ಹೈದರಬಾದ್ : ಭಾರತೀಯ ಪ್ಯಾರಾ ಆರ್ಚರಿ ತಾರೆ ಶೀತಲ್ ದೇವಿ ಅವರು ಐಚಿ-ನಗೋಯಾ ಪ್ಯಾರಾ ಏಷ್ಯನ್ ಕ್ರೀಡಾಕೂಟದ ಕಾಂಪೌಂಡ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ 704 ಅಂಕಗಳನ್ನು ಗಳಿಸಿ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. 72 ಬಾಣಗಳಲ್ಲಿ 57 ಪರಿಪೂರ್ಣ 10 ಗಳನ್ನು ಹೊಡೆಯುವ ಮೂಲಕ ಅವರು ಈ ಅದ್ಭುತ ಸಾಧನೆ ಮಾಡಿದ್ದು, ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಮತ್ತೊಬ್ಬ ಭಾರತೀಯ ಆಟಗಾರ್ತಿ ಪಾಯಲ್ ನಾಗ್ 675 ಅಂಕಗಳೊಂದಿಗೆ ಐದನೇ ಸ್ಥಾನ ಪಡೆದಿದ್ದು, ಇಬ್ಬರೂ ಸೇರಿ ಮಹಿಳಾ ಡಬಲ್ಸ್ ಶ್ರೇಯಾಂಕ ಸುತ್ತಿನಲ್ಲಿ ಒಟ್ಟು 1379 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿ ನೇರವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.