image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಏಷ್ಯನ್ ಪ್ಯಾರಾ ಗೇಮ್ಸ್: ಭಾರತಕ್ಕೆ ಪದಕಗಳ ಸುರಿಮಳೆ

ಏಷ್ಯನ್ ಪ್ಯಾರಾ ಗೇಮ್ಸ್: ಭಾರತಕ್ಕೆ ಪದಕಗಳ ಸುರಿಮಳೆ

ಹೈದರಾಬಾದ್ : ಅಂಗವಿಕಲರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ ಹಲವು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಮಹಿಳೆಯರ 1500 ಮೀಟರ್ ಟಿ12/ಟಿ13 ಓಟದ ಸ್ಪರ್ಧೆಯಲ್ಲಿ ಸೌಮ್ಯಾ ಅವರು ಚಿನ್ನದ ಪದಕ ಗೆದ್ದರೆ, ರಾಧಾ ವೆಂಕಟೇಶ್ ಬೆಳ್ಳಿ ಪದಕ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಸೌಮ್ಯಾ 5 ನಿಮಿಷ 12.39 ಸೆಕೆಂಡುಗಳಲ್ಲಿ ಹಾಗೂ ರಾಧಾ 5 ನಿಮಿಷ 30.90 ಸೆಕೆಂಡುಗಳಲ್ಲಿ ಗುರಿ ತಲುಪಿದ್ದಾರೆ. ದೃಷ್ಟಿಹೀನ ಕ್ರೀಡಾಪಟುಗಳಿಗಾಗಿರುವ ಈ ವಿಭಾಗದಲ್ಲಿ ಸೌಮ್ಯಾ ಅವರಿಗೆ ಕುಮಾರ್ ಭರತ್ ಮತ್ತು ರಾಧಾ ಅವರಿಗೆ ಗೋವಿಂದ್ ಸೋಲಂಕಿ ಮಾರ್ಗದರ್ಶಕರಾಗಿದ್ದರು. ಶೂಟಿಂಗ್ ವಿಭಾಗದ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಮೋನಾ ಅಗರ್ವಾಲ್ 250 ಅಂಕಗಳೊಂದಿಗೆ ಚಿನ್ನ ಹಾಗೂ ಅವನಿ ಲೇಖರಾ 249.6 ಅಂಕಗಳೊಂದಿಗೆ ಬೆಳ್ಳಿ ಪದಕ ಪಡೆದಿದ್ದಾರೆ. ಜೂಡೋದಲ್ಲಿ ಕಪಿಲ್ ಪರ್ಮಾರ್ ಇಂಡೋನೇಷ್ಯಾ ಆಟಗಾರನನ್ನು ಸೋಲಿಸಿ ಕಂಚಿನ ಪದಕ ಗೆದ್ದುಕೊಂಡರೆ, ಪುರುಷರ ಟಿ47 ಲಾಂಗ್ ಜಂಪ್ ವಿಭಾಗದಲ್ಲಿ ನಿಶಾದ್ ಕುಮಾರ್ 7.09 ಮೀಟರ್ ದೂರ ಜಿಗಿದು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

Category
ಕರಾವಳಿ ತರಂಗಿಣಿ