image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

7 ವಿಕೆಟ್​ ಪಡೆದ ವಾಷಿಂಗ್ಟನ್​ ಸುಂದರ್​ : 259ಕ್ಕೆ ಅಲೌಟ್ ಆದ ಕಿವೀಸ್​

7 ವಿಕೆಟ್​ ಪಡೆದ ವಾಷಿಂಗ್ಟನ್​ ಸುಂದರ್​ : 259ಕ್ಕೆ ಅಲೌಟ್ ಆದ ಕಿವೀಸ್​

ಪುಣೆ : ಪುಣೆಯಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡ 259 ರನ್ ಗಳಿಗೆ ಆಲೌಟಾಗಿದೆ. ಭಾರತದ ಸ್ಪಿನ್​ ದಾಳಿಗೆ ಸಿಲುಕಿದ ಕಿವೀಸ್​ ಪಡೆ ಅಲ್ಪಮೊತ್ತಕ್ಕೆ ಕುಸಿದಿದೆ. ಅದರಲ್ಲೂ ಸ್ಪಿನ್ನರ್​ ವಾಷಿಂಗ್ಟನ್​ ಸುಂದರ್​ ತಮ್ಮ ಮಾರಕ ಬೌಲಿಂಗ್​ನಿಂದ ಏಳು ವಿಕೆಟ್​ಗಳನ್ನು ಉರುಳಿಸಿದರೆ, ರವಿಚಂದ್ರನ್ ಅಶ್ವಿನ್ 3 ವಿಕೆಟ್ ಪಡೆದರು.

ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಟಾಮ್ ಲ್ಯಾಥಮ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಪಿಚ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರು.

ಭಾರತ ಕೂಡ ಮೂರು ಬದಲಾವಣೆಗಳೊಂದಿಗೆ ಕಣಕ್ಕೆ ಇಳಿದಿದೆ. ಕೆಎಲ್ ರಾಹುಲ್, ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಬದಲಿಗೆ ಶುಭಮನ್ ಗಿಲ್, ವಾಷಿಂಗ್ಟನ್ ಸುಂದರ್ ಮತ್ತು ಆಕಾಶದೀಪ್​ರನ್ನು ತಂಡಕ್ಕೆ ಸೇರಿಕೊಂಡಿದೆ.

ಆರಂಭದಲ್ಲಿ ಕಿವೀಸ್​ ಪಡೆಗೆ ಅಶ್ವಿನ್​ ಶಾಕ್​ ನೀಡಿದ್ದರು. 32 ರನ್​ಗಳಿಸಿದ್ದ ಲ್ಯಾಥಮ್​ ಅವರನ್ನು ಅಶ್ವಿನ್​ ತಮ್ಮ ಸ್ಪಿನ್​ ಬಲೆಗೆ ಬೀಳಿಸಿದ್ದರು. ಬಳಿಕ ತಂಡ 76 ರನ್​ಗಳಿಸಿದ್ದ ವೇಳೆ ಅಶ್ವಿನ್​ ವಿಲ್​ ಯಂಗ್​ (18) ಅವರ ವಿಕೆಟ್​ ಉರುಳಿಸಿದರು. ನಂತರ ಚೇತರಿಸಿಕೊಂಡ ಕಿವೀಸ್​ ಬ್ಯಾಟರ್​ಗಳು​, ರನ್​ಗಳಿಸಲಾರಂಭಿಸಿದರು ತಂಡದ ಸ್ಕೋರ್​ 138 ಆಗುವವರೆಗೂ ವಿಕೆಟ್​ ಕಾಯ್ದುಕೊಂಡಿದ್ದರು. 76 ರನ್​ಗಳಿಸಿ ಶತಕದ ಸಮೀಪಿಸುತ್ತಿದ್ದ ಕಾನ್ವೆಗೆ ಅಶ್ವಿನ್ ಶಾಕ್​ ನೀಡಿದರು. ಅವರ ​ವಿಕೆಟ್​ ಪಡೆಯುವ ಮೂಲಕ ಶತಕದಾಟಕ್ಕೆ ಬ್ರೇಕ್​ ಹಾಕಿದರು. ಆರಂಭಿಕ 3 ವಿಕೆಟ್​ ಪಡೆದ ಅಶ್ವಿನ್​ ಕಿವೀಸ್​ ರನ್​ ಓಟಕ್ಕೆ ಬ್ರೇಕ್​ ಹಾಕಿದರು.

Category
ಕರಾವಳಿ ತರಂಗಿಣಿ