image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕುಪ್ವಾರದ ವೀರ ಕ್ಯಾಪ್ಟನ್ ಸಂದೀಪ್

ಕುಪ್ವಾರದ ವೀರ ಕ್ಯಾಪ್ಟನ್ ಸಂದೀಪ್

ತoದೆ ಲೆಪ್ಟಿನೆಂಟ್ ಕರ್ನಲ್ ಜೆಎಸ್ ಕನ್ವಲ್‌ರಂತೆ ತಾವೂ ದೇಶ ಸೇವೆ ಮಾಡಬೇಕೆಂದುಕೊoಡವರು ಸಂದೀಪ್, ತಾಯಿಯ ಪ್ರೇರಣೇಯೂ ಜೊತೆಯಾಗಿ 1986ರಲ್ಲಿ ಭಾರತೀಯ ಸೈನ್ಯದ ಡೋಗ್ರಾ ರೆಜಿಮೆಂಟ್‌ನಲ್ಲಿ ಕಮಿಷನ್ ಪಡೆದರು. ಎರಡು ಮೂರು ವರ್ಷದಲ್ಲಿ ಕ್ಯಾಪ್ಟನ್ ಆದರು ಸಂದೀಪ್. 1991 ರ ಸಮಯದಲ್ಲಿ ಪಾಕಿಸ್ಥಾನಿ ಸೈನ್ಯದ ನೆರವಿನಿಂದ ಹಲವಾರು ತರಬೇತಿ ಶಿಬಿರಗಳನ್ನು ಗಡಿಯುದ್ದಕ್ಕೂ ಭಯೋತ್ಪಾದಕರು ಹೊಂದಿದ್ದರು. ಭಯೋತ್ಪಾದಕರೊಂದಿನ ಕಾಳಗ ಸಾಮಾನ್ಯವಾಗಿತ್ತು ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶದಲ್ಲಿ. ಆಗಸ್ಟ 8 1991ರ ದಿನ, ಕುಪ್ವಾರದ ಜಫರ್ ಖನಿ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಪಾಕಿಸ್ಥಾನಿ ಉಗ್ರರು ಅವಿತಿದ್ದಾರೆ ಎಂಬ ಸುದ್ದಿ ತಿಳಿದು 14ನೇ ಡೋಗ್ರಾ ತಂಡಕ್ಕೆ ಉಗ್ರರನ್ನು ಸದೆಬಡಿಯಲು ಆದೇಶ ದೊರೆಯಿತು. ಈ ತಂಡವನ್ನು ಮುನ್ನಡೆಸಿದವರು ಕ್ಯಾಪ್ಟನ್ ಸಂದೀಪ್. ಸ್ಥಳಕ್ಕೆ ತಲುಪಿದ ಕೂಡಲೇ ಉಗ್ರರು ಅವಿತಿದ್ದ ಜಾಗವನ್ನು ಎಲ್ಲಾ ದಿಕ್ಕುಗಳಿಂದ ಸುತ್ತುವರೆದ ಡೋಗ್ರಾ ಪಡೆ, ಇನ್ನೇನು ದಾಳಿ ನಡೆಸಬೇಕು ಎಂದುಕೊಳ್ಳುವಾಗಲೇ ಸೈನಿಕರ ಇರುವಿಕೆ ತಿಳಿದ ಉಗ್ರರು ಮನಸೋ ಇಚ್ಚೆ ಗುಂಡು ಮತ್ತು ಗ್ರೆನೇಡ್ ದಾಳಿ ಪ್ರಾರಂಭಿಸಿದರು. ಈ ದಾಳಿಯಲ್ಲಿ ಕ್ಯಾಪ್ಟನ್ ಸಂದೀಪ್‌ರ ಸಹೋದ್ಯೋಗಿ ಒಬ್ಬ ಗಾಯಗೊಂಡು ಏಳಲಾರದೆ ಉಗ್ರನ ಗುಂಡಿನದಾಳಿಯಿAದ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುವುದನ್ನು ಗಮನಿಸಿದ ಕ್ಯಾಪ್ಟನ್ ಸಂದೀಪ್ ಕೂಡಲೇ ಅವರತ್ತ ತೆರಳಿ ಅವರನ್ನು ಎಳೆದು ತರಲು ಪ್ರಯತ್ನಿಸುತ್ತಾರೆ, ಈ ಸಂಧರ್ಭ ಇವರ ಮೇಲೆ ದಾಳಿ ನಡೆಸಿದ ಉಗ್ರನನ್ನು ಹೊಡೆದುರುಳಿಸಿದ್ದಲ್ಲದೆ ಗಾಯಗೊಂಡ ತನ್ನ ಸಹೋದ್ಯೋಗಿಯನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುತ್ತಾರೆ. ಈ ಸಂಧರ್ಭ ಅವರೂ ಗುಂಡೇಟಿನಿoದ ಗಾಯಗೋಡಿರುತ್ತಾರೆ, ಆದರೂ ಎದೆಗುಂದದೆ ಉಗ್ರರ ಇರುವಿಕೆಯ ಸಮಗ್ರ ಮಾಹಿತಿಯನ್ನು ಪಡೆಯಲು ಮುಂದೆ ಹೋದವರಿಗೆ, ಉಗ್ರರು ಎಲ್ಲೆಲ್ಲಿಂದ ದಾಳಿ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತದೆ. ವಾಪಾಸ್ ತಮ್ಮ ತಂಡವನ್ನು ಸೇರಿಕೊಳ್ಳುವ ಹಂತದಲ್ಲಿ ಇವರ ಮೇಲೆ ಗ್ರೆನೇಡ್ ದಾಳಿ ನಡೆದು ಮತ್ತಷ್ಟು ಘಾಸಿಗೊಳ್ಳುತ್ತಾರೆ. ಆದರೂ ಇವರತ್ತ ತೂರಿ ಬಂದ ಗ್ರೆನೇಡ್ ಒಂದನ್ನು ಬೀಳುವ ಮೊದಲೇ ಹಿಡಿದು ಅದನ್ನು ಎಸೆದ ಉಗ್ರನೆಡೆಗೆ ಎಸೆದು ಇನ್ನೊಬ್ಬ ಉಗ್ರನ್ನು ಕೊಂದರು, ಹಾಗೇ ತಮ್ಮ ತಂಡವನ್ನು ಸೇರಿದ ಕ್ಯಾಪ್ಟನ್ ಸಂದೀಪ್, ತಮ್ಮವರಿಗೆ ಎಲ್ಲಾ ಮಾಹಿತಿ ನೀಡಿ, ಉಳಿದ ಎಲ್ಲಾ ಉಗ್ರರನ್ನು ಹೊಡೆದುರುಳಿಸಲು ಸಹಾಯ ಮಾಡಿದ್ದರು. ಇಲ್ಲಿ ಕ್ಯಾಪ್ಟನ್ ಸಂದೀಪ್‌ರ ಮುಖ್ಯ ಉದ್ದೇಶವಂದರೆ ತನ್ನ ತಂಡದ ಸದಸ್ಯರು ಏನೂ ಅಪಾಯವಿಲ್ಲದೆ ಉಗ್ರರನ್ನು ಸದೆಬಡಿಬೇಕು ಎಂಬುದಾಗಿತ್ತೆoದು ಅವರ ನಿಕಟವರ್ತಿಗಳು ಹೇಳುತ್ತಾರೆ. ಈ ಸಮಯದಲ್ಲಿ ದೇಹಕ್ಕೆ ಆದ ಗಾಯಗಳ ಕಾರಣದಿಂದ ಪ್ರಜ್ನೆ ತಪ್ಪಿದ್ದ ಕ್ಯಾಪ್ಟನ್ ಸಂದೀಪ್ ದೇಶ ಸೇವೆ ಮಾಡುತ್ತಲೇ ಉಸಿರು ಚೆಲ್ಲಿದರು. ಅವರ ಈ ಸಾಹಸಕ್ಕಾಗಿ ಭಾರತ ಸರಕಾರ ಅವರಿಗೆ ಮರಣೋತ್ತರ ಅಶೋಕ ಚಕ್ರ ನೀಡಿ ಗೌರವಿಸಿದೆ. ಅವರ ಮನೆಯಲ್ಲಿ ಅವರ ತಂದೆ ಹಾಗು ತಾಯಿ ಕ್ಯಾಪ್ಟನ್ ಸಂದೀಪ್‌ರ ವಸ್ತುಗಳು ಹಾಗೇ ಅವರಿಗೆ ದೊರೆತ ಅಶೋಕ ಚಕ್ರವನ್ನು ಜೋಪಾನವಾಗಿಟ್ಟು, ಮನೆಗೆ ಬಂದವರಿಗೆ ತೋರಿಸುತ್ತಾರೆ. ಕ್ಯಾಪ್ಟನ್ ಸಂದೀಪ್‌ರ ತ್ಯಾಗಕ್ಕೆ ಕರಾವಳಿ ತರಂಗಿಣಿಯ ಹೃದಯಾಂತರಾಳದ ಸಲ್ಯೂಟ್

 

Category
ಕರಾವಳಿ ತರಂಗಿಣಿ