ಮಂಗಳೂರು: ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಪಚ್ಚಾಜೆಯಲ್ಲಿ ಮುಂಚೂಣಿ ಪ್ರಾತ್ಯಕ್ಷಕೆದಡಿ ಬೆಳೆಸಿದ ಸಹ್ಯಾದ್ರಿ ಕೆಂಪುಮುಕ್ತಿ ಭತ್ತದ ತಳಿಯ ಕೃಷಿ ಕ್ಷೇತ್ರಗಳಿಗೆ ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಬೇಟಿ ನೀಡಿ ಭತ್ತದ ಬೆಳೆಯ ಸ್ಥಿತಿಗತಿಯನ್ನು ಪರಿಶೀಲಿಸಿದರು.ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರತಜ್ಞರಾದ ಹರೀಶ ಶೆಣೈ ಬೆಳೆಯ ಬೆಳವಣಿಗೆ ಕುರಿತು ತೃಪ್ತಿ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಕೈಗೊಳಬೇಕಾದ ಬೇಸಾಯ ಕ್ರಮಗಳು ಹಾಗೂ ಸಮಗ್ರ ಪೋಷಕಾಂಶ ನಿರ್ವಹಣೆ ಕುರಿತು ಪ್ರಾತ್ಯಕ್ಷಕೆ ಕೈಗೊಂಡ ಕೃಷಿಕರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಗತಿಪರ ಕೃಷಿಕರಾದ ಉಮೇಶ್ ಪೂಜಾರಿ, ಭೋಜ ಪೂಜಾರಿ, ಶ್ರೀಧರ, ಅನ್ಸಲ್ ಪಿಂಟೋ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ ಕೇಶವ ರಾವ್ ಉಪಸ್ಥಿತರಿದರು.