೊಡ್ಡ ಪರೀಕ್ಷೆಯಾಗಲಿದೆ.

Category
ಕರಾವಳಿ ತರಂಗಿಣಿ