image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಫ್ಲೈಟ್ ಲೆಫ್ಟಿನೆಂಟ್ ವಿಜಯ್ ಕುಮಾರ್ ವಾಹಿ

ಫ್ಲೈಟ್ ಲೆಫ್ಟಿನೆಂಟ್ ವಿಜಯ್ ಕುಮಾರ್ ವಾಹಿ

ಯುದ್ಧ ಎಂಬುದು ಸೈನಿಕನಿಗೆ ಹಬ್ಬವಂತೆ. ತನ್ನ ತಾಯ್ನಾಡಿಗೆ ಸೇವೆ ಸಲ್ಲಿಸುವ ಭಾಗ್ಯ ತನಗೆ ಸಿಕ್ಕಿದೆ ಎಂದು ಬಾವಿಸುತ್ತಾ ಹೋರಾಡುತ್ತಾರೆ. ತನಗೆ ಅಪಾಯವಿದ್ದರೂ ತನ್ನ ದೇಶಕ್ಕಾಗಿ, ತನ್ನವರ ಸುರಕ್ಷತೆಗಾಗಿ ಹೋರಾಡುವವನೇ ಯೋಧ. ಡಿಸೆಂಬರ್, 1971 ರಲ್ಲಿ ಫ್ಲೈಟ್ ಲೆಫ್ಟಿನೆಂಟ್ ವಿಜಯ್ ಕುಮಾರ್ ವಾಹಿ SU-7(ಸುಖೋಯ್) ಯುದ್ಧ ವಿಮಾನವನ್ನು ನಿರ್ವಹಿಸುತ್ತಿದ್ದ 100 ಸ್ಕಾಡ್ರನ್‌ನೊಂದಿಗೆ ಸೇವೆ ಸಲ್ಲಿಸುತ್ತಿದ್ದರು. ಡಿಸೆಂಬರ್ 03 ರಂದು PAK ನ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಯ ನೆಲೆಗಳ ಮೇಲೆ ದಾಳಿ ಮಾಡಿದ್ದರಿಂದ, ಭಾರತೀಯ ವಾಯುಪಡೆಯು ಪೂರ್ವ ಮತ್ತು ಪಶ್ಚಿಮ ಮುಂಭಾಗದಲ್ಲಿ ಪ್ರತಿ ದಾಳಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ನಿರ್ಧರಿಸಿತು. 101 ಸ್ಕಾಡ್ರನ್ ವಿಂಗ್ ಕಮಾಂಡರ್ ಕೈಲಾಶ್ ಚಂದ್ರ ಖನ್ನಾ ಅವರು ಕಮಾಂಡಿoಗ್ ಅಧಿಕಾರಿಯಾಗಿ ಪಶ್ಚಿಮ ಮುಂಭಾಗದ ಗುರಿಗಳ ವಿರುದ್ಧ ವಿವಿಧ ಆಕ್ರಮಣಕಾರಿ ವಾಯು ಕಾರ್ಯಾಚರಣೆಗಳನ್ನು ಕೈಗೊಳ್ಳಲು ವಹಿಸಲಾಯಿತು. ಫ್ಲೈಟ್ ಲೆಫ್ಟಿನೆಂಟ್ ವಾಹಿ ಅವರನ್ನು ಡಿಸೆಂಬರ್ 06 ರಂದು ಅಂತಹ ಒಂದು ಆಕ್ರಮಣಕಾರಿ ಕಾರ್ಯಾಚರಣೆಗೆ ನಿಯೋಜಿಸಿ, ಚಂಬ್ ಪ್ರದೇಶಕ್ಕೆ ಏರ್ ಟು ದ ಗ್ರೌಂಡ್ ಅಟ್ಯಾಕ್ ಮಿಷನ್‌ನಲ್ಲಿ ಎರಡನೆಯವರಾಗಿ ಕಳುಹಿಸಲಾಯಿತು. ವಿಮಾನ ವಿರೋಧಿ ಬಂದೂಕುಗಳು ಮತ್ತು ಶತ್ರು ವಿಮಾನಗಳಿಂದ ಆಗುತ್ತಿದ್ದ ದಾಳಿಗಳನ್ನು ತಪಿಸಿಕೊಳ್ಳುತ್ತಾ, ಆ ದಾಳಿಗಳನ್ನು ಹಿಮ್ಮೆಟ್ಟಿಸಿ, ಭಾರತೀಯ ಪದಾತಿದಳಗಳು ಮುನ್ನುಗ್ಗಲು ತನ್ನ ಸ್ವಂತ ಸುರಕ್ಷತೆಯನ್ನು ಕಡೆಗಣಿಸಿ ಫ್ಲೈಟ್ ಲೆಫ್ಟಿನೆಂಟ್ ವಾಹಿ ತಮ್ಮ ದಾಳಿಯನ್ನು ಶುರುವಿಟ್ಟು ಎರಡು ಶತ್ರು ಟ್ಯಾಂಕ್‌ಗಳನ್ನು ಹೊಡೆದುರುಳಿಸಿದರು. ಈ ದಾಳಿಯ ನಂತರ ಹಿಂದಿರುಗುತ್ತಿದ್ದಾಗ, ಅವರ ವಿಮಾನವು ದಾಳಿಗೊಳಗಾಗುವಾಗ ಅದನ್ನು ಅವರಿಗೆ ನಿಯಂತ್ರಿಸಲಾಗಲಿಲ್ಲ. ಅವರು ವಿಮಾ ನದಿಂದ ಹೊರಗೆ ಜಿಗಿದರೂ ಮಾರಣಾಂತಿಕವಾಗಿ ಗಾಯಗೊಂಡು ಹುತಾತ್ಮರಾದರು. ಫ್ಲೈಟ್ ಲೆಫ್ಟಿನೆಂಟ್ ವಾಹಿ ಒಬ್ಬ ಧೀರ ಸೈನಿಕ ಮತ್ತು ಬದ್ಧ ವಾಯು ಯೋಧರಾಗಿದ್ದರು. ಅವರು ತಮ್ಮ ಕರ್ತವ್ಯದ ಸಾಲಿನಲ್ಲಿ ತನ್ನ 26 ವರ್ಷ ವಯಸ್ಸಿನಲ್ಲಿ ದೇಶಕ್ಕಾಗಿ ಪ್ರಾಣವ ನ್ನು ಅರ್ಪಿಸಿದರು. ಫ್ಲೆöÊಟ್ ಲೆಫ್ಟಿನೆಂಟ್ ವಿಜಯ್ ಕುಮಾರ್ ವಾಹಿ ಅವರ ಅತ್ಯುತ್ತಮ ಶೌರ್ಯ, ಕರ್ತವ್ಯ ನಿಷ್ಟೆ ಮತ್ತು ಪರಮ ತ್ಯಾಗಕ್ಕಾಗಿ 26 ಜನವರಿ 1971 ರಂದು "ವೀರಚಕ್ರ" ಶೌರ್ಯ ಪ್ರಶಸ್ತಿಯನ್ನು ನೀಡಲಾಯಿತು. ಇವರು ಸೆಪ್ಟೆಂಬರ್ 17, 1945 ರಂದು ಭಾರತದ ಹಿಂದಿನ ಪಂಜಾಬ್ ಪ್ರಾಂತ್ಯದ ಮಾಂಟ್ಗೋಮೆರಿ ಜಿಲ್ಲೆಯಲ್ಲಿ ಜನಿಸಿದರು. ಅದು ಈಗ ಪಾಕಿಸ್ಥಾನದಲ್ಲಿದೆ. ಅವರ ತಂದೆ ಮೇಜರ್ ಜೆ ಎಲ್ ವಾಹಿ ರಾಯಲ್ ಇಂಡಿಯನ್ ಆರ್ಮಿಯಲ್ಲಿ ಸೇವೆ ಸಲ್ಲಿಸಿದರು. ಇದು ವಾಹಿಯವರನ್ನು ಭಾರತೀಯ ಸೇನೆಗೆ ಸೇರಲು ಪ್ರೇರೇಪಿಸಿತು. ಅವರು ತಮ್ಮ ಶಾಲಾ ಶಿಕ್ಷಣದ ನಂತರ ಪ್ರತಿಷ್ಠಿತ INA ಗೆ ಸೇರಲು ಆಯ್ಕೆಯಾಗಿ 20 ನೇ ವಯಸ್ಸಿನಲ್ಲಿ 13 ಮಾರ್ಚ್ 1966 ರಂದು ಭಾರತೀಯ ವಾಯುಪಡೆಗೆ ನಿಯೋಜಿಸಲ್ಪಟ್ಟು, ಐಎಎಫ್‌ನ ಫೈಟರ್ ಸ್ಟ್ರೀಮ್‌ನಲ್ಲಿ ನಿಯೋಜಿಸಲ್ಪಟ್ಟರು. ಜೊತೆಗೆ ಫೈಟರ್ ಪೈಲಟ್ ಆಗಿ ತರಬೇತಿ ಪಡೆದರು. ತನ್ನ ಹಾರುವ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಅವರು ವಿವಿಧ ವಾಯುಪಡೆಯ ನೆಲೆಗಳಲ್ಲಿ ನೆಲೆಗೊಂಡಿರುವ ವಿವಿಧ ಫ್ಲೈಯಿಂಗ್ ಸ್ಕಾಡ್ರನ್‌ಗಳೊಂದಿಗೆ ಸೇವೆ ಸಲ್ಲಿಸಿದ್ದರು. 1971 ರ ಹೊತ್ತಿಗೆ, ಫ್ಲೈಟ್ ಲೆಫ್ಟಿನೆಂಟ್ ವಿಜಯ್ ಕುಮಾರ್ ವಾಹಿ ಅವರು ಸುಮಾರು 5 ವರ್ಷಗಳ ಸೇವೆಯನ್ನು ಸಲ್ಲಿಸಿದ್ದರು. ಇಂತಹ ಮಹಾನ್ ಯೋಧ ಫ್ಲೈಟ್ ಲೆಫ್ಟಿನೆಂಟ್ ವಿಜಯ್ ಕುಮಾರ್ ವಾಹಿ ಅವರನ್ನು ಕರಾವಳಿ ತರಂಗಿಣಿ ಹೆಮ್ಮೆಯಿಂದ ಸ್ಮರಿಸುತ್ತದೆ.

Category
ಕರಾವಳಿ ತರಂಗಿಣಿ