ಪುತ್ತೂರು : ಶಾಲಾ ಶಿಕ್ಷಣ ಇಲಾಖೆಯ ಪದವಿಪೂರ್ವ ವಿಭಾಗದ ವತಿಯಿಂದ ಕೆಯ್ಯೂರಿನ ಕೆಪಿಎಸ್ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ಎರಡೂ ತಂಡಗಳು ದ್ವಿತೀಯ ಸ್ಥಾನವನ್ನು ಪಡೆದುಕೊಂಡು ಸಾಧನೆ ಮಾಡಿವೆ.
ಈ ಪಂದ್ಯಾಟದ ಬಾಲಕಿಯರ ತಂಡದಲ್ಲಿ ಪ್ರಥಮ ಪಿಯುಸಿಯ ರುತಿಕಾ ಕೆ. ಎಸ್, ಪ್ರಾರ್ಥನಾ ವೈ. ಪಿ, ತನ್ವಿತಾ ಎಸ್, ಅಶ್ಮಿತಾ ಬಿ. ವಿ ಹಾಗೂ ದ್ವಿತೀಯ ಪಿಯುಸಿಯ ಚಾರುಸ್ಮಿತಾ ಆರ್, ಪ್ರಣೀಕ್ಷಾ ಟಿ. ಶೆಟ್ಟಿ, ಸಾರಿಕಾ ರೈ ಎಸ್, ಯಜ್ಞಶ್ರೀ, ವರ್ಷಿತಾ ಯು. ಎಸ್, ಯೋಗಿತಾ ಎಚ್. ಎಸ್, ಎಚ್. ಪಿ. ಜನನಿ, ಶ್ವೇತಾಶ್ರೀ ಎಚ್. ಎಲ್ ಮತ್ತು ತನುಶ್ರೀ ರೈ ಭಾಗವಹಿಸಿದ್ದರು. ಬಾಲಕರ ತಂಡದಲ್ಲಿ ಪ್ರಥಮ ಪಿಯುಸಿಯ ಚೇತನ್ ಕುಮಾರ್, ತನ್ವಿತ್ ಎಸ್, ಯುವರಾಜ್, ನಿರೀಕ್ಷಿತ್, ತ್ರಿಶಿಕ್ ಕೆ. ಗೌಡ, ಶಾಶ್ವತ್ ಎಸ್. ಎಚ್, ಸೂರಜ್ ಪಿ, ಬಿ. ಅಭಿರಾಮ್ ಹಾಗೂ ದ್ವಿತೀಯ ಪಿಯುಸಿಯ ವರ್ಷಿತ್ ಬಿ. ಎಮ್, ಮನೋಜ್ ಮತ್ತು ಅಂಕಿತ್ ಕಾಲೇಜನ್ನು ಪ್ರತಿನಿಧಿಸಿದ್ದರು.
ವಿಜೇತ ತಂಡಗಳು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಹಾಗೂ ಯತೀಶ್ ಅವರ ನೇತೃತ್ವದಲ್ಲಿ ತರಬೇತಿ ಪಡೆದಿದ್ದವು. ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ವೃಂದದವರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.