image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವನಿತಾ ಹಾಕಿ ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಡ್ರಾ, ಭಾರತ ಎರಡನೇ ಸುತ್ತಿಗೆ

ವನಿತಾ ಹಾಕಿ ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಡ್ರಾ, ಭಾರತ ಎರಡನೇ ಸುತ್ತಿಗೆ

ನೆದರ್ಲ್ಯಾಂಡ್ಸ್‌ : ನೆದರ್ಲ್ಯಾಂಡ್ಸ್‌ನಲ್ಲಿ ನಡೆಯುತ್ತಿರುವ ವನಿತಾ ಹಾಕಿ ವಿಶ್ವಕಪ್‌ನ ಅತ್ಯಂತ ರೋಚಕ 'ಪೂಲ್ ಡಿ' ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿದ ಭಾರತ ಮಹಿಳಾ ಹಾಕಿ ತಂಡ ಟೂರ್ನಿಯ ಎರಡನೇ ಸುತ್ತಿಗೆ ಯಶಸ್ವಿಯಾಗಿ ಅರ್ಹತೆ ಪಡೆದುಕೊಂಡಿದೆ. ಪಂದ್ಯದಿಂದ ಲಭಿಸಿದ ಒಂದು ರೋಚಕ ಅಂಕದೊಂದಿಗೆ ಭಾರತ ಒಟ್ಟು 5 ಅಂಕಗಳನ್ನು ಕಲೆಹಾಕಿ, 'ಪೂಲ್ ಡಿ' ವಿಭಾಗದಲ್ಲಿ ಚೀನಾ ನಂತರ ದ್ವಿತೀಯ ಸ್ಥಾನದೊಂದಿಗೆ ಮುಂದಿನ ಹಂತಕ್ಕೆ ಲಗ್ಗೆ ಇಟ್ಟಿದೆ.

ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಚೀನಾ ವಿರುದ್ಧ 2-2 ಅಂತರದ ಡ್ರಾ ಸಾಧಿಸಿದ್ದ ಭಾರತ, ನಂತರ ದಕ್ಷಿಣ ಆಫ್ರಿಕಾ ವಿರುದ್ಧ 6-1 ಗೋಲುಗಳ ಐತಿಹಾಸಿಕ ಜಯ ದಾಖಲಿಸಿತ್ತು. ಇಂಗ್ಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಕೇವಲ ಡ್ರಾ ಸಾಧಿಸಿದರೂ ಮುಂದಿನ ಹಂತಕ್ಕೇರಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಭಾರತೀಯ ವನಿತೆಯರು ನಿರೀಕ್ಷಿತ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾದರು. ಪಂದ್ಯದುದ್ದಕ್ಕೂ ಇಂಗ್ಲೆಂಡ್ ತಂಡ ಪೂರ್ಣ ಪಾರಮ್ಯ ಮೆರೆಯಿತಲ್ಲದೆ, ಭಾರತದ ವಲಯದ ಮೇಲೆ ನಿರಂತರ ದಾಳಿ ನಡೆಸಿತು. ಆಂಗ್ಲರ ಪಡೆಗೆ ಬರೋಬ್ಬರಿ 11 ಪೆನಾಲ್ಟಿ ಕಾರ್ನರ್‌ಗಳು ಲಭಿಸಿದರೂ, ಭಾರತದ ಕಟ್ಟುನಿಟ್ಟಾದ ರಕ್ಷಣಾತ್ಮಕ ಆಟ ಮತ್ತು ಜಾಣ್ಮೆಯ ತಂತ್ರಗಾರಿಕೆ ಎದುರಾಳಿಗಳ ಗೋಲಿನ ಎಲ್ಲ ಯತ್ನಗಳನ್ನು ಸಂಪೂರ್ಣವಾಗಿ ವಿಫಲಗೊಳಿಸಿತು.

Category
ಕರಾವಳಿ ತರಂಗಿಣಿ