image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ಕೃಷಿ

ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾನ್ ರನ್ನು ಭೇಟಿಯಾದ ಕರಾವಳಿ ಸಂಸದರು

ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾನ್ ರನ್ನು ಭೇಟಿಯಾದ ಕರಾವಳಿ ಸಂಸದರು

ನವ ದೆಹಲಿ:  ಕೃಷಿ ಭವನ ದಲ್ಲಿ ಕೇಂದ್ರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾನ್ ಚೌಹಾಣ್ ಭೇಟಿಯಾಗಿ ರಾಜ್ಯದ ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕರಾವಳಿಯ ಸಂಸದರು ಮನವಿ ಮಾಡಿದರು.

ಅಡಿಕೆ ಬೆಳೆಗಾರರ ಸಮಾವೇಶಕ್ಕೆ ಡಿಸೆಂಬರ್ 6 ರಂದು ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ಬರುವುದಾಗಿ ಕೇಂದ್ರ ಸಚಿವರು ತಿಳಿಸಿ ಅಡಿಕೆ ಬೆಳೆಗಾರರ ನೆರವಿಗೆ ಬರಲು ಕೇಂದ್ರ ಸರಕಾರ ಭದ್ಧವಾಗಿದೆ ಎಂದರು.

ನಿಯೋಗದ ನೇತೃತ್ವವನ್ನು ಶಿವಮೊಗ್ಗ ಸಂಸದ ಶ್ರೀ ರಾಘವೇಂದ್ರ ವಹಿಸಿದ್ದು ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿ,  ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ , ಬ್ರಿಜೇಶ್ ಚೌಟ ಹಿರಿಯರಾದ ಹೊಸ ಬಾಲೆ ಮಂಜಪ್ಪ ಮುಂತಾದವರಿದ್ದರು.

Category
ಕರಾವಳಿ ತರಂಗಿಣಿ