image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ಕೃಷಿ

ಮಾವು ಬೆಲೆ ಕುಸಿತ : ಬೆಳೆಗಾರರ ನೆರವಿಗೆ ಧಾವಿಸಲು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ಗೆ ಪ್ರಲ್ಹಾದ್ ಜೋಶಿ ಪತ್ರ

ಮಾವು ಬೆಲೆ ಕುಸಿತ : ಬೆಳೆಗಾರರ ನೆರವಿಗೆ ಧಾವಿಸಲು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ಗೆ ಪ್ರಲ್ಹಾದ್ ಜೋಶಿ ಪತ್ರ

ಬೆಂಗಳೂರು : ಕರ್ನಾಟಕದ ಮಾವು ಬೆಳೆಗಾರರು ಪ್ರಸ್ತುತ ಗಂಭೀರ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದು, ಮಾರುಕಟ್ಟೆಗಳಲ್ಲಿ ತೋತಾಪುರಿ ಮಾವಿನ ಬೆಲೆ ತೀವ್ರವಾಗಿ ಕುಸಿತ ಕಂಡಿದೆ. ಇದರಿಂದಾಗಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಸೇರಿದಂತೆ ರಾಜ್ಯದ ಹಲವು ಭಾಗಗಳ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಮಾವು ಬೆಳೆಗಾರರ ಹಿತರಕ್ಷಣೆಗಾಗಿ ಪಿಡಿಪಿಎಸ್​ (PDPS - ಬೆಲೆ ಕೊರತೆ ಪಾವತಿ ಯೋಜನೆ) ಅಡಿಯಲ್ಲಿ ಸೂಕ್ತ ಪರಿಹಾರ ಒದಗಿಸುವಂತೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ ಅವರು ಪತ್ರ ಬರೆಯುವ ಮೂಲಕ ತುರ್ತು ಮನವಿ ಮಾಡಿದ್ದಾರೆ.

ರಾಜ್ಯದ ಪ್ರಮುಖ ಜಿಲ್ಲೆಗಳ ಲಕ್ಷಾಂತರ ರೈತರ ಜೀವನೋಪಾಯಕ್ಕೆ ಆಧಾರವಾಗಿರುವ ಮಾವು ಬೆಳೆ ಸದ್ಯದ ಪರಿಸ್ಥಿತಿಯಲ್ಲಿ ದೊಡ್ಡ ಹೊಡೆತ ತಿಂದಿದೆ. ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರದಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ತೋತಾಪುರಿ ತಳಿಯ ಮಾವಿನ ಬೆಲೆಯು ರೈತರಿಗೆ ಸಿಗಬೇಕಾದ ಕನಿಷ್ಠ ಲಾಭದಾಯಕ ದರಕ್ಕಿಂತಲೂ ಗಣನೀಯವಾಗಿ ಕುಸಿದಿರುವುದು ಬೆಳೆಗಾರರನ್ನು ಕಷ್ಟಕ್ಕೆ ದೂಡಿದೆ. ಇದರೊಂದಿಗೆ ಈ ಬಾರಿ ಕಠಿಣ ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಮಾವಿನ ಉತ್ಪಾದನೆಯೂ ಕುಂಠಿತಗೊಂಡಿದ್ದು, ಒಂದೆಡೆ ಇಳುವರಿ ಕಡಿಮೆ ಮತ್ತು ಇನ್ನೊಂದೆಡೆ ಮಾರುಕಟ್ಟೆಯಲ್ಲಿ ತೀವ್ರ ಬೆಲೆ ಕುಸಿತದಿಂದಾಗಿ ರೈತರು ದ್ವಿಮುಖ ಹೊಡೆತಕ್ಕೆ ಸಿಲುಕಿ ಭಾರಿ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ನೀಡಿದಂತೆಯೇ ಪ್ರಸಕ್ತ ವರ್ಷವೂ ಆರ್ಥಿಕ ಬೆಂಬಲ ನೀಡುವಂತೆ ಕೋರಲಾಗಿದ್ದು, ಕೇಂದ್ರ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆ ವ್ಯಕ್ತವಾಗಿದೆ.

Category
ಕರಾವಳಿ ತರಂಗಿಣಿ