ಪಾಕಿಸ್ಥಾನವು ತಮ್ಮ "ಆಪರೇಷನ್ ಜಿಬ್ರಾಲ್ಟರ್" ಅನ್ನು ಪ್ರಾರಂಭಿಸಿದ ನಂತರ, ಯುದ್ಧವನ್ನು 27 ಆಗಸ್ಟ್ 1965 ರಂದು ಘೋಷಿಸಲಾಯಿತು. ಪ್ರತೀಕಾರದ ಕ್ರಿಯಾ ಯೋಜನೆಯ ಭಾಗವಾಗಿ, ಸೈನ್ಯವು ಸಿಯಾಲ್ಕೋಟ್ ಸೆಕ್ಟರ್‌ನಲ್ಲಿ ಚಾವಿಂಡಾ ಮತ್ತು ಫಿಲೋರಾವನ್ನು ವಶಪಡಿಸಿಕೊಳ್ಳುವ ತಂತ್ರವನ್ನು ರೂಪಿಸಿತು. ಚಾವಿಂದಾ ಪ್ರದೇಶವನ್ನು ಪಾಕಿಸ್ಥಾನಿ ರಕ್ಷಾಕವಚ ಮತ್ತು ಪದಾತಿದಳದ ಎರಡು ರೆಜಿಮೆಂಟ್‌ಗಳು ಆಕ್ರಮಿಸಿಕೊಂಡವು. ಸೆಪ್ಟೆಂಬರ್ 11 ರಂದು ಲೆ.ಕ. ತಾರಾಪೋರ್ ನೇತೃತ್ವದಲ್ಲಿ ತಂಡವು ಫಿಲೋರಾ ಮೇಲೆ ಹಿಂಬದಿಯಿAದ ಹಠಾತ್ ದಾಳಿಯನ್ನು ಯೋಜಿಸಿತು. ಫಿಲೋರಾ ಮತ್ತು ಚಾವಿಂಡಾ ನಡುವೆ ರೆಜಿಮೆಂಟ್ ಮುಂದೆ ಸಾಗುತ್ತಿದ್ದಾಗ, ವಜಿರಾಲಿಯಿಂದ ಶತ್ರುಗಳ ರಕ್ಷಾಕವಚದಿಂದ ಪ್ರತಿದಾಳಿಯಾಯಿತು. ಲೆಫ್ಟಿನೆಂಟ್ ಕರ್ನಲ್ ತಾರಾಪೋರ್ ತನ್ನ ನೆಲವನ್ನು ಹಿಡಿದಿಟ್ಟುಕೊಂಡು ಫಿಲೋರಾ ಮೇಲೆ ತನ್ನ ಸ್ಕ್ವಾಡ್ರನ್‌ಗಳಲ್ಲಿ ಒಂದನ್ನು ಮತ್ತು ಪದಾತಿದಳದ ಬೆಟಾಲಿಯನ್ ಬೆಂಬಲದೊoದಿಗೆ ಧೈರ್ಯದಿಂದ ಆಕ್ರಮಣ ಮಾಡಿದರು. ಎರಡು ಕಡೆಯ ನಡುವೆ ತೀವ್ರವಾದ ಯುದ್ಧವು 13 ಟ್ಯಾಂಕ್‌ಗಳ ನಾಶಕ್ಕೆ ಕಾರಣವಾಗಿ, ಪಾಕಿಸ್ಥಾನಿಯರು ಚಾವಿಂದವನ್ನು ತೊರೆದರೂ ಫಿಲೋರಾದಲ್ಲಿ ಸೆರೆಹಿಡಿಯಲ್ಪಟ್ಟರು. ಲೆಫ್ಟಿನೆಂಟ್ ಕರ್ನಲ್ ತಾರಾಪೋರ್ ಅದ್ಭುತವಾಗಿ ಹೋರಾಡಿದರು ಆದರೆ ಯುದ್ಧದಲ್ಲಿ ಗಂಭೀರವಾಗಿ ಗಾಯಗೊಂಡರೂ ಹಿಂಜರಿಯದ ಅವರು ವಜಿರಾಲಿ, ಜಸೋರಾನ್ ಮತ್ತು ಬುತೂರ್-ಡೋಗ್ರಾಂಡಿಯನ್ನು ವಶಪಡಿಸಿಕೊಳ್ಳಲು ದಾಳಿಗಳನ್ನು ಯೋಜಿಸಿದರು. 13/14 ಸೆಪ್ಟೆಂಬರ್ 1965 ರಂದು, ಲೆಫ್ಟಿನೆಂಟ್ ಕರ್ನಲ್ ತಾರಾಪೋರ್ ಇನ್ನೂ ಗಾಯಗೊಂಡಿದ್ದರೂ 17 ಕುದುರೆ ಮತ್ತು 9 ಗರ್ವಾಲ್ ಬೆಟಾಲಿಯನ್ ಜೊತೆಯಲ್ಲಿ ಪದಾತಿದಳದ ದಾಳಿಯನ್ನು ಪ್ರಾರಂಭಿಸಿದರು. ವಜಿರಾಲಿಯನ್ನು ಸೆಪ್ಟೆಂಬರ್ 14 ರಂದು ವಶಪಡಿಸಿಕೊಳ್ಳಲಾಯಿತು. ಮುಂದೆ ಲೆಫ್ಟಿನೆಂಟ್ ಕರ್ನಲ್ ತಾರಾಪೋರ್ ಬುತೂರ್ ಮತ್ತು ಡೋಗ್ರಾಂಡಿ ಪ್ರದೇಶಗಳಲ್ಲಿ ಅಡಗಿಕೊಂಡಿದ್ದ ಶತ್ರು ಪಡೆಗಳ ಮೇಲೆ ದಾಳಿ ನಡೆಸಿ, ಆರು ಶತ್ರು ಟ್ಯಾಂಕ್‌ಗಳನ್ನು ನಾಶಪಡಿಸಿದರು. ಜಸ್ಸೋರಾನ್ ಜೊತೆಗೆ 9 ಡೋಗ್ರಾ ಬಿಎನ್ ಮತ್ತು ಬುತೂರ್ ಮತ್ತು ಡೋಗ್ರಾಂಡಿ ಜೊತೆಗೆ 8 ಪದಾತಿಸೈನ್ಯವನ್ನು ಹಿಂಬದಿಯಿAದ ಚಾವಿಂದ ಮೇಲೆ ಆಕ್ರಮಣ ಮಾಡುವುದನ್ನು ಬೆಂಬಲಿಸುತ್ತ, ಗರ್ವಾಲ್ ರೈಫಲ್ಸ್ನ್ನು ವಶಪಡಿಸಿಕೊಳ್ಳಲಾಯಿತು, ಅವರ ನಾಯಕತ್ವದಿಂದ ಸ್ಫೂರ್ತಿ ಪಡೆದ ರೆಜಿಮೆಂಟ್ ಶತ್ರುಗಳ ರಕ್ಷಾಕವಚದ ಮೇಲೆ ದಾಳಿ ಮಾಡಿ ಸುಮಾರು ಅರವತ್ತು ಪಾಕಿಸ್ಥಾನಿ ಸೇನಾ ಟ್ಯಾಂಕ್‌ಗಳನ್ನು ನಾಶಪಡಿಸಿತು. ಭಾರತದ ಕೇವಲ ಒಂಬತ್ತು ಟ್ಯಾಂಕ್ ನಾಶವಾಗಿ ಸಾವುನೋವುಗಳನ್ನು ಅನುಭವಿಸಿತು. ಆದಾಗ್ಯೂ, ಲೆಫ್ಟಿನೆಂಟ್ ಕರ್ನಲ್ ತಾರಾಪೋರ್ ಅವರು ಕಠಿಣ ಸವಾಲನ್ನು ಒಡ್ಡುತ್ತಿದ್ದಾಗ ಶತ್ರುಗಳ ಶೆಲ್ ಅವರ ಟ್ಯಾಂಕ್‌ನ್ನು ಸುಟ್ಟುಹಾಕಿತು. ಇದರಿಂದ ಅವರನ್ನು ಬೆಂಕಿ ಆವರಿಸಿ, ಲೆಫ್ಟಿನೆಂಟ್ ಕರ್ನಲ್ ತಾರಾಪೋರ್ ಯುದ್ಧಭೂಮಿಯಲ್ಲಿ ಹುತಾತ್ಮರಾದರು.
ಲೆಫ್ಟಿನೆಂಟ್ ಕರ್ನಲ್ ಎ ಬಿ ತಾರಾಪೋರ್ ಅವರ ಅತ್ಯುತ್ತಮ ಧೈರ್ಯ, ನಾಯಕತ್ವ, ಅದಮ್ಯ ಮನೋಭಾವ ಮತ್ತು ಪರಮ ತ್ಯಾಗಕ್ಕಾಗಿ ರಾಷ್ಟ್ರದ ಅತ್ಯುನ್ನತ ಶೌರ್ಯ ಪ್ರಶಸ್ತಿ "ಪರಮ ವೀರ ಚಕ್ರ" ನೀಡಲಾಯಿತು. ಲೆಫ್ಟಿನೆಂಟ್ ಕರ್ನಲ್ ಅರ್ದೇಶಿರ್ ಬುರ್ಜೋರ್ಜಿ ತಾರಾಪೋರ್ ಅವರು 18 ಆಗಸ್ಟ್ 1923 ರಂದು ಮುಂಬೈನಲ್ಲಿ ಜನಿಸಿದರು. ಲೆಫ್ಟಿನೆಂಟ್ ಕರ್ನಲ್ ತಾರಾಪೋರ್ ಅವರು ಶಿವಾಜಿಯ ಸೈನ್ಯದಲ್ಲಿ ಸೇವೆ ಸಲ್ಲಿಸಿದ ಮಹಾನ್ ಯೋಧ ರತನ್‌ಜೀಬಾ ಅವರ ಕುಟುಂಬಕ್ಕೆ ಸೇರಿದವರು. ರತನ್‌ಜೀಬಾ ಅವರ ಶೌರ್ಯ, ನಿಷ್ಠೆ ಮತ್ತು ಸೇವೆಗಳಿಗೆ ಮನ್ನಣೆಯಾಗಿ ಅವರಿಗೆ ನೂರು ಗ್ರಾಮಗಳ ಉಸ್ತುವಾರಿ ನೀಡಲಾಗಿತ್ತು. ಒಂದು ಹಳ್ಳಿಗೆ ತಾರಾಪೋರ್ ಎಂದು ಹೆಸರಿಸಲಾಯಿತು. ಅಂದಿನಿAದ ಇದು ಕುಟುಂಬದ ಶೀರ್ಷಿಕೆಯಾಯಿತು.
ಲೆಫ್ಟಿನೆಂಟ್ ಕರ್ನಲ್ ತಾರಾಪೋರ್ ಅವರ ತಂದೆ ಬುರ್ಜೋರ್ಜಿ ಅವರು ಹಿಂದಿನ ಹೈದರಾಬಾದ್ ರಾಜ್ಯದ ಕಸ್ಟಮ್ಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಪರ್ಷಿಯನ್ ಮತ್ತು ಉರ್ದು ಭಾಷೆಯ ಪಾಂಡಿತ್ಯಪೂರ್ಣ ವಿದ್ವಾಂಸರಾಗಿದ್ದರು. 01 ಜನವರಿ 1942 ರಂದು, ಅವರನ್ನು 7ನೇ ಹೈದರಾಬಾದ್ ಪದಾತಿಸೈನ್ಯಕ್ಕೆ ನಿಯೋಜಿಸಲಾಯಿತು, ಆದರೆ ಅವರು ಶಸ್ತ್ರಸಜ್ಜಿತ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಲು ಬಯಸಿದ್ದರು. ಮುಂದೆ ಅವರು ತಮ್ಮ ಬಡ್ತಿಗಳನ್ನು ಪಡೆದು ಅಂತಿಮವಾಗಿ ಕಮಾಂಡಿoಗ್ ಆಫೀಸರ್ ಆದರು. ಇವರನ್ನು ಕರಾವಳಿ ತರಂಗಿಣಿ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಿದೆ.