ಮಂಗಳೂರು: ನಮ್ಮ ಆಲ್ ಇಂಡಿಯಾ ಮೆನ್ಸ್ ಆಂಡ್ ವುಮೆನ್ಸ್ ಸ್ಪೋರ್ಟ್ಸ್ ಚಾರಿಟೇಬಲ್ ಟ್ರಸ್ಟ್ ಅಶಕ್ತ ಕ್ರೀಡಾಪಟುಗಳಿಗೆ ಸಹಾಯ ಹಸ್ತ ನೀಡುವ ಸಲುವಾಗಿ ಪ್ರಾರಂಬಿಸಿದ್ದೇವೆ ಎಂದು ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಲಂಚುಲಾಲ್ ಕೆ. ಎಸ್ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ದೇಶದಲ್ಲಿ ಅದೆಷ್ಟೋ ಅತ್ಯದ್ಭುತ ಕ್ರೀಡಾಪಟುಗಳು ಸಮಾಜದ ಎದುರಿಗೆ ಬರದೇ ತೆರೆ ಮರೆಯಲ್ಲಿ ಇದ್ದಾರೆ. ಅದಕ್ಕೇ ಬಡತನ, ಮನೆಯ ಪರಿಸ್ಥಿತಿ, ಪೌಷ್ಟಿಕಾಂಶ ಯುಕ್ತ ಆಹಾರದ ಕೊರತೆ, ಆರ್ಥಿಕವಾಗಿ ಹಿಂದುಳಿದಿರುಗಿರುವುದು.
ಕ್ರೀಡೆ ಗಳಲ್ಲಿ ದರಿಸ ಬೇಕಾದ ಮೂಲ ಕಿಟ್ ಗಳನ್ನು ಖರೀದಿಸುವಲ್ಲಿ ಅಸಾಹಯಕತೆ. ಮುಂತಾದ ನಾನಾ ಕಾರಣಗಳು ಇರಬಹುದು. ನಮ್ಮ ದೇಶದ ಮೂಲೆ ಮೂಲೆಗಳಿಂದ ಇಂತಹ ಬಡ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ನೀಡಿ ಅವರು ಇಡೀ ಪ್ರಪಂಚವನ್ನು ಗೆದ್ದು ನಮ್ಮ ದೇಶ ಹೆಮ್ಮೆ ಪಡುವಂತಹ ಅತ್ಯದ್ಭುತ ಕ್ರೀಡಾ ಪ್ರತಿಭೆಯಾಗಬೇಕೆಂದು ನಮ್ಮ ಟ್ರಸ್ಟ್‌ನ ಕನಸಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಶ್ರೀಯುತ ಸಂದೀಪ್ ಪುರಂದರ ಶೆಟ್ಟಿ, ಕೋಶಾಧಿಕಾರಿ ಶ್ರೀ ಮೋಹನ್ ದಾಸ್, ಕಾರ್ಯದರ್ಶಿ ಶ್ರೀ ಚರಣ್ ರಾಜ್ ಉಪಸ್ಥಿತರಿದ್ದರು.