image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗ್ರಾಂಡ್ ಚೆಸ್ ಟೂರ್: ಪ್ರಜ್ಞಾನಂದಗೆ ಸೋಲು, ಕರುವಾನಗೆ 6-0 ಮುನ್ನಡೆ

ಗ್ರಾಂಡ್ ಚೆಸ್ ಟೂರ್: ಪ್ರಜ್ಞಾನಂದಗೆ ಸೋಲು, ಕರುವಾನಗೆ 6-0 ಮುನ್ನಡೆ

ಸೇಂಟ್ ಲೂಯಿಸ್ : ಕಳೆದ ವರ್ಷದ ಚಾಂಪಿಯನ್ ಫ್ಯಾಬಿಯಾನೊ ಕರುವಾನ ಅವರು ಗ್ರಾಂಡ್ ಚೆಸ್ ಟೂರ್ ಅಂತಿಮ ಲೆಗ್ ಫೈನಲ್‌ನ ಮೊದಲ ಕ್ಲಾಸಿಕಲ್ ಆಟದಲ್ಲಿ ಭಾರತದ ಆರ್.ಪ್ರಜ್ಞಾನಂದ ಅವರನ್ನು ಸೋಲಿಸಿದರು. ಆ ಮೂಲಕ ಕರುವಾನ 6-0 ಮುನ್ನಡೆ ಸಂಪಾದಿಸಿದರು. ಈ ಸೆಣಸಾಟವು ಎರಡು ಕ್ಲಾಸಿಕಲ್, ಎರಡು ರ್ಯಾಪಿಡ್ ಮತ್ತು ನಾಲ್ಕು ಬ್ಲಿಟ್ಜ್ ಪಂದ್ಯಗಳನ್ನು ಒಳಗೊಂಡಿರುತ್ತದೆ. ಪ್ರತಿ ಕ್ಲಾಸಿಕಲ್ ಪಂದ್ಯದ ಗೆಲುವಿಗೆ ಆರು ಪಾಯಿಂಟ್‌ಗಳಿರುತ್ತವೆ.

ಬಿಳಿ ಕಾಯಿಗಳಲ್ಲಿ ಆಡಿದ, ಅಗ್ರ ಶ್ರೇಯಾಂಕದ ಕರುವಾನ ಅವರಿಗೆ ಆರಂಭದಲ್ಲಿ ಮೇಲುಗೈ ಪಡೆದಿರಲಿಲ್ಲ. ಒಂದು ಹಂತದಲ್ಲಿ ಪ್ರಜ್ಞಾನಂದ ಅವರಿಗೆ ಪಂದ್ಯವನ್ನು ಡ್ರಾ ಹಾದಿಯಲ್ಲಿ ಸಾಗುವಂತೆ ಮಾಡುವ ಅವಕಾಶ ದೊರಕಿತ್ತು. ಆದರೆ 28ನೇ ನಡೆಯಲ್ಲಿ ಪ್ರಜ್ಞಾನಂದ ಮಾಡಿದ ಏಕೈಕ ತಪ್ಪಿನ (ರೂಕ್ ಸಿ8 ನಡೆ) ಲಾಭವನ್ನು ಕರುವಾನ ಪಡೆದರು. ಅವರು ನಂತರ ಭಾರತದ ಆಟಗಾರನಿಗೆ ಚೇತರಿಸುವ ಅವಕಾಶವನ್ನೇ ನೀಡಲಿಲ್ಲ.

ಇನ್ನೊಂದೆಡೆ, ಮೂರನೇ ಸ್ಥಾನಕ್ಕಾಗಿ ನಡೆಯುತ್ತಿರುವ ಪಂದ್ಯದ ಮೊದಲ ಕ್ಲಾಸಿಕಲ್ ಆಟವನ್ನು ಅಮೆರಿಕದ ವೆಸ್ಲಿ ಸೊ ಮತ್ತು ಜರ್ಮನಿಯ ವಿನ್ಸೆಂಟ್ ಕೀಮರ್ ಅವರು 53 ನಡೆಗಳ ಡ್ರಾ ಮಾಡಿಕೊಂಡರು. ಇಬ್ಬರ ಖಾತೆಗೂ ತಲಾ ಮೂರು ಪಾಯಿಂಟ್‌ಗಳು ಸೇರ್ಪಡೆಯಾದವು.

Category
ಕರಾವಳಿ ತರಂಗಿಣಿ