image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜಿಲ್ಲಾಮಟ್ಟದ ವೇಯ್ಟ್ ಲಿಫ್ಟಿಂಗ್: ಆಳ್ವಾಸ್‌ಗೆ ಅವಳಿ ಸಮಗ್ರ ಪ್ರಶಸ್ತಿ

ಜಿಲ್ಲಾಮಟ್ಟದ ವೇಯ್ಟ್ ಲಿಫ್ಟಿಂಗ್: ಆಳ್ವಾಸ್‌ಗೆ ಅವಳಿ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ದಕ್ಷಿಣ ಕನ್ನಡ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಮಂಗಳೂರಿನ ಬದ್ರಿಯಾ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜು ಅತ್ಯುತ್ತಮ ಪ್ರದರ್ಶನ ನೀಡಿ ಹುಡುಗರ ಹಾಗೂ ಹುಡುಗಿಯರ ಎರಡೂ ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಹುಡುಗರ ವಿಭಾಗದಲ್ಲಿ 5 ಚಿನ್ನದ ಪದಕಗಳೊಂದಿಗೆ ಆಳ್ವಾಸ್ ತಂಡ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಸ್ಪರ್ಧೆಯಲ್ಲಿ ಸಂತೋಷ್ (60 ಕೆಜಿ), ಪ್ರಫುಲ್ (71 ಕೆಜಿ), ಪ್ರಜ್ವಲ್ (79 ಕೆಜಿ), ಶ್ರೇಯಸ್ (88 ಕೆಜಿ) ಹಾಗೂ ಜೇಷ್ಠ (110 ಕೆಜಿ) ಪ್ರಥಮ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಭಾಜನರಾದರು.

ಹುಡುಗಿಯರ ವಿಭಾಗದಲ್ಲಿ 5 ಚಿನ್ನ, 1 ಬೆಳ್ಳಿ ಹಾಗೂ 1 ಕಂಚು ಸೇರಿ ಒಟ್ಟು 7 ಪದಕಗಳನ್ನು ಗಳಿಸಿದ ಆಳ್ವಾಸ್ ತಂಡ ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿತು. ಸ್ಪರ್ಧೆಯಲ್ಲಿ ಸಂಜನಾ (48 ಕೆಜಿ), ಸೌಮ್ಯ (53 ಕೆಜಿ), ಮೈತ್ರಿ (58 ಕೆಜಿ), ಅಪೂರ್ವ (63 ಕೆಜಿ), ಪಾವನಿ (77 ಕೆಜಿ) ಮತ್ತು ಅಶ್ವಿನಿ (86 ಕೆಜಿ) ಪ್ರಥಮ ಸ್ಥಾನ ಗಳಿಸಿದರೆ, ಲಹರಿ (69 ಕೆಜಿ) ದ್ವಿತೀಯ ಹಾಗೂ ಸಾಧನ (+86 ಕೆಜಿ) ತೃತೀಯ ಸ್ಥಾನ ಪಡೆದುಕೊಂಡರು.

ಎರಡೂ ವಿಭಾಗಗಳಲ್ಲಿ ಸಾಧನೆಗೈದು ಸಂಸ್ಥೆಗೆ ಅವಳಿ ಸಮಗ್ರ ಪ್ರಶಸ್ತಿ ತಂದುಕೊಟ್ಟ ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

Category
ಕರಾವಳಿ ತರಂಗಿಣಿ