ಸೌಂಧರ್ಯದ ಗÀಣಿಗಳೆನಿಸಿಕೊಂಡಿರುವ ಕಣಿವೆಗಳನ್ನು ಕಂಡಾಗ ಮನಸ್ಸು ಪುಳಕಿತವಾಗುವುದರಲ್ಲಿ ಸಂಶಯವಿಲ್ಲ. ಅಂತಹ ಕಣಿವೆಗಳಲ್ಲಿ ಸುರು ಕಣಿವೆಯೂ ಒಂದು. ಇದು ಭಾರತದ ಒಂದು ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ನ ಕಾರ್ಗಿಲ್ ಜಿಲ್ಲೆಯಲ್ಲಿನ ಒಂದು ಕಣಿವೆಯಾಗಿದೆ. ಸಿಂಧೂ ನದಿಯ ಪ್ರಬಲ ಉಪನದಿಯಾದ ಸುರೂ ನದಿಯು ಇಲ್ಲಿಯ ಮೂಲಕ ಹರಿಯುತ್ತದೆ. ಕಣಿವೆಯ ಅತ್ಯಂತ ಮಹತ್ವದ ಪಟ್ಟಣವೆಂದರೆ ಸಂಕೂ. ಸುರೂ ಕಣಿವೆಯು ತನ್ನ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಈ ಕಣಿವೆಯಲ್ಲಿ ಅನೇಕ ಪ್ರೇಕ್ಷಣೀಯ ತಾಣಗಳಿವೆ. ಅದರಲ್ಲಿ ಡಾಮ್ಸ್ನಾ, ಪಾರ್ಕಾಚಿಕ್, ಸಾಂಗ್ರಾ, ಕಾರ್ಪೋಖಾರ್, ಖೌಸ್, ಥುಲುಸ್, ಸ್ಟಾಕ್ಪಾ, ಉಂಬಾ ನಾಮ್ಸುರುಗಳು ಪ್ರಮುಖವಾದವುಗಳು. ಚಳಿಗಾಲದಲ್ಲಿ ಸುರೂ ಕಣಿವೆಯಲ್ಲಿ ಭಾರೀ ಹಿಮಪಾತ ಮತ್ತು ಹಿಮಪ್ರವಾಹವಾಗುತ್ತದೆ.
ಹಿಮಚಿರತೆ, ಟಿಬೆಟಿಯನ್ ತೋಳ,ಹಿಮಾಲಯನ್ ಕಂದು ಕರಡಿ, ಏಷಿಯಾಟಿಕ್‌ಐಬೆಕ್ಸ್, ಲಡಾಖ್ ಯೂರಿಯಲ್, ಮುಸ್ಕೇರಿ ಮುಂತಾದ ಅನೇಕ ಅಳಿವಿನಂಚಿನಲ್ಲಿರುವ ವನ್ಯಜೀವಿ ಪ್ರಭೇದಗಳಿಗೆ ಇದು ನೆಲೆಯಾಗಿದೆ. ಪಿಕಾಸ್ ಮತ್ತು ಮೊಲಗಳಂತಹ ಸಸ್ತನಿಗಳ ಲ್ಲದೆ, ಸರೀಸೃಪಗಳು ಕಾರ್ಗಿಲ್ ಜೀವ ವೈವಿಧ್ಯದ ಪ್ರಮುಖ ಭಾಗವಾಗಿದೆ. ಕಾರ್ಗಿಲ್ ಜಿಲ್ಲೆಯಲ್ಲಿ ಕಂಡುಬರುವ ಕೆಲವು ಸರೀಸೃಪಗಳೆಂದರೆ ಪ್ಲಾಟಿಸೆಪ್ಸ್ ಲಡಾಸೆನ್ಸಿಸ್, ಟೋಡ್ ಹೆಡ್ ಆಗಮಾ, ಅಲ್ಟಿಫಿಲಾಕ್ಸ್ ಸ್ಟೊಲಿಕ್ಜ್ಕೈ, ಹಿಮಾಲಯನ್ ಆಗಮಾ ಮತ್ತು ಅಸಿಂಬಲ್ಫಾರಸ್ ಲಾಡಾಸೆನ್ಸಿಸ್. ಅಪರೂಪದ ಜೀವಿಗಳಲ್ಲಿ ಒಂದಾದ ಹಿಮಚಿರತೆ ಇಲ್ಲಿ ಮುಕ್ತವಾಗಿ ವಿಹರಿಸುತ್ತದೆ. ಈ ಅಳಿವಿನಂಚಿನಲ್ಲಿರುವ ಕಪ್ಪು ಕುತ್ತಿಗೆಯ ಮ್ಯಾಗ್ಪಿ, ಗುಬ್ಬಚ್ಚಿ, ಹೂಪೋ, ರೋಸ್ಫಿಂಚ್ಗಳು ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳು, ರೆಡ್-ಬಿಲ್ಡ್ ಚೌಫ್ಸ್, ಈಸ್ಟರ್ನ್ ಚಿಫ್ಚಾಫ್, ಕಾಮನ್ ಸ್ಯಾಂಡ್‌ಪೈಪರ್, ಕಾಮನ್ ಪೆಜಿಯನ್ ಮತ್ತು ಯುರೋಪಿಯನ್ ಗೋಲ್ಡ್ ಫಿಂಚ್‌ಗಳು ಬೇಸಿಗೆಯಲ್ಲಿ ಸಾಮಾನ್ಯ ದೃಶ್ಯವಾಗಿದೆ. ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಎರಡು ಜಿಲ್ಲೆಗಳಲ್ಲಿ ಕಾರ್ಗಿಲ್ ಜಿಲ್ಲೆ ಒಂದಾಗಿದೆ. ೨೦೧೯ ರಲ್ಲಿ ಭಾರತದ ಸಂಸತ್ತು ಕಾರ್ಗಿಲ್‌ನ್ನು ಲಡಾಖ್‌ನ ಹೊಸ ಕೇಂದ್ರಾಡಳಿತ ಪ್ರದೇಶದ ಜಿಲ್ಲೆಯನ್ನಾಗಿ ಮಾಡುವ ನಿಬಂಧನೆಗಳನ್ನು ಒಳಗೊಂಡಿರುವ ಕಾಯಿದೆಯನ್ನು ಅಂಗೀಕರಿಸಿತು. ಇದು ಉತ್ತರ-ದಕ್ಷಿಣ ದಿಕ್ಕಿನಲ್ಲಿ ಲಡಾಖ್‌ನ ಸಂಪೂರ್ಣ ಉದ್ದವನ್ನು ವ್ಯಾಪಿಸಿದ್ದು, ಪಶ್ಚಿಮಕ್ಕೆ ಜಮ್ಮು ಮತ್ತು ಕಾಶ್ಮೀರ, ಪೂರ್ವಕ್ಕೆ ಲೇಹ್ ಜಿಲ್ಲೆ, ಉತ್ತರಕ್ಕೆ ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ದಕ್ಷಿಣಕ್ಕೆ ಹಿಮಾಚಲ ಪ್ರದೇಶ ಪಾಕಿಸ್ಥಾನದ ಆಡಳಿತ ಪ್ರದೇಶವಿದೆ. ಪುರಿಗ್ ಮತ್ತು ಝನ್ಸ್ಕರ್ ಎಂದು ಕರೆಯಲ್ಪಡುವ ಎರಡು ಐತಿಹಾಸಿಕ ಪ್ರದೇಶಗಳನ್ನು ಒಳಗೊಳ್ಳುವ ಈ ಜಿಲ್ಲೆಯು ಗ್ರೇಟ್ ಹಿಮಾಲಯ ಶ್ರೇಣಿಯ ವಾಯುವ್ಯದಲ್ಲಿದೆ. ಕಾರ್ಗಿಲ್‌ನ ಬಹುಪಾಲು ಜನರು ನದಿ ಕಣಿವೆಗಳಲ್ಲಿ ವಾಸಿಸುತ್ತಾರೆ. ಕಾರ್ಗಿಲ್ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ೭೭% ಮುಸ್ಲಿಮರು ಇದ್ದು ಅದರಲ್ಲಿ ೬೫% ಜನರು ಶಿಯಾ ಇಸ್ಲಾಂ ಧರ್ಮವನ್ನು ಅನುಸರಿಸುತ್ತಾರೆ. ಇನ್ನು ಉಳಿದವರು ಬೌದ್ಧ ಮತ್ತು ಹಿಂದೂ ಧರ್ಮದವರಾಗಿದ್ದಾರೆ. ಕಾರ್ಗಿಲ್ ಎಂಬ ಹೆಸರು ಖಾರ್ ಎಂಬ ಪದಗಳಿಂದ ಬಂದಿದೆ ಎಂದು ಹೇಳಲಾಗುತ್ತದೆ. ಖಾರ್ ಅಂದರೆ ಕೋಟೆ, ಮತ್ತು ಆರ್ಕಿಲ್ ಎಂದರೆ "ಕೇಂದ್ರ".
"ಕಾರ್ಗಿಲ್ ಅನೇಕ ಕೋಟೆಗಳ ನಡುವಿನ ಸ್ಥಳವನ್ನು ಸೂಚಿಸುತ್ತದೆ. ಕಾರ್ಗಿಲ್ ಜಿಲ್ಲೆಯ ದಕ್ಷಿಣ ಭಾಗವಾದ ಝನ್ಸ್ಕಾರ್ ಐತಿಹಾಸಿಕವಾಗಿ ಪ್ರತ್ಯೇಕ ಬೌದ್ಧ ಸಾಮ್ರಾಜ್ಯವಾಗಿತ್ತು. ಪುರಿಗ್ ಸುಲ್ತಾನ್ ಖ್ರೀಸುಲ್ತಾನ್ ಚು ಆಳ್ವಿಕೆಯಲ್ಲಿ ಇದನ್ನು ಕಾರ್ಗಿಲ್‌ನೊಂದಿಗೆ ಸಂಯೋಜಿಸಲಾಗಿತು. ಹಾಗಾಗಿ ಹಿಂದೆ ಕಾರ್ಗಿಲ್ ಸುತ್ತಮುತ್ತಲಿನ ಪ್ರದೇಶವನ್ನು ಪುರಿಗ್ ಎಂದು ಕರೆಯಲಾಗುತ್ತಿತ್ತು. ಹಿಂದಿನ ಟಿಬೆಟಿಯನ್ ಸಂಪರ್ಕವು ಕಾರ್ಗಿಲ್ ಮತ್ತು ಲೇಹ್ ಜನರ ಮೇಲೆ ಆಳವಾದ ಪ್ರಭಾವವನ್ನು ಬೀರಿದೆಯಾದರೂ, ಶಿಯಾ ಇಸ್ಲಾಂನ ಹರಡುವಿಕೆಯ ನಂತರ ಕಾರ್ಗಿಲ್ ಜನರು ಪರ್ಷಿಯನ್ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ಪರ್ಷಿಯನ್ ಪದಗಳು ಮತ್ತು ಪದಗುಚ್ಛಗಳ ಕಟ್ಟು ನಿಟ್ಟಾದ ಬಳಕೆಯಿಂದ ಇದು ಸ್ಪಷ್ಟವಾಗಿದೆ. ಸ್ಥಳೀಯ ಲಡಾಕಿಗಳು ನಜಾಫ್‌ನಲ್ಲಿರುವ ಸೆಮಿ ನರಿಗಳಲ್ಲಿ ಉನ್ನತ ಇಸ್ಲಾಮಿಕ್ ಅಧ್ಯಯನ ಗಳಿಗೆ ಹೋಗುತ್ತಾರೆ.
ಮದುವೆಯಂತಹ ಸಾಮಾಜಿಕ ಸಮಾರಂಭಗಳು ಮುಸ್ಲಿಮರು ಮತ್ತು ಬೌದ್ಧರಿಗೆ ಸಾಮಾನ್ಯವಾದ ಅನೇಕ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಇನ್ನೂ ಇಲ್ಲಿ ಕಾಣಬಹುದು. ಲಡಾಖ್‌ನ ಎರ ಡು ಜಿಲ್ಲೆಗಳಲ್ಲಿ, ಕಾರ್ಗಿಲ್ ಹೆಚ್ಚು ಮಿಶ್ರ ಜನಾಂಗೀಯ ಜನಸಂಖ್ಯೆಯನ್ನು ಹೊಂದಿದೆ ಮತ್ತು ಆದ್ದರಿಂದ ಲೇಹ್‌ಗೆ ಹೋಲಿಸಿದರೆ ಕಾರ್ಗಿಲ್‌ನಲ್ಲಿ ಹೆಚ್ಚು ಪ್ರಾದೇಶಿಕ ಉಪಭಾಷೆಗಳನ್ನು ಮಾತನಾಡುತ್ತಾರೆ. ಬಾಲ್ಟಿ ಗಜಲ್ ಎಂದು ಕರೆಯಲ್ಪಡುವ ಸ್ಥಳೀಯ ಜಾನಪದ ಹಾಡುಗಳು ಇಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಆಕರ್ಷಕ ನೈಸರ್ಗಿಕ ಮತ್ತು ಶ್ರೀಮಂತ ಸಾಂಸ್ಕೃತಿಕ ಸಂಪನ್ಮೂಲಗಳ ಹೊರತಾಗಿಯೂ ಪ್ರವಾಸೋದ್ಯಮವು ಇನ್ನೂ ಅಭಿವೃದ್ಧಿ ಹೊಂದಿಲ್ಲ.