image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಏಷ್ಯನ್ ಗೇಮ್ಸ್: ಪಾಕಿಸ್ತಾನವನ್ನು 3-0 ಯಿಂದ ಮಣಿಸಿ ಕ್ವಾರ್ಟರ್ ಫೈನಲ್‌ಗೆ ಭಾರತೀಯ ಮಹಿಳಾ ಟಿಟಿ ತಂಡ!

ಏಷ್ಯನ್ ಗೇಮ್ಸ್: ಪಾಕಿಸ್ತಾನವನ್ನು 3-0 ಯಿಂದ ಮಣಿಸಿ ಕ್ವಾರ್ಟರ್ ಫೈನಲ್‌ಗೆ ಭಾರತೀಯ ಮಹಿಳಾ ಟಿಟಿ ತಂಡ!

ಹೊಸದಿಲ್ಲಿ: ಏಷ್ಯನ್ ಗೇಮ್ಸ್‌ನ ಮಹಿಳೆಯರ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾರತೀಯ ತಂಡವು ಪಾಕಿಸ್ತಾನದ ವಿರುದ್ಧ 3-0 ಅಂತರದ ಭರ್ಜರಿ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಆರಂಭಿಕ ಪಂದ್ಯದಲ್ಲಿ ಸಿಂಗಾಪುರವನ್ನು 3-2 ಅಂತರದಿಂದ ಸೋಲಿಸಿ ತನ್ನ ಅಭಿಯಾನವನ್ನು ಶುರುಮಾಡಿದ್ದ ಭಾರತ ತಂಡಕ್ಕೆ, ಈ ಪಂದ್ಯದಲ್ಲೂ ನಿರೀಕ್ಷಿತ ಯಶಸ್ಸು ಸಿಕ್ಕಿದೆ. ಭಾರತದ ಪರ ಸುತೀರ್ಥಾ ಮುಖರ್ಜಿ, ಸಿಂಡ್ರೆಲಾ ದಾಸ್ ಹಾಗೂ ಶ್ರೀಜಾ ಅಕುಲಾ ಅವರು ತಮ್ಮ ಪಂದ್ಯಗಳನ್ನು ಗೆದ್ದು ತಂಡದ ಜಯವನ್ನು ಖಚಿತಪಡಿಸಿದರು. ಇಡೀ ಪಂದ್ಯದುದ್ದಕ್ಕೂ ಎರಡೂ ದೇಶಗಳ ಆಟಗಾರ್ತಿಯರು ಪ್ರತಿಯೊಂದು ಪಂದ್ಯದ ನಂತರ ಹಸ್ತಲಾಘವ ಮಾಡುವ ಮೂಲಕ ಅತ್ಯುತ್ತಮ ಕ್ರೀಡಾಸ್ಪೂರ್ತಿಯನ್ನು ಮೆರೆದರು.

ಮೊದಲ ಪಂದ್ಯದಲ್ಲಿ ಕಣಕ್ಕಿಳಿದ ಸುತೀರ್ಥಾ ಮುಖರ್ಜಿ ಅವರು ಪಾಕಿಸ್ತಾನದ ಅಲೀನಾ ಖಾನ್ ಅವರನ್ನು 11-3, 11-3, 11-4 ಎಂಬ ನೇರ ಮೂರು ಗೇಮ್‌ಗಳಲ್ಲಿ ಸುಲಭವಾಗಿ ಸೋಲಿಸಿ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು. ಪಂದ್ಯ ಮುಗಿದ ಬಳಿಕ ಉಭಯ ತಂಡಗಳ ಆಟಗಾರ್ತಿಯರು ಹಸ್ತಲಾಘವ ಮಾಡಿದರು. ಎರಡನೇ ಪಂದ್ಯದಲ್ಲಿ ಸಿಂಡ್ರೆಲಾ ದಾಸ್ ಅವರು ಪಾಕಿಸ್ತಾನದ ಕಲ್ಸೂಮ್ ಖಾನ್ ವಿರುದ್ಧ 11-6, 11-7, 11-5 ಅಂತರದ ಗೆಲುವು ಸಾಧಿಸಿ, ಭಾರತದ ಮುನ್ನಡೆಯನ್ನು 2-0 ಗೆ ಹೆಚ್ಚಿಸಿದರು.

ಮೂರನೇ ಪಂದ್ಯದಲ್ಲಿ ಶ್ರೀಜಾ ಅಕುಲಾ ಅವರು ಫಾತಿಮಾ ಖಾನ್ ವಿರುದ್ಧ 11-4, 11-4, 11-5 ಅಂತರದ ಭರ್ಜರಿ ಗೆಲುವು ಪಡೆದರು. ಮೂರು ಗೇಮ್‌ಗಳಲ್ಲಿ ಎದುರಾಳಿಗೆ ಕೇವಲ 13 ಅಂಕಗಳನ್ನು ಮಾತ್ರ ಬಿಟ್ಟುಕೊಟ್ಟ ಶ್ರೀಜಾ, ಭಾರತದ ಗೆಲುವನ್ನು ಖಚಿತಪಡಿಸಿದರು. ಇದರೊಂದಿಗೆ ಭಾರತ ಮತ್ತೊಂದು 3-0 ಅಂತರದ ಜಯ ದಾಖಲಿಸಿ ಮುಂದಿನ ಹಂತಕ್ಕೆ ಮುನ್ನಡೆದಿದೆ. ಇನ್ನು ಭಾರತೀಯ ಪುರುಷರ ಟೇಬಲ್ ಟೆನಿಸ್ ತಂಡವೂ ಸೋಮವಾರದ ಬಳಿಕ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

Category
ಕರಾವಳಿ ತರಂಗಿಣಿ