ಮಧ್ಯ ಭಾರತದ ಮೈಕಾಲ ಪರ್ವತ ( Maikala range) ಶ್ರೇಣಿ ಮಧ್ಯಪ್ರದೇಶ ರಾಜ್ಯದಲ್ಲಿದೆ. ಇದು ಉತ್ತರ ದಕ್ಷಿಣ ದಿಕ್ಕಿನಲ್ಲಿ ಸಾಗಿ ತ್ರಿಕೋನ ಸಾತ್ಪುರ ಶ್ರೇಣಿಯ ಪೂರ್ವ ನೆಲೆಯನ್ನು ರೂಪಿಸುತ್ತದೆ. ಮೈಕಾಲಾ ಶ್ರೇಣಿಯು ಲ್ಯಾಟರೈಟ್-ಕ್ಯಾಪ್ಡ್, ಫ್ಲಾಟ್-ಟಾಪ್ ಪ್ರಸ್ಥಭೂಮಿಗಳು 2000 ರಿಂದ 3000 ಅಡಿಗಳಷ್ಟು ಎತ್ತರದಲ್ಲಿದೆ. ಸಾತ್ಪುರ ಮತ್ತು ಮೈಕಾಲ ಜಲಾನಯನ ಪ್ರದೇಶವು ಭಾರತದಲ್ಲಿ ಎರಡನೇ ಅತಿ ದೊಡ್ಡದಾಗಿದೆ.
ನರ್ಮದಾ (narmada), ಸನ್, ಪಾಂಡು, ಕನ್ಹರ್, ರಿಹಾಂಡ್, ಬಿಜುಲ್, ಗೋಪಾದ್ ಮತ್ತು ಬನಾಸ್ ನದಿಗಳು ದಕ್ಷಿಣದಿಂದ ಉತ್ತರಕ್ಕೆ ಬಹುತೇಕ ಸಮಾನಾಂತರವಾಗಿ ಹರಿಯುತ್ತವೆ. ಈ ಬಾಗಗಳಲ್ಲಿ ಅಕ್ಕಿ (rice), ಗೋಧಿ, ಗಜ್ಜರಿ, ಜೋಳ, ಬಾರ್ಲಿ, ಕಾಳುಗಳು, ಎಳ್ಳು ಬೀಜಗಳು ಮತ್ತು ಸಾಸಿವೆ (musturd) ಬೀಜಗಳನ್ನು ಬೆಳೆಯಲಾಗುತ್ತದೆ.ಇಲ್ಲಿನ ಆರ್ಥಿಕತೆಯ ಭಾಗವಾಗಿ ಸಿಮೆಂಟ್ ಕೈಗಾರಿಕೆಗಳು, ಸಿರಾಮಿಕ್ಸ್, ಇಟ್ಟಿಗೆಗಳು, ಟೈಲ್ಸ್, ಗಾಜು, ಧರಿಸಿರುವ ಕಲ್ಲು, ಮರದ ದಿಮ್ಮಿ ಮತ್ತು ಶೆಲಾಕ್ ಮುಖ್ಯವಾದುವು. ಇಲ್ಲಿನ ಖನಿಜ ನಿಕ್ಷೇಪಗಳಲ್ಲಿ ಕಲ್ಲಿದ್ದಲು, ಸುಣ್ಣದ ಕಲ್ಲು, ಬಾಕ್ಸೈಟ್, ಕೊರಂಡಮ್, ಡಾಲಮೈಟ್, ಅಮೃತಶಿಲೆ (marble stone), ಸ್ಲೇಟ್ ಮತ್ತು ಮರಳುಗಲ್ಲು ಸೇರಿವೆ. ಇಲ್ಲಿನ ಪ್ರಮುಖ ಜನಾಂಗೀಯ ಗುಂಪುಗಳಲ್ಲಿ ಗೊಂಡರು, ಹಲ್ಬಾಸ್, ಭರೈಸ್, ಬೈಗಾಸ್ ಮತ್ತು ಕೊರ್ಕುಸ್ ಪ್ರಮುಖರು. ಈ ಬಾಗದ ಪ್ರಮುಖ ಪಟ್ಟಣಗಳು ಬಾಲಾಘಾಟ್, ಮಂಡ್ಲಾ, ನೈನ್‌ಪುರ್ ಮತ್ತು ದಿಂಡೋರಿ. ಮಂಡ್ಲಾದಲ್ಲಿರುವ ಕೋಟೆ (ಗೊಂಡ ರಾಜರ ರಾಜಧಾನಿ), ರಾಮನಗರದಲ್ಲಿರುವ ಅರಮನೆ ಮತ್ತು ಕನ್ಹಾ ರಾಷ್ಟ್ರೀಯ ಉದ್ಯಾನವನವು ಪ್ರೇಕ್ಷಣೀಯ ಸ್ಥಳಗಳಾಗಿವೆ. ಕಾನ್ಹಾ ರಾಷ್ಟ್ರೀಯ ಉದ್ಯಾನವನ ಭಾರತದ ಅತ್ಯಂತ ದೊಡ್ಡ ವನ್ಯ ಧಾಮಗಳಲ್ಲೊಂದು. ಇದು ಮಧ್ಯಪ್ರದೇಶದ ಮಂಡ್ಲ ಮತ್ತು ಬಾಲಘಟ ಜಿಲ್ಲೆಗಳಿಗೆ ಸೇರಿದೆ. 1879ರಲ್ಲಿ ಇದನ್ನು ಮೀಸಲು ಅರಣ್ಯ ಎಂದು ಗುರುತಿಸಿದರೆ, 1955ರಲ್ಲಿ ರಾಷ್ಟ್ರೀಯ ಉದ್ಯಾನ ಎಂದು ಘೋಷಿಸಲಾಯಿತು.
ಈ ಉದ್ಯಾನವನವು ವಿನಾಶದ ಅಂಚಿನಲ್ಲಿರುವ ಅನೇಕ ಜೀವಿಗಳ ಆವಾಸ ಸ್ಥಾನವಾಗಿದೆ ಎಂದರೆ ತಪ್ಪಾಗಲಾರದು. ಇಲ್ಲಿ ಪ್ರಮುಖವಾಗಿ ರಾಯಲ್ ಬೆಂಗಾಲ್ ಟೈಗರ್, ಚಿರತೆ, ಸಾಂಬಾರ್, ಕಾಡು ಹಂದಿಗಳು, ಬಾರಸಿಂಗ, ಚುಕ್ಕೆ ಜಿಂಕೆ, ಕರಡಿ, ಗ್ರೇ ಲಂಗೂರ್ ಇನ್ನಿತರ ಪ್ರಾಣಿಗಳು ಸ್ವಚ್ಚಂದವಾಗಿ ಕಾಡಿನಲ್ಲಿ ಅಲೆದಾಡುವುದನ್ನು ನಾವು ನೋಡಬಹುದಾಗಿದೆ. ನಾನಾ ಜಾತಿಯ 300ಕ್ಕೂ ಹೆಚ್ಚು ಬಗೆಯ ಪಕ್ಷಿ ಸಂಕುಲವೇ ಇಲ್ಲಿದೆ. ಸಾಮಾನ್ಯವಾಗಿ ಕಂಡುಬರುವ ಪಕ್ಷಿಗಳೆಂದರೆ ಕಪ್ಪು ಐಬಿಸ್, ಜಾನುವಾರು ಬೆಳ್ಳಕ್ಕಿಗಳು, ಹೂವು-ತಲೆಯ ಗಿಳಿಗಳು, ಕೊಳದ ಹೆರಾನ್ ಗಳು, ಡ್ರೊಂಗೊಗಳು, ಸಾಮಾನ್ಯ ಟೀಲ್, ಕ್ರೆಸ್ಟೆಡ್ ಸರ್ಪ ಹದ್ದು, ಬೂದು ಹಾರ್ನ್ ಬಿಲ್, ಭಾರತೀಯ ರೋಲರ್, ಅಡ್ಜಟಂಟ್ ,ಲಿಟಲ್ ಗ್ರೀಬ್ಸ್, ಶಿಳ್ಳೆ ಟೀಲ್, ಮಿನಿವೆಟ್ಸ್,ಮಲಬಾರ್ ಪೈಡ್ ಹಾರ್ನ್ಬಿಲ್, ಮರಕುಟಿಗಗಳು, ಪಾರಿವಾಳ, ಪ್ಯಾರಡೈಸ್ ಫ್ಲೈಕ್ಯಾಚರ್‌ಗಳು, ಮೈನಾಸ್, ಇಂಡಿಯನ್‌ಪೀಫೌಲ್, ರೆಡ್ ಜಂಗಲ್‌ಫೌಲ್, ರೆಡ್-ವಾಟಲ್ಡ್ ಲ್ಯಾಪ್ ವಿಂಗ್, ಸ್ಟೆಪ್ಪಿ ಹದ್ದು ಬ್ಲೂಬಿಳಿ-ಕಣ್ಣಿನ ಬಜಾರ್ಡ್, ಬಿಳಿ-ಎದೆಯ ಮಿಂಚುಳ್ಳಿ, ಬಿಳಿ-ಬ್ರೋಡ್ ಫ್ಯಾನ್ಟೈಲ್, ವುಡ್ ಸ್ಕ್ರೈಕ್ಸ್, ಮತ್ತು ವಾಬ್ಲರ್ಗಳು, ರಣಹದ್ದುಗಳು ಇನ್ನೂ ಅನೇಕ.
ಕನ್ಹಾ ಹುಲಿ ಸಂರಕ್ಷಿತ ಪ್ರದೇಶವು 10000 ಜಾತಿಯ ಹೂವಿನ ಸಸ್ಯಗಳಿಗೆ ನೆಲೆಯಾಗಿದೆ.ತಗ್ಗುಪ್ರದೇಶದ ಅರಣ್ಯವು ಸಾಲ್ ಮತ್ತು ಇತರ ಮಿಶ್ರ-ಅರಣ್ಯ ಮರಗಳ ಮಿಶ್ರಣವಾಗಿದೆ, ಹುಲ್ಲುಗಾವಲುಗಳಿಂದ ಕೂಡಿದೆ. ಎತ್ತರದ ಕಾಡುಗಳು ಉಷ್ಣವಲಯದ ತೇವ, ಒಣ ಪತನಶೀಲ ವಿಧ ಮತ್ತು ಇಳಿಜಾರುಗಳಲ್ಲಿ ಬಿದಿರಿಗಿಂತ ಸಂಪೂರ್ಣವಾಗಿ ವಿಭಿನ್ನ ಸ್ವಭಾವವನ್ನು ಹೊಂದಿವೆ. ದಟ್ಟವಾದ ಕಾಡಿನಲ್ಲಿ ಗಮನಾರ್ಹವಾದ ‘ಭಾರತೀಯ ಪ್ರೇತ ಮರವನ್ನು’(ಡೇವಿಡಿಯಾ ಇನ್ವೊಲು ಕ್ರಾಟಾ) ಸಹ ಕಾಣಬಹುದು. ಬೈಗಾ ಬುಡಕಟ್ಟು ಮಧ್ಯ ಭಾರತದ ಅರೆ ಅಲೆಮಾರಿ ಬುಡಕಟ್ಟು, ಇವರು ಕಾಡಿನ ಮೇಲೆ ಅವಲಂಬಿತರಾಗಿದ್ದಾರೆ, ಅವರು 1968ರವರೆಗೆ ಕನ್ಹಾ ರಾಷ್ಟ್ರೀಯ ಉದ್ಯಾನವನದೊಳಗೆ ಇದ್ದ 28 ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ನಂತರ ಅವರನ್ನು ಸ್ಥಳಾಂತರಿಸಲಾಯಿತು.
ಸೆಂಟರ್ ಮ್ಯೂಸಿಯಂ, ಮುಕ್ಕಿ ಮತ್ತು ಸೊನ್ಫ್ ಹುಲ್ಲುಗಾವಲುಗಳಿಂದ ಈ ಕಾಡು ಪ್ರಸಿದ್ಧವಾಗಿದೆ. ಇದೇ ಕನ್ಹಾ ಉದ್ಯಾನವನದ ದಟ್ಟ ಕಾಡು ಮತ್ತು ಪರ್ವತಶ್ರೇಣಿಗೆ ಮನಸೋತು ಇಂಗ್ಲೀಷ್‌ನ ಪ್ರಸಿದ್ದ ಕಾದಂಬರಿಕಾರ ರುಡ್ಯರ್ಡ್ ಕಿಪ್ಲಿಂಗ್ ಮಕ್ಕಳ ಜನಪ್ರಿಯ ಪುಸ್ತಕಸ ರಣಿ ‘ಜಂಗಲ್ ಬುಕ್’ (gungle book) ಬರೆದಿದ್ದಾರೆ. ಈಸರಣಿ ಹಲವು ಅರಣ್ಯಕ್ಕೆ ಸಂಭಂಧಪಟ್ಟ ಕತೆಗಳಿಗೆ ಸಾಕ್ಷಿಯಾಗಿದೆ.
✍ ಲಲಿತಶ್ರೀ ಪ್ರೀತಂ ರೈ