image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಾವೇರಿ

ಕಾವೇರಿ

ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದ ಬ್ರಹ್ಮಗಿರಿ ತಲಕಾವೇರಿಯಲ್ಲಿ ಉಗಮಿಸಿ ಮೈಸೂರು ಜಿಲ್ಲೆಯ ಮೂಲಕ ತಮಿಳುನಾಡಿಗೆ ಹರಿದು ಬಂಗಾಳ ಕೊಲ್ಲಿಯನ್ನು ಸೇರುವ, 'ದಕ್ಷಿಣ ಗಂಗೆ'ಯೆAದು ಪ್ರಸಿದ್ಧಿ ಪಡೆದ ಕರ್ನಾಟಕದ ಮಹಾನದಿ ಕಾವೇರಿ. ತುಲಾಮಾಸದಲ್ಲಿ ಕಾವೇರಿ ಸ್ನಾನ ಮಾಡಿದರೆ ಸಕಲ ಪಾಪಗಳೂ ನಾಶವಾಗುವುದೆಂಬ ನಂಬಿಕೆಯಿದೆ. ಕಾವೇರಿಯು ಪುರಾಣಗಳಲ್ಲಿ ವರ್ಣಿಸಲಾದ ಸಪ್ತ ಪುಣ್ಯ ನದಿಗಳಲ್ಲಿ ಒಂದು, ಹಾಗೂ ದಕ್ಷಿಣದಲ್ಲಿರುವ ಏಕೈಕ ಮಹಾ ನದಿ. ಕರ್ನಾಟಕದ ಕೊಡಗಿನ ತಲಕಾವೇರಿಯಿಂದ ಇದು ಬಂಗಾಳಕೊಲ್ಲಿಯನ್ನು ಪ್ರವೇಶಿಸಲು ಆಗ್ನೇಯಕ್ಕೆ ಸುಮಾರು ೮೦೦ ಕಿಲೋಮೀಟರ್ ಹರಿಯುತ್ತದೆ. ಚಾಮರಾಜನಗರ ಜಿಲ್ಲೆಯಲ್ಲಿ ಶಿವನಸಮುದ್ರ ದ್ವೀಪವನ್ನು ರೂಪಿಸುತ್ತದೆ. ಇದರ ಎರಡೂ ಬದಿಯಲ್ಲಿ ಸುಮಾರು ೧೦೦ ಮೀಟರ್ ಇಳಿಯುವ ಸುಂದರವಾದ ಶಿವನಸಮುದ್ರ ಜಲಪಾತವಿದೆ. ಹರಂಗಿ, ಹೇಮಾವತಿ, ಕಬಿನಿ, ಭವಾನಿ, ಲಕ್ಷ್ಮಣ ತೀರ್ಥ, ನೊಯಾಲ್ ಮತ್ತು ಅರ್ಕಾವತಿ ಸೇರಿದಂತೆ ಹಲವು ಉಪನದಿಗಳಿವೆ. ನದಿ ವ್ಯಾಪಕವಾದ ನೀರಾವರಿ ವ್ಯವಸ್ಥೆಗೆ ಮತ್ತು ಜಲವಿದ್ಯುತ್ ಶಕ್ತಿಗೆ ಮೂಲವಾಗಿದೆ. ಈ ನದಿಯು ಶತಮಾನಗಳಿಂದ ಕೃಷಿಗೆ ಆದಾರವಾಗಿದೆ ಮತ್ತು ಪ್ರಾಚೀನ ಸಾಮ್ರಾಜ್ಯಗಳ ಮತ್ತು ದಕ್ಷಿಣ ಭಾರತದ ಆಧುನಿಕ ನಗರಗಳ ಜೀವನಾಡಿಯಾಗಿ ಕಾರ್ಯನಿರ್ವಹಿಸಿದೆ. ಬ್ರಹ್ಮನ ಮಗಳಾದ ಲೋಪಾಮುದ್ರ ಭೂಲೋಕದಲ್ಲಿ ಲೋಕೊದ್ಧಾರಕ್ಕಾಗಿ ವಾಸಿಸುತಿದ್ದಳು. ಕವೇರನೆಂಬ ಮುನಿಯು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ ಬ್ರಹ್ಮನಿಂದ ವರವಾಗಿ ಲೋಪಾಮುದ್ರ ನದಿಯಾಗಿ ಹರಿಯುವಂತರ ವರವನ್ನು ಪಡೆದನು. ಆಗ ಲೋಪಾಮುದ್ರೆ ಮುನಿಯ ಕಮಂಡಲದಲ್ಲಿ ಪ್ರವೇಶಿಸಿದಳು. ನದಿಯ ಉಗಮಕ್ಕಾಗಿ ಮುನಿಗಳು ಸೂಕ್ತ ಜಾಗದ ಅನ್ವೇಷಣೆಯಲ್ಲಿ ಇರುವುದನ್ನು ತಿಳಿದಿದ್ದ ಬ್ರಾಹ್ಮಣ ರೂಪದಲ್ಲಿದ್ದ ಗಣೇಶ ಇದೇ ಜಾಗ ಸೂಕ್ತವಾಗಿದೆ ಎಂದೆನಿಸಿ ಕಮಂಡಲವನ್ನು ನೆಲದ ಮೇಲೆ ಇಟ್ಟುಬಿಟ್ಟನು. ಅಲ್ಲಿಯೇ ಹಾರಾಡುತ್ತಿದ್ದ ಕಾಗೆಯೊಂದು ಕಮಂಡಲವನ್ನು ತಾಕುವಂತೆ ಕುಳಿತುಕೊಂಡಿತು. ಅಷ್ಟರಲ್ಲಿ ಹಿಂತಿರುಗಿದ ಮುನಿಗಳು ಕಾಗೆಯನ್ನು ನೋಡಿಧಾವಂತದಿAದ ಅದನ್ನು ಓಡಿಸಲು ಪ್ರಯತ್ನಿಸಿದಾಗ ಕಮಂಡಲದ ನೀರು ಚೆಲ್ಲಿತು. ಕಮಂಡಲದ ಜಲವು ಜಲಧಾರೆಯಾಗಿ ನದಿಯಾಗಿ ಹರಿಯಿತು ಎಂಬುದನ್ನು ಪುರಾಣಗಳಲ್ಲಿ ಓದಬಹುದು. ತಲಕಾವೇರಿಯ ಸ್ಥಳವನ್ನು ಈಗಲೂ ಪವಿತ್ರವೆಂದು ಪರಿಗಣಿಸಲಾಗುತ್ತಿದ್ದು, ಇಲ್ಲಿ ನಿತ್ಯ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಮಹಾಭಾರತದ ಆದಿಪರ್ವದಲ್ಲಿ ಅರ್ಜುನನು ತೀರ್ಥಯಾತ್ರೆಗೆ ಹೋಗಿದ್ದಾಗ ಈ ನದಿಯಲ್ಲಿ ಸ್ನಾನ ಮಾಡಿದನೆಂಬ ಉಲ್ಲೇಖವಿದೆ. ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವ ದಿನವನ್ನು ತುಲಾ ಸಂಕ್ರಮಣವೆAದು ಕರೆಯುತ್ತಾರೆ ಈ ಪುಣ್ಯ ದಿನದಂದು ಗಂಗೆಯೇ ಮೊದಲಾದ ಆರು ಪವಿತ್ರ ನದಿಗಳು ಕಾವೇರಿಯಲ್ಲಿ ಬಂದು ಸೇರುತ್ತವೆಂಬ ನಂಬಿಕೆಯಿದೆ. ಇದಕ್ಕೆ ಸಾಕ್ಷಿಯೆಂಬAತೆ ಪ್ರತಿ ವರ್ಷವೂ ತುಲಾ ಸಂಕ್ರಮಣದ ದಿನ ನಿರ್ಧಾರಿತ ಲಗ್ನ ಹಾಗೂ ಮುಹೂರ್ತದಲ್ಲಿ ತಲಕಾವೇರಿಯ ಜ್ಯೋತಿ ಮಂಟಪದ ಮುಂದಿರುವ ಕುಂಡದಲ್ಲಿ ನೀರಿನ ಬುಗ್ಗೆ ಮೂರು ಬಾರಿ ಬರುತ್ತದೆ. ಇದನ್ನೆ ತೀರ್ಥೊದ್ಭವವೆಂದು ಕರೆಯಲಾಗುತ್ತದೆ. ಈ ಬುಗ್ಗೆಯಲಿ ಮಿಕ್ಕ ಆರೂ ಪುಣ್ಯ ನದಿಗಳು ಅಂದರೆ ಗಂಗೆ, ಯಮುನೆ, ಗೋದಾವರೀ, ಸರಸ್ವತೀ, ನರ್ಮದೆ ಮತ್ತು ಸಿಂಧು ಅಂತರ್ವಾಹಿನಿಯಾಗಿ ಬಂದು ಕಾವೇರಿಯನ್ನು ಸೇರುತ್ತಾರೆ ಪ್ರತೀತಿಯಿದೆ. ಕೊಡವರಿಗೆ ಕಾವೇರಿಯೇ ಕುಲದೈವ. ಹಾಗಾಗಿ ಅವರಿಗೆ ತೀರ್ಥೊದ್ಭವವು ಸಂಭ್ರಮ ಸಡಗರದಿಂದ ಆಚರಿಸುವ ಪ್ರಮುಖ ಹಬ್ಬ ಹಾಗೂ ಧಾರ್ಮಿಕ ಆಚರಣೆಯಾಗಿದೆ. ತಮಿಳು ನಾಡಿನ ಜನರಲ್ಲಿ ತುಲಾ ಮಾಸದ ಕಾವೇರಿ ಸ್ನಾನವು ಸರ್ವ ಪಾಪಗಳನ್ನು ಪರಿಹಾರ ಮಾಡುತ್ತದೆ ಎಂಬ ನಂಬಿಕೆ ಇರುವುದರಿಂದ, ಇಡೀ ತುಲಾ ಮಾಸದಲ್ಲಿ ಜನರು ಕಾವೇರಿಯ ದಡಗಳಲ್ಲಿರುವ ಪವಿತ್ರ ಸ್ಥಳಗಳಲ್ಲಿ ಸ್ನಾನ ಮಾಡಿ ದೇವತಾ ದರ್ಶನ ಮೊದಲಾದ ಧಾರ್ಮಿಕ ಆಚರಣೆಗಳಲ್ಲಿ ತೊಡಗುತ್ತಾರೆ ತಮಿಳರು ಕಾವೇರಿಯನ್ನು ಪೊನ್ನಿ ಎಂದು ಕರೆಯುತ್ತಾರೆ

Category
ಕರಾವಳಿ ತರಂಗಿಣಿ