image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ಕೃಷಿ

ಬೆಳಗಾವಿ ಗೆಣಸಿಗೆ ಉತ್ತರ ಭಾರತದಲ್ಲಿ ಭಾರೀ ಡಿಮ್ಯಾಂಡ್​: ಕೈ ಸೇರಿದ ಉತ್ತಮ ಬೆಲೆ, ರೈತರು ಖುಷ್‌

ಬೆಳಗಾವಿ ಗೆಣಸಿಗೆ ಉತ್ತರ ಭಾರತದಲ್ಲಿ ಭಾರೀ ಡಿಮ್ಯಾಂಡ್​: ಕೈ ಸೇರಿದ ಉತ್ತಮ ಬೆಲೆ, ರೈತರು ಖುಷ್‌

ಬೆಳಗಾವಿ: ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗೆಣಸು ಆವಕ ಹೆಚ್ಚಾಗಿದೆ. ಈ ಬಾರಿ ಉತ್ತಮ ಬೆಲೆ ಕೈ ಸೇರಿದ್ದರಿಂದ ರೈತರು ಸಂತಸದಲ್ಲಿದ್ದಾರೆ. ಇಲ್ಲಿನ ಗುಣಮಟ್ಟದ ಗೆಣಸಿಗೆ ಉತ್ತರ ಭಾರತದಲ್ಲಿ ಭಾರೀ ಬೇಡಿಕೆ ಇದೆ.

ಬೆಳಗಾವಿ ಪಶ್ಚಿಮ ಭಾಗ, ಖಾನಾಪುರ ತಾಲೂಕಿನ ಕೆಲ ಗ್ರಾಮಗಳು ಮತ್ತು ಮಹಾರಾಷ್ಟ್ರದ ಚಂದಗಡ ತಾಲೂಕಿನ ರೈತರು ಹೇರಳವಾಗಿ ಸಿಹಿ ಗೆಣಸು ಬೆಳೆಯುತ್ತಾರೆ. ಖರ್ಚು ಕಡಿಮೆ, ಅಧಿಕ ಲಾಭ ಸಿಗುವ ಹಿನ್ನೆಲೆಯಲ್ಲಿ ಬಹಳಷ್ಟು ರೈತರು ಗೆಣಸನ್ನೇ ನೆಚ್ಚಿಕೊಂಡಿದ್ದಾರೆ. ಪ್ರಕೃತಿ ವಿಕೋಪದ ಮಧ್ಯೆಯೂ ಕೆಲ ರೈತರು ಉತ್ತಮ ಗೆಣಸು ಬೆಳೆದಿದ್ದಾರೆ‌. ಒಳ್ಳೆಯ ದರವೂ‌ ಸಿಕ್ಕಿದೆ.

ಟ್ರ್ಯಾಕ್ಟರ್, ಗೂಡ್ಸ್ ವಾಹನಗಳಲ್ಲಿ ಗೆಣಸು ತುಂಬಿಕೊಂಡು ಬೆಳಗಾವಿ ಎಪಿಎಂಸಿಗೆ ರೈತರು ಆಗಮಿಸುತ್ತಿದ್ದಾರೆ. ಪ್ರತೀ ಬುಧವಾರ ಮತ್ತು ಶನಿವಾರ ಗೆಣಸಿನ ಮಾರುಕಟ್ಟೆ ಇರುತ್ತದೆ. ಬುಧವಾರ 1 ಕ್ವಿಂಟಲ್ ಗೆಣಸಿಗೆ 3 ಸಾವಿರ ರೂ.ವರೆಗೆ ದರ ಸಿಕ್ಕಿದರೆ, ಶನಿವಾರ 1,500-2,300 ರೂ.ವರೆಗೆ ಗೆಣಸು ಮಾರಾಟವಾಗಿದೆ. ಈ ದರ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚು ಮತ್ತು ಇಷ್ಟು ದರ ಯಾವತ್ತೂ ರೈತರಿಗೆ ಸಿಕ್ಕಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.

 

Category
ಕರಾವಳಿ ತರಂಗಿಣಿ