image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕುಮುದ್ವತಿ

ಕುಮುದ್ವತಿ

ಪ್ರಕೃತಿ ನಮಗೆ ಹಲವಾರು ಉಡುಗೊರೆಗಳನ್ನು ಕೊಟ್ಟಿದೆ ಅದರಲ್ಲಿ ನದಿಗಳು ಕೂಡ ಒಂದು. ದೊಡ್ಡ ಅಥವ ಚಿಕ್ಕ ನದಿಗಳೇ ಆದರೂ ನದಿಗಳ ಉಗಮ ಸ್ಥಳ ಯಾವಾಗಲೂ ಬೆಟ್ಟ ಗುಡ್ಡಗಳೇ ಆಗಿವೆ. ಅಂತಹ ಬೆಟ್ಟ ಗುಡ್ಡಗಳಲ್ಲಿ ಚಿಕ್ಕ ತೊರೆಗಳ ರೀತಿಯಾಗಿ  ಉಗಮಿಸುವ ನದಿಗಳು ಮುಂದೆ ಬ್ರಹಾದಾಕಾರವಾಗಿ ಸಾವಿರಾರು ಕಿ.ಮಿ. ಹರಿಯುವ ನದಿಗಳನ್ನೂ ಕೂಡ ನಾವು ನೋಡಿದ್ದೇವೆ.  ಶಿವಗಂಗೆ ಬೆಟ್ಟದ ಒಳಕಲ್ಲು ತೀರ್ಥ ಮತ್ತು ಕುಂಭತೀರ್ಥ ಎಂಬ ನೀರಿನ ಚಿಲುಮೆಗಳೇ ಕುಮುದ್ವತಿಯ ಉಗಮ ಸ್ಥಾನಗಳು. ಶಿವಗಂಗೆ ಒಂದು ಕಪ್ಪು ಗ್ರನೈಟ್ ಬೆಟ್ಟ ಇದು ಸಮುದ್ರ ಮಟ್ಟದಿಂದ ೧೩೮೦ ಮೀಟರ್ ಎತ್ತರದಲ್ಲಿ ಇದೆ. ಇದು ಬೆಂಗಳೂರು ನಗರದಿಂದ 54 ಕಿಮೀ ದೂರದಲ್ಲಿರುವ ಕರ್ನಾಟಕದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದು.  ಬೆಟ್ಟದ ಮೇಲೆ ಗಂಗಾಧರೇಶ್ವರ ದೇವಾಲಯವಿದೆ. ಬೆಟ್ಟದ ಪ್ರಾರಂಭದಲ್ಲಿ ಶಿವನ ದೇವಾಲಯವಿದೆ. ಇಲ್ಲಿ ಶಿವ ಲಿಂಗದ ಮೇಲೆ ತುಪ್ಪವನ್ನು ಹಾಕಿದರೆ ಬೆಣ್ಣೆಯಾಗಿ ಪರಿವರ್ತನೆ ಆಗುತ್ತದೆ ಎಂದು ಪ್ರತೀತಿ ಇದ್ದು, ಈ ಕ್ಷೇತ್ರವನ್ನು "ದಕ್ಷಿಣ ಕಾಶಿ" ಎಂದೂ ಕರೆಯುತ್ತಾರೆ. ಶಿವಗಂಗೆಯಿAದ 11.25 ಕಿ.ಮೀ. ದೂರ ಈಶಾನ್ಯ ದಿಕ್ಕಿನತ್ತ ಹರಿದು ದೇವರಾಯನದುರ್ಗ ಸೇರುವ ಈ ನದಿ, ಅಲ್ಲಿಂದ ದಕ್ಷಿಣಾಭಿಮುಖವಾಗಿ 31.7 ಕಿ.ಮೀ. ದೂರದ ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಸೇರುತ್ತದೆ. ತನ್ನ ೪೩ ಕಿ.ಮೀ. ಉದ್ದದ ಹಾದಿಯಲ್ಲಿ  ಕುಮುದ್ವತಿ 378 ಚದರ ಕಿ.ಮೀ. ವಿಸ್ತೀರ್ಣದ ಜಲಾಯನ ಪ್ರದೇಶವನ್ನು ಸೃಷ್ಟಿಸಿದೆ. ಒಟ್ಟಾರೆ 72 ಕಿರು ಜಲಾನಯನಗಳ ಸಂಗಮದಿAದ ಈ ಪ್ರದೇಶ ಸೃಷ್ಟಿಯಾಗಿದೆ. ಮಹದೇವಪುರ, ಕೆಂಪಹಳ್ಳಿ, ಕಾವಲಪಾಳ್ಯ, ಹೇಮಾಪುರ, ಗುಂಡೇನಹಳ್ಳಿ, ಗಂಗಭೈರಪ್ಪನಪಾಳ್ಯ, ತ್ಯಾಮಗೊಂಡ್ಲು, ತೊರೆಹೊಸಪಾಳ್ಯ, ತೆಪ್ಪದಬೇಗೂರು, ತಾವರೆಕೆರೆ, ಶ್ರೀನಿವಾಸಪುರ, ಪಲ್ಲರಹಳ್ಳಿ, ಮೊಂಡಿಗೆರೆ, ಮಾಕನಕುಪ್ಪೆ ಈ ನದಿಯ ಮುಖ್ಯ ಜಲಾನಯನ ಪ್ರದೇಶಗಳಾಗಿವೆ. ಕುಮುದ್ವತಿ ನದಿ ಪುನಶ್ಚೇತನಕ್ಕಾಗಿ ಹಲವಾರು ಸಂಘಸAಸ್ಥೆಗಳು ಶ್ರಮಿಸುತ್ತಿದೆ.

Category
ಕರಾವಳಿ ತರಂಗಿಣಿ