ಮೂಡುಬಿದಿರೆ: ಪಾಂಡಿಚೇರಿಯ ಇಂದಿರಾ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಸಪ್ಟೆಂಬರ್ 16ರಿಂದ 18ರವರೆಗೆ ನಡೆಯಲಿರುವ 37ನೇ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ 22 ಕ್ರೀಡಾಪಟುಗಳು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದ ಬಾಲಕರ ವಿಭಾಗದ ಕ್ರೀಡಾಪಟುಗಳಲ್ಲಿ ದಯಾನಂದ (400 ಮೀಟರ್), ನೋವಲ್ ಆರ್.ಪಿ. (ಉದ್ದ ಜಿಗಿತ), ನಿತಿನ್ ಎಲ್.ಜಿ. (ಚಕ್ರ ಎಸೆತ), ರೂಪೇಶ್ (ಪೋಲ್ ವಾಲ್ಟ್), ಅಬ್ದುಲ್ ರಜಕ್ ಶಿಗ್ಗಾನ (ಹ್ಯಾಮರ್ ತ್ರೋ), ಸಾಹಿಲ್ (100 ಮೀಟರ್), ಸಮರ್ಥ್ ಸಂಜೀವ್ ಕುಮಾರ್ (1000 ಮೀಟರ್), ಆಕಾಶ್ ಹುಕ್ಕೇರಿ (110 ಮೀಟರ್ ಹರ್ಡಲ್ಸ್), ಜಸ್ವೀನ್ ಥೋಮಸ್ (ಎತ್ತರ ಜಿಗಿತ), ದಿಶಾಂತ್ (ಉದ್ದ ಜಿಗಿತ), ಹೆಚ್. ಮೈಲಾರಿ (ಚಕ್ರ ಎಸೆತ), ಆರಂಭಮ್ ರಾಜು (60 ಮೀಟರ್ ಹಾಗೂ 80 ಮೀಟರ್ ಹರ್ಡಲ್ಸ್), ಕೌಶಿಕ್ ಪಿ. ಶೆಟ್ಟಿಗಾರ್ (80 ಮೀಟರ್ ಹರ್ಡಲ್ಸ್), ಹರ್ಷದ್ ಗೌಡ (ಉದ್ದ ಜಿಗಿತ), ಮೋಕ್ಷಿತ್ ಆರ್. ಗೌಡ (ತ್ರಯತ್ಲಾನ್ ಬಿ) ಮತ್ತು ಸುಭಾಷ್ ಆರ್. (ತ್ರಯತ್ಲಾನ್ ಸಿ) ಪ್ರಮುಖರಾಗಿದ್ದಾರೆ.
ಬಾಲಕಿಯರ ವಿಭಾಗದಿಂದ ರೀತುಶ್ರೀ (400 ಮೀಟರ್), ಚರೀಷ್ಮಾ (3000 ಮೀಟರ್ ಹಾಗೂ 5000 ಮೀಟರ್), ಬಾನವಿ ಪಿ.ಎಸ್. (400 ಮೀಟರ್), ನಾಗಿಣಿ (1000 ಮೀಟರ್), ಭಗೀರಥಿ (3 ಕಿ.ಮೀ. ನಡಿಗೆ) ಹಾಗೂ ಮೇಘಾ ಅಶೋಕ್ ಪೂಜಾರಿ (600 ಮೀಟರ್) ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ಆಯ್ಕೆಯಾಗಿದ್ದಾರೆ. ದಕ್ಷಿಣ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿರುವ ಈ ಎಲ್ಲಾ 22 ಸ್ಪರ್ಧಿಗಳಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಅವರು ಶುಭ ಹಾರೈಸಿ, ಉತ್ತಮ ಪ್ರದರ್ಶನ ನೀಡುವಂತೆ ಧೈರ್ಯ ತುಂಬಿದ್ದಾರೆ.