ಹೈದರಾಬಾದ್ : ಕ್ರೈಸ್ಟ್ಚರ್ಚ್ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 4 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಕಿವೀಸ್ ನೀಡಿದ್ದ ಬೃಹತ್ 226 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ, ಅಂತರರಾಷ್ಟ್ರೀಯ ಟಿ20 ಇತಿಹಾಸದಲ್ಲೇ ತನ್ನ ಅತ್ಯಧಿಕ ಯಶಸ್ವಿ ರನ್ ಚೇಸ್ ದಾಖಲಿಸಿ ಹೊಸ ಮೈಲಿಗಲ್ಲು ಸ್ಥಾಪಿಸಿತು.
ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದರು. ಕೇವಲ 35 ಎಸೆತಗಳಲ್ಲಿ ಮೊದಲ ವಿಕೆಟ್ಗೆ 93 ರನ್ಗಳ ಜೊತೆಯಾಟವಾಡಿದ ಈ ಜೋಡಿ, ಕಿವಿಸ್ ಬೌಲರ್ಗಳನ್ನು ಆರಂಭದಲ್ಲೇ ಕಂಗೆಡಿಸಿತು. ಇದರೊಂದಿಗೆ 2020ರಲ್ಲಿ ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ನಿರ್ಮಿಸಿದ್ದ 89 ರನ್ಗಳ ನ್ಯೂಜಿಲೆಂಡ್ ನೆಲದ ಆರಂಭಿಕ ಪಾಲುದಾರಿಕೆಯ 6 ವರ್ಷಗಳ ದಾಖಲೆಯನ್ನು ಮುರಿಯಲಾಯಿತು. ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರ ಈ ಅಮೋಘ ಆಟದ ನೆರವಿನಿಂದ ಭಾರತವು 19.4 ಓವರ್ಗಳಲ್ಲಿ ಗುರಿ ತಲುಪಿ ಸರಣಿಯಲ್ಲಿ ಶುಭಾರಂಭ ಮಾಡಿದೆ.