ಪುಣೆ : ಪುಣೆಯಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ನಲ್ಲಿ ಕಿವೀಸ್ ಪಡೆ ಭಾರತಕ್ಕೆ 359 ರನ್ಗಳ ಗುರಿಯನ್ನು ನೀಡಿದ್ದು, 103 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ನ್ಯೂಜಿಲೆಂಡ್ ಮೂರನೇ ದಿನದಾಟ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 301 ರನ್ಗಳ ಮುನ್ನಡೆ ಪಡೆದು ಬೃಹತ್ ಮೊತ್ತದತ್ತ ದಾಪುಗಾಲು ಹಾಕಿದೆ. ಆದರೆ, ನಾಲ್ಕನೇ ದಿನದಾಟವಾ ಇಂದು ಕಿವೀಸ್ ಬ್ಯಾಟರ್ಗಳಿಗೆ ಭಾರತೀಯ ಬೌಲರ್ಗಳು ಬ್ರೇಕ್ ಹಾಕಿದರು.
ಅಂದುಕೊಂಡಂತೆ ಭಾರತ ಈ ಮೊತ್ತವನ್ನು ಮಾಡಿದರೆ ಟೀಂ ಇಂಡಿಯಾದ ಟೆಸ್ಟ್ ಇತಿಹಾಸದಲ್ಲಿ ಎರಡನೇ ಅತ್ಯಧಿಕ ನಾಲ್ಕನೇ ಇನ್ನಿಂಗ್ಸ್ ಚೇಸ್ ಆಗಲಿದೆ. ಜತೆಗೆ ಕಿವೀಸ್ ವಿರುದ್ಧ 4ನೇ ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತದ ಸ್ಕೋರ್ ಚೇಸ್ ಮಾಡಿದ ಮೊದಲ ತಂಡವಾಗಿ ದಾಖಲೆ ಬರೆಯಲಿದೆ.
1969ರಲ್ಲಿ ಆಕ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ನೀಡಿದ್ದ 345 ಗುರಿಯನ್ನು ನಾಲ್ಕನೇ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ ಚೇಸ್ ಮಾಡಿ ಗೆಲುವು ಸಾಧಿಸಿತ್ತು. ಇದರೊಂದಿಗೆ ಕಿವೀಸ್ ವಿರುದ್ಧ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 300+ ಗುರಿಯನ್ನು ತಲುಪಿದ ಮೊದಲ ತಂಡ ಎಂಬ ದಾಖಲೆ ಬರೆಯಿತು.