ಫೈಯಿoಗ್ ಆಫೀಸರ್ ಸುಧೀರ್ ತ್ಯಾಗಿ 1971 ರ ಸಮಯದಲ್ಲಿ ಫೈಯಿಂಗ್ ಆಫೀಸರ್ ಸುಧೀರ್ ತ್ಯಾಗಿ ಅವರು "ಫ್ಲೇಮಿಂಗ್ ಆರೋಸ್" ಎಂದು ಕರೆಯಲ್ಪಡುವ 27 ಸ್ಕಾಡ್ರನ್‌ನೊಂದಿಗೆ ಸೇವೆ ಸಲ್ಲಿಸುತ್ತಿದ್ದರು. ಹಲ್ವಾರದಿಂದ ಕಾರ್ಯನಿರ್ವಹಿಸುತ್ತಿದ್ದ 27 ಸ್ಕಾಡ್ರನ್ ತನ್ನ ಪಾತ್ರವನ್ನು ಆಳವಾಗಿ ನುಗ್ಗಿ ಹೊಡೆಯುವ ತಂತ್ರಕ್ಕೆ ಒತ್ತು ಕೊಟ್ಟಿತು. ನಂತರ ಹಲ್ವಾರದಿಂದ ಪಠಾಣ್‌ಕೋಟ್‌ಗೆ ಸ್ಥಳಾಂತರವಾಯಿತು. ಡಿಸೆಂಬರ್ 3 ರಂದು ಪಾಕಿಸ್ಥಾನದೊಂದಿಗೆ ಯುದ್ಧ ಪ್ರಾರಂಭವಾದಾಗ, ವಿಂಗ್ ಕಮಾಂಡರ್ ಮಿಯಾನ್ ನರಂಜನ್ ಸಿಂಗ್ ಅವರನ್ನು ಕಮಾಂಡಿoಗ್ ಅಧಿಕಾರಿಯಾಗಿ ಸ್ಕಾಡ್ರನ್‌ನ್ನು ವಿವಿಧ ಆಕ್ರಮಣಕಾರಿ ವಾಯು ಕಾರ್ಯಾಚರಣೆಗಳಿಗೆ ನಿಯೋಜಿಸಲಾಯಿತು. ಫೈಯಿಂಗ್ ಆಫೀಸರ್ ಸುಧೀರ್ ತ್ಯಾಗಿ ಅವರು ಡಿಸೆಂಬರ್ 04 ರಂದು ಕಾರ್ಯಾಚರಣೆಯನ್ನು ಕೈಗೊಳ್ಳಲು ಆಯ್ಕೆಯಾಗಿ ತನ್ನ ಹಂಟರ್‌ನಲ್ಲಿ ಪಠಾಣ್‌ಕೋಟ್‌ನಿಂದ ಕಾರ್ಯಾಚರಣೆಗೆ ಯೋಜಿಸಿದಂತೆ ಹೊರಟರು. “ಮುರಿದ್” ಏರ್‌ಫೀಲ್ಡ್ ಮೇಲೆ ಎರಡು ವಿಮಾನಗಳ ಸ್ಟ್ರೈಕ್ ಕಾರ್ಯಾಚರಣೆಯಲ್ಲಿ ಅವರು ಎರಡನೆಯವರಾಗಿದ್ದರು. ಶತ್ರು ವಾಯುನೆಲೆಯ ಮೇಲೆ ದಾಳಿ ಮಾಡುವಾಗ, ಫೈಯಿಂಗ್ ಆಫೀಸರ್ ಸುಧೀರ್ ತ್ಯಾಗಿ ಅವರು ಶತ್ರು ವಿಮಾನವನ್ನು ಗುರುತಿಸಿ ಅದನ್ನು ಬೆನ್ನತ್ತಿ ದಾಳಿ ಮಾಡಿ ಹೊಡೆದುರುಳಿಸಿದರು. ಶತ್ರು ಮಿರಾಜ್ ಮತ್ತು ಇಬ್ಬರು ಸೇಬರ್‌ಗಳು ಅವರ ಮೇಲೆ ದಾಳಿ ಮಾಡಿದವು. ತನ್ನ ವಿಮಾನ ದಾಳಿಗೊಳಗಾದರೂ ವೀರಾವೇಶದಿಂದ ಹೋರಾಡಿ, ಶತ್ರುಪಾಳಯದಲ್ಲಿ ವಿಮಾನದೊಂದಿಗೆ ಕಣ್ಮರೆಯಾದರು. ಫೈಯಿಂಗ್ ಆಫೀಸರ್ ಸುಧೀರ್ ತ್ಯಾಗಿಯ ಹೆಸರನ್ನು 05 ಡಿಸೆಂಬರ್ 1971 ರಂದು ಪಾಕಿಸ್ಥಾನದ ರೇಡಿಯೊದಲ್ಲಿ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಸಮರೇಂದ್ರ ಕುಂದು ಲೋಕಸಭೆಯಲ್ಲಿ ಮಂಡಿಸಿದ “54 ಸಿಬ್ಬಂದಿ ಕಾಣೆಯಾದವರ” ಅಧಿಕೃತ ಪಟ್ಟಿಯಲ್ಲಿ ಫೈಯಿಂಗ್ ಆಫಿಸರ್ ಸುಧೀರ್ ತ್ಯಾಗಿ ಅವರ ಹೆಸರು ಕಾಣಿಸಿಕೊಂಡಿದೆ. ಫೈಯಿಂಗ್ ಆಫೀಸರ್ ಸುಧೀರ್ ತ್ಯಾಗಿ ಅವರ ತಾಯಿ ಶ್ರೀಮತಿ ಶೋಭಾ ತ್ಯಾಗಿ ಮತ್ತು ಚಿಕ್ಕಪ್ಪ ಶ್ರೀ ನರೇಂದ್ರ ಕೌಶಿಕ್ ಅವರು ಪಾಕಿಸ್ಥಾನಿ ಜೈಲಿನಿಂದ ಸುಧೀರ್ ತ್ಯಾಗಿ ಬಿಡುಗಡೆಗಾಗಿ ಹಲವಾರು ಭಾರಿ ಭಾರತೀಯ ಸರ್ಕಾರದ ವಿವಿಧ ಅಧಿಕಾರಿಗಳನ್ನು ಸಂಪರ್ಕಿಸಿ ನಿರಾಶರಾಗಿದ್ದಾರೆ. ತ್ಯಾಗಿಯವರಿಗೆ 26 ಜನವರಿ 1972 ರಂದು ಅವರ ಅತ್ಯುತ್ತಮ ಶೌರ್ಯ, ಕರ್ತವ್ಯ ನಿಷ್ಠೆ ಮತ್ತು ಅತ್ಯುನ್ನತ ತ್ಯಾಗಕ್ಕಾಗಿ "ವೀರ ಚಕ್ರ" ನೀಡಲಾಯಿತು. ಫೈಯಿಂಗ್ ಆಫೀಸರ್ ಸುಧೀರ್ ತ್ಯಾಗಿ ಅವರು ಉತ್ತರ ಪ್ರದೇಶದ ಘಾಜಿಯಾಬಾದ್ ಜಿಲ್ಲೆಯ ಝಡಿನಾ ಗ್ರಾಮದಲ್ಲಿ ಫೆಬ್ರವರಿ 12 1946 ರಂದು ಜನಿಸಿದರು. ಇವರು ತನ್ನ 21 ನೇ ವಯಸ್ಸಿನಲ್ಲಿ ಭಾರತೀಯ ವಾಯುಪಡೆಗೆ ನಿಯೋಜಿಸಲ್ಪಟ್ಟರು. 1971ರ ಹೊತ್ತಿಗೆ ಸುಮಾರು 4 ವರ್ಷಗಳ ಸೇವೆ ಮಾಡಿದ್ದ ಇವರು ವಿವಿಧ ವಾಯುಕಾರ್ಯಾ ಚರಣೆಗಳಲ್ಲಿ ಪರಿಣತಿಯನ್ನು ಹೊಂದಿರುವ ವೃತ್ತಿಪರವಾಗಿ ಸಮರ್ಥ ಯುದ್ಧವಿಮಾನ ಪೈಲಟ್ ಆಗಿದ್ದರು. ಇಂತಹ ಮಹಾನ್ ಚೇತನವನ್ನು “ಕರಾವಳಿ ತರಂಗಿಣಿ” ಹೆಮ್ಮೆಯಿಂದ ಸ್ಮರಿಸುತ್ತದೆ