image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮೇಘಾಲಯ

ಮೇಘಾಲಯ

ದೇವರು ನಮಗೆ ಕರುಣಿಸಿದ ಈ ಪ್ರಕೃತಿಯ ವಿಸ್ಮಯಗಳನ್ನು ಬಣ್ಣಿಸಲು ಅಸಾದ್ಯ. ನಮ್ಮ ಅಕ್ಕ ಪಕ್ಕದಲ್ಲಿ ನಮಗೆ ಕಾಣುವ ಗಿಡ, ಮರಗಳು, ಹೂವುಗಳು, ನದಿ, ತೊರೆಗಳು, ಪ್ರಾಣಿ ಪಕ್ಷಿಗಳು, ಕಣಿವೆಗಳು, ಸಾಗರಗಳು, ಪರ್ವತಗಳು, ಎಲ್ಲವೂ ಈ ಪ್ರಕೃತಿಯಲ್ಲಿ ನಮ್ಮೊಡನೆ ನಮ್ಮ ಉಸಿರಿನೊಡನೆ ಬೆರೆತಿದೆ ಎಂದರೆ ತಪ್ಪಾಗಲಾರದು, ನಮಗೆ ಈ ಜೀವನದ ಜೊತೆ ಪರಿಸರವನ್ನು ಉಡುಗೊರೆಯಾಗಿ ನೀಡಿರುವ ಆ ದೇವನಿಗೆ ಅದೆಷ್ಟು ವಂದಿಸಿದರೂ ಸಾಲದು. ಭಾರತದ ಮೋಡಗಳ ಮೂಲಸ್ಥಾನ ಅಂದರೆ ಮೇಘಾಲಯ ರಾಜ್ಯದ ಮೂರನೆಯ ಒಂದು ಭಾಗವು ಕಾಡುಪ್ರದೇಶವಾಗಿದೆ. ಆಸ್ಸಾಂ ರಾಜ್ಯದ ಮೂರು ಜಿಲ್ಲೆಗಳಾದ ಖಾಸಿ ಹಿಲ್ಸ್, ಜೈನ್ ತಿಯಾಗಳ ಹಿಲ್ಸ್, ಹಾಗೂ ಗಾರೊ ಹಿಲ್ಸ್ ಜಿಲ್ಲೆಗಳನ್ನು ಜನವರಿ 1972ರಲ್ಲಿ ಬೇರ್ಪಡಿಸುವುದರ ಮೂಲಕ ಮೇಘಾಲಯ ರಾಜ್ಯವನ್ನು ಸ್ಥಾಪಿಸಲಾಯಿತು. ಇದರ ಬೆಟ್ಟ-ಗುಡ್ಡ ಕಾಡುಗಳು, ಉತ್ತರ ಹಾಗೂ ದಕ್ಷಿಣದಲ್ಲಿರುವ ತಗ್ಗುಪ್ರದೇಶ ಉಷ್ಣವಲಯ ಕಾಡುಗಳಿಗಿಂತಲೂ ಭಿನ್ನವಾಗಿವೆ.

ಮೇಘಾಲಯದ ಕಾಡುಗಳು ಸಸ್ತನಿ ಹಾಗೂ ಪಕ್ಷಿವರ್ಗ, ಪ್ರಾಣಿಗಳ ಹಾಗೂ ಸಸ್ಯಗಳ ಜೀವ ವೈವಿಧ್ಯಕ್ಕೆ ಖ್ಯಾತಿಯಾಗಿದೆ. ಪೂರ್ಣಪ್ರಮಾಣದ ರಾಜ್ಯವಾಗುವ ಮುಂಚೆ ಖಾಸಿ, ಗಾರೊ ಮತ್ತ್ತು ಜೈನ್ ತಿಯಾ ಬುಟಕಟ್ಟು ಜನಾಂಗಗಳು ತಮ್ಮದೇ ಆದ ಸಾಮ್ರಾಜ್ಯಗಳನ್ನು ಹೊಂದಿದ್ದವು. ಮೇಘಾಲಯದ ಜನಸಂಖ್ಯೆಯಲ್ಲಿ  ಬುಡಕಟ್ಟು ಜನಾಂಗದವರದ್ದೇ ಬಹುಪಾಲು ಆಗಿದೆ. ಖಾಸಿ ಜನಸಮೂಹ ಅತಿದೊಡ್ಡ ಗುಂಪಾಗಿದೆ. ನಂತರ ಗಾರೊ ಸಮುದಾಯ. ಬ್ರಿಟಿಷರು ಬೆಟ್ಟ-ಗುಡ್ಡದ ಜನಾಂಗದವರು ಎಂದು ಕರೆಯಲಾಗುತ್ತಿದ್ದ ಗುಂಪುಗಳಲ್ಲಿ ಜೈನ್ ತಿಯಾರು, ಕೊಚ್, ಹಜೋಂಗ್, ದಿಮಾಸಾ, ಕುಕಿ, ಲಖರ್, ಮಿಕಿರ್, ರಭಾ ಮತ್ತು ನೇಪಾಳ ಸೇರಿದಂತೆ ಇತರೆ ಬುಡಕಟ್ಟು ಗುಂಪುಗಳೂ ಸಹ ಮೇಘಾಲಯದಲ್ಲಿ ವಾಸಿಸುತ್ತವೆ. ಪೂರ್ವದ ಸ್ಕಾಟ್ಲೆಂಡ್ ಎಂದು ಕರೆಯಲಾಗುವ ಶಿಲ್ಲೊಂಗನಿAದ ಸುಮಾರು 50 ಕಿಲೋ ಮೀಟರ್ ದಕ್ಷಿಣಕ್ಕೆ ಹೋದರೆ ಚೀರಾಪುಂಜಿ ಊರು ಸಿಗುತ್ತದೆ. ಈ ಚಿರಾಪುಂಜಿಯಿAದ 12 ಕಿಲೋಮೀಟರ್ ದೂರದಲ್ಲಿ ಥಾಂಗ್‌ಖ ರಂಗ್ ಉದ್ಯಾನದೊಂದಿಗೆ ಇರುವ ಕಿನ್ರಮ್ ಜಲಪಾತವು ಭಾರತದಲ್ಲಿನ 7ನೇ ಅತಿ ಎತ್ತರದ ಜಲಪಾತವಾಗಿದ್ದು,305 ಮೀಟರ್ ಎತ್ತರದಿಂದ ಧುಮುಕುತ್ತದೆ.

ಈ ಪ್ರದೇಶದಲ್ಲಿ ಖಾಸಿ ಜನಾಂಗದವರು ವಾಸಿಸುತ್ತಿದ್ದು, ಖಾಸಿಗಳ ಭಾಷೆ ಖಾಸಿ, ಹಾಗಾಗಿ ಇವರು ಈ ಪ್ರದೇಶವನ್ನು ಅವರ ಭಾಷೆಯಲ್ಲಿ ‘ರಿ ಖಾಸಿ’ ಎನ್ನುತ್ತಾರೆ. ಎ ಎಂದರೆ ದೇಶ ಅಥವಾ ನಾಡು ಎಂದರ್ಥ. ಚೀರಾಪುಂಜಿಯ ಸುತ್ತಮುತ್ತಲಿನ ಪ್ರದೇಶವನ್ನು ಸ್ಥಳೀಯ ಭಾಷೆಯಲ್ಲಿ ಸೋಹ್ರ ಎಂದು ಕರೆಯುತ್ತಾರೆ. ಮೊದಲಿಗೆ ಚೀರಾಪುಂಜಿ ಅತಿ ಹೆಚ್ಚು ಮಳೆ ಬೀಳುವ ಊರಾಗಿತ್ತು. ಇತ್ತಿಚಿನ ದಿನಗಳಲ್ಲಿ ಚೀರಾಪುಂಜಿಯ ಹತ್ತಿರದಲ್ಲೇ ಇರುವ ಮಾವ ಸಿನ್ ರಾಮ್‌ನಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದೆ. ಬಾಂಗ್ಲಾದೇಶದ ಸಮತಟ್ಟಾದ ಬಯಲು ಸೀಮೆಯಿಂದ ಖಾಸಿ ಬೆಟ್ಟಗಳು ಪ್ರಾರಂಭ ವಾಗುತ್ತವೆ. ಸಮುದ್ರ ಮಟ್ಟದಿಂದ ಸುಮಾರು 4000- 6000 ಅಡಿ ಎತ್ತರದಲ್ಲಿದೆ. ಆದ್ದರಿಂದ ಮೋಡಗಳಿಗೆ ಧಿಡಿರನೆ ಎದುರಾಗುವ ಖಾಸಿ ಬೆಟ್ಟಗಳು ಮೋಡಗಳು ಕರಗಿ ಮಳೆಯಾಗುವಂತೆ ಮಾಡುತ್ತದೆ. ಆದುದರಿಂದಲೇ ಈ ಪ್ರದೇಶ ಅತಿ ಹೆಚ್ಚು ಮಳೆಯಾಗುತ್ತದೆ. ಇದರ ಪರಿಣಾಮವಾಗಿ ಶಿಲ್ಲಾಂಗ್‌ನಿAದ ಸೋಹ್ರ ದವೆರೆಗೆ ಬಹಳಷ್ಟು ರಮಣೀಯ ಜಲಪಾತ ಗಳು ಕಾಣಸಿಗುತ್ತವೆ.

ಇಡೀ ಭಾರತದಲ್ಲೇ ನಗರದ ಮಧ್ಯೆ ಜಲಪಾತಗಳಿರುವ ರಾಜಧಾನಿ ಶಿಲ್ಲಾಂಗ್ ಮಾತ್ರ. ಬ್ರಿಟಿಷ್ ಮಹಿಳೆಯರು ತೊಡುವ ಸ್ಕರ್ಟ್ನ ಆಕಾರದಲ್ಲಿ ನೀರು ಧುಮ್ಮಿಕ್ಕುವ ಕ್ರಿನೋಲಿನ್ ಜಲಪಾತ ಹಾಗು ಈಗಲ್ ಜಲಪಾತ ಶಿಲ್ಲಾಂಗ್‌ನ ಮಧ್ಯಭಾಗದಲ್ಲಿ ಇದೆ. ಎಲಿಫೆಂಟ್ ಫಾಲ್ಸ್, ಸ್ವೀಟ್ ಫಾಲ್ಸ್ಗಳು ಶಿಲ್ಲಾಂಗ್‌ನ ಹೊರಭಾಗದಲ್ಲಿ ಕಂಡು ಬರುತ್ತದೆ. ಇನ್ನೂ ಶಿಲ್ಲಾಂಗ್ ಬಿಟ್ಟು ಕಾಬಾ, ಡೆನ್ ತ್ಲೆನ್, ನೋಖಾಲಿಕೈ, ಕಿನ್ರೆಮ್, ಸೆವೆನ್ ಸಿಸ್ಟರ್ಸ್ ಫಾಲ್ಸ್, ಕ್ರಾಂಗ್ ಸುರಿ ಮತ್ತು ಇನ್ನೂ ಅನೇಕ ಜಲಧಾರೆಗಳು ಕಾಣ ಸಿಗುತ್ತದೆ. ಇನ್ನೊಂದು ವಿಶೇಷವೆಂದರೆ ಇಲ್ಲಿಯ ಪ್ರತಿ ಜಲಪಾತಕ್ಕೂ ಅದರದೇ ಆದ ಸ್ಥಳಿಯ ಕಥೆಗಳಿವೆ.

ಸದಾ ಬೀಳುವ ಸಮೃದ್ಧ ಮಳೆಯಿಂದಾಗಿ ದಟ್ಟವಾಗಿ ಬೆಳೆದಿರುವ ಕಾಡು ನೋಡಲು ನಯನ ಮನೋಹರವಾಗಿದೆ. ಆದರೂ ಈ ಬೆಟ್ಟ ಗುಡ್ಡಗಳಲ್ಲಿ ಮಳೆಯ ಜೊತೆ ಬದುಕುತ್ತಿರುವ ಖಾಸಿಗಳ ಜೀವನ ಶೈಲಿಯನ್ನು ನೋಡಿದರೆ ಅಚ್ಚರಿಯಾಗುತ್ತದೆ. ಸಾಂಸ್ಕೃತಿಕ ಪುರಾವೆಗಳ ಪ್ರಕಾರ ಇವರು ಕಾಂಬೋಡಿಯ ದೇಶದಿದಂದ ಬಂದಿದ್ದಾರೆ ಎನ್ನಲಾಗುತ್ತದೆ. ಖಾಸಿಗಳು ತಮ್ಮ ಸುತ್ತ ಇರುವ ಕಾಡನ್ನು ಬಹುತೇಕವಾಗಿ ದೇವರ ಕಾಡೆಂದು ಪರಿಗಣಿಸುತ್ತಾರೆ. ಹಾಗಾಗಿ iÀiÁವುದೇ ಮರಗಳನ್ನು ಕಡಿಯುವುದಿಲ್ಲ. ಮರದಿಂದ ಬಿದ್ದ ಹಣ್ಣುಗಳನ್ನು ತಿನ್ನುತ್ತಾರೆ. ಕೆಳಗೆ ಬಿದ್ದ ರೆಂಬೆ ಕೊಂಬೆಗಳನ್ನು ಉರುವಲಾಗಿ ಬಳಸುತ್ತಾರೆ.

Category
ಕರಾವಳಿ ತರಂಗಿಣಿ