image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಹಾನದಿ

ಮಹಾನದಿ

ಭಾರತ ಎನ್ನುವ ಈ ಪುಣ್ಯ ಭೂಮಿಯಲ್ಲಿ ಪ್ರಕೃತಿ ನಮಗೆ ನೀಡಿದ ವರದಾನವೆಂದರೆ ಅದುವೇ ನದಿಗಳು. ಇಂತಹ ನದಿಗಳಿಗೆ ನದಿಗಳಿಗೆ ಪೂಜ್ಯನೀಯ ಸ್ಥಾನ. ಇಲ್ಲಿರುವ ಎಲ್ಲಾ ನದಿಗಳು ಒಂದಿಲ್ಲೊಂದು ಪೌರಾಣಿಕ ಹಿನ್ನಲೆಯನ್ನು ಹೊಂದಿದೆ. ಅಂತಹ ನದಿಗಳು ಜನರ ಬಾಳನ್ನು ಹಸನಾಗಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಇಂತಹ ನದಿಗಳಲ್ಲಿ ಮಹಾನದಿಯು ಒಂದು. ಮಹಾನದಿ ಭಾರತದ ಛತ್ತೀಸ್‌ಗಢ ರಾಜ್ಯದ ಉನ್ನತಪ್ರಾಂತ್ರ‍್ಯ ರಾಯ್ ಪುರ ಜಿಲ್ಲೆಗೆ ಸೇರಿದ ಸಿಂಹಾವ ಎಂಬಲ್ಲಿ ಉಗಮಿಸುತ್ತದೆ. ಮುಂದೆ  ಝಾರ್ಖಂಡ್ ಮತ್ತು ಒಡಿಶಾ ರಾಜ್ಯದ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಮಹಾನದಿಯ ಉದ್ದ ಸುಮಾರು 760 ಕಿ.ಮೀ.ಗಳು. ಭಾರತದ ದೊಡ್ಡನದಿಗಳ ಪೈಕಿ ಒಂದಾದ ಮಹಾನದಿ ಮತ್ತು ಅದರ ಉಪನದಿಗಳ ದಂಡೆಯ ಮೇಲೆ  ಛತ್ತೀಸ್‌ಗಢ ರಾಜ್ಯದ ಮದ್ಯಭಾಗವಿದೆ. ಬಹಳ ಫಲವತ್ತಾದ ಈ ಪ್ರದೇಶದಲ್ಲಿ ಭತ್ತದ ಕೃಷಿ ಹುಲುಸಾಗಿ ನಡೆಯುತ್ತದೆ. ಮಹಾನದಿಯ ಮೇಲ್ದಂಡೆಯು ನರ್ಮದಾನದಿಯ ಮೇಲ್ದಂಡೆಯಿಂದ ಪಶ್ಚಿಮದ ಭಾಗದಲ್ಲಿ ಮಾಯ್ಕಲ್ ಬೆಟ್ಟಗಳಿಂದ ಬೇರ್ಪಡಿಸಲ್ಪಟ್ಟಿದೆ ಹಾಗೂ ಪೂರ್ವದ ಒಡಿಶಾದ ಸಮತಲ ಪ್ರದೇಶಗಳು ಬೆಟ್ಟಗಳ ಸಾಲುಗಳಿಂದ ಬೇರ್ಪಡಿಸಲ್ಪಟ್ಟಿವೆ. ರಾಜ್ಯದ ದಕ್ಷಿಣ ಭಾಗವು ಡೆಕನ್ ಪ್ರಸ್ಥಭೂಮಿಯಲ್ಲಿದ್ದು,  ಹಸ್ದೋ ನದಿಯು ಈ ಮಹಾನದಿಯ ಉಪನದಿ.    ಮಹಾನದಿಗೆ ಅಡ್ಡಲಾಗಿ ಸಂಬಾಲ್ಪುರದ ಬಳಿ ಜಗತ್ತಿನ ಅತ್ಯಂತ ದೊಡ್ಡ ಮಣ್ಣುಗಾರೆಯ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಈ ಆಣೆಕಟ್ಟಿಗೆ  ಹಿರಾಕುಡ್ ಆಣೆಕಟ್ಟು ಎಂಬ ಹೆಸರು. ಮಹಾನದಿ ಕಣಿವೆಯ ಫಲವತ್ತಾದ ನೆಲದಲ್ಲಿ ಭತ್ತವನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ಮಹಾನದಿಯು ಬ್ರಾಹ್ಮಣಿ ನದಿಯೊಂದಿಗೆ ಸಂಗಮಿಸಿ ಬಂಗಾಳ ಕೊಲ್ಲಿಯನ್ನು ಸೇರುವೆಡೆಯಲ್ಲಿ ಬೃಹತ್ ಮುಖಜಭೂಮಿಯನ್ನು ಸೃಷ್ಟಿಸಿದೆ. ಈ ಮುಖಜಭೂಮಿಯಲ್ಲಿ ಜಂಬೂದ್ವೀಪದ ಅತ್ಯಂತ ವಿಸ್ತಾರವಾದ ಮ್ಯಾಂಗ್ರೋವ್ ಅರಣ್ಯಗಳಿವೆ. ಅಲ್ಲದೆ ಈ ಪ್ರದೇಶವು ಪೂರ್ವ ಭಾರತದ ಭತ್ತದ ಕಣಜವೆಂದು ಕರೆಯಲ್ಪಡುವುದು. ರಾಜ್ಯದ ಉತ್ತರಭಾಗವು ಮಹತ್ತರವಾದ ಸಿಂಧು-ಗAಗಾ ಸಮತಟ್ಟುಪ್ರದೇಶದ ತುದಿಯಲ್ಲಿದೆ. ರೈಹಾಂಡ್ ನದಿ ಎಂಬ ಗಂಗಾನದಿಯ ಉಪನದಿಯು ಈ ಸ್ಥಳದಲ್ಲಿ ಹರಿಯುತ್ತದೆ. ಸತ್ಪುರ ಬೆಟ್ಟಗಳ ಪೂರ್ವದ ತುದಿ ಮತ್ತು ಛೋಟಾ ನಾಗ್ ಪುರ್ ಪ್ರಸ್ಥಭೂಮಿಯ ಪಶ್ಚಿಮ ತುದಿಗಳು ಪೂರ್ವ-ಪಶ್ಚಿಮ ಭಾಗದಲ್ಲಿ ಬೆಟ್ಟಗಳ ಸರಮಾಲೆಯನ್ನೇ ಉಂಟುಮಾಡಿ ಮಹಾನದಿ ನದಿಯ ಪ್ರಾಂತ್ಯವನ್ನು ಸಿಂಧು-ಗಂಗಾ ಸಮತಟ್ಟು ಪ್ರದೇಶದಿಂದ ಬೇರ್ಪಡಿಸುತ್ತದೆ.

Category
ಕರಾವಳಿ ತರಂಗಿಣಿ