ಭಾರತೀಯ ಶಾಂತಿಪಾಲನಾ ಪಡೆ ತನ್ನ ಮೊದಲ ಕಾರ್ಯಾಚರಣೆಯನ್ನು 9 ಅಕ್ಟೋಬರ್ 1987 ರಂದು ಎಲ್‌ಟಿಟಿಇಯನ್ನು ಹತೋಟಿಯಲ್ಲಿಡಲು ಕಾರ್ಯತಂತ್ರವನ್ನು ರೂಪಿಸಿ ಪ್ರಾರಂಭಿಸಿತು. "ಆಪ್ ಪವನ್" ಇದರ ಕೋಡ್ ನೇಮ್ ಆಗಿತ್ತು, ಇದು ಜಾಫ್ನಾದಲ್ಲಿ ಮತ್ತು ಸುತ್ತಮುತ್ತಲಿನ ಎಲ್‌ಟಿಟಿಇ ಕಾರ್ಯಾಚರಣೆಯ ಸಾಮರ್ಥ್ಯವನ್ನು ತಟಸ್ಥಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಇದು ಎಲ್‌ಟಿಟಿಇಯ ಕಮಾಂಡ್ ಸರಪಳಿಯ ಸೆರೆಹಿಡಿಯುವಿಕೆ ಅಥವಾ ಕೊನೆಗೊಳಿಸುವಿಕೆಯನ್ನು ಒಳಗೊಂಡಿತ್ತು, ಭಾರತೀಯ ಶಾಂತಿಪಾಲನಾ ಪಡೆಯಿಂದ ಎಲ್‌ಟಿಟಿಇ ಭದ್ರಕೋಟೆಗಳ ಮೇಲೆ ದಾಳಿಯ ಮುಖಾಂತರ ಬಂಡಾಯ ಚಳವಳಿಯನ್ನು ದಿಕ್ಕಿಲ್ಲದಂತೆ ಬಿಡುತ್ತದೆ ಎಂದು ನಿರೀಕ್ಷಿಸಲಾಗಿತ್ತು. 1987 ಅಕ್ಟೋಬರ್ 12 ರಂದು ಜಾಫ್ನಾ ವಿಶ್ವವಿದ್ಯಾಲಯದಲ್ಲಿ 13 ಸಿಖ್ ಐ, 4/5 ಜಿಆರ್, ಮತ್ತು 10 ಪ್ಯಾರಾ ಸೈನಿಕರನ್ನು ಒಳಗೊಂಡ ಭಾರತೀಯ ಶಾಂತಿಪಾಲನಾ ಪಡೆಯ ದಾಳಿಯ ನಂತರ, ಎಲ್‌ಟಿಟಿಇಯೊಂದಿಗಿನ ಸಂಬoಧಗಳು ಮುರಿದು ಬೀಳುವ ಹಂತವನ್ನು ತಲುಪಿದವು ಮತ್ತು ಅವರ ಹೋರಾಟಗಾರರು ಭಾರತೀಯ ಸೈನಿಕರ ವಿರುದ್ಧ ಸರಣಿ ದಾಳಿಯನ್ನು ಪ್ರಾರಂಭಿಸಿದರು. ಡಿಸೆಂಬರ್ 1987 ರ ಹೊತ್ತಿಗೆ, ಭಾರತೀಯ ಶಾಂತಿಪಾಲನಾ ಪಡೆ ಜಾಫ್ನಾ ಭಾಗಗಳ ನಿಯಂತ್ರಣವನ್ನು ವಶಪಡಿಸಿಕೊಂಡಿತು ಆದರೆ ಚಕಮಕಿಗಳು ವಿವಿಧ ಭಾಗಗಳಲ್ಲಿ ಮುಂದುವರೆಯಿತು. ಆಗಸ್ಟ್ 1987 ರಲ್ಲಿ ಭಾರತೀಯ ಪಡೆಗಳ ಸೇರ್ಪಡೆಯ ನಂತರ, ಉಗ್ರಗಾಮಿಗಳು ಶರಣಾಗತರಾಗಬೇಕಿತ್ತು ಆದರೆ ಭಯಂಕರವಾದ ಎಲ್‌ಟಿಟಿಇ ಹಿಂದೆ ಸರಿದು ಭಾರತೀಯ ಪಡೆಗಳ ಮೇಲೆ ಯುದ್ಧವನ್ನು ಶುರುಮಾಡಿಬಿಟ್ಟರು. 2 ನೇ ಡಿಸೆಂಬರ್ 1987 ರ ದಿನದಂದು, ಮೇಜರ್ ರಂಜಿತ್ ಮುತ್ತಣ್ಣ ಅವರು ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಎಲಂ (ಎಲ್‌ಟಿಟಿಇ) ಬೆದರಿಕೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿದ್ದರೂ ಸಹ ತಮ್ಮ ಜವಾಬ್ದಾರಿಯ ವ್ಯಾಪ್ತಿಯನ್ನು ಮೀರಿ ಬೆಂಗಾವಲು ರಕ್ಷಣೆಯ ಕರ್ತವ್ಯವನ್ನು ಕೈಗೊಳ್ಳಲು ಸ್ವಯಂಪ್ರೇರಿತರಾಗಿ ಮುಂದಾದರು. ಅವರು ಕೊಲಂಬೊಗೆ ಹೋಗುವ ರಸ್ತೆಯಲ್ಲಿ ಸಾಗುವ ಕಾಲಮ್‌ನ(ರಸ್ತೆಗಳ ಪಹರೆ ಪಡೆ) ಕಾಲಮ್ ಕಮಾಂಡರ್ ಆಗಿದ್ದರು. ಎಲ್‌ಟಿಟಿಇ ಉಗ್ರರ ಅಡಗುತಾಣದಲ್ಲಿ ಶಸ್ತ್ರಾಸ್ತ್ರಗಳ ರವಾನೆಯನ್ನು ಪತ್ತೆಹಚ್ಚಲು ಅವರು ದಾರಿಯಲ್ಲಿದ್ದಾಗ, ಭಾರಿ ಶಸ್ತ್ರಸಜ್ಜಿತ ಎಲ್‌ಟಿಟಿಇ ಉಗ್ರಗಾಮಿಗಳ ಗುಂಪು ಅವರ ಮೇಲೆ ದಾಳಿ ನಡೆಸಿತು. ಮೇಜರ್ ಮುತ್ತಣ್ಣ ಮತ್ತು ಅವರ ಸೈನಿಕರು ಜಾಗರೂಕತೆಯಿಂದ ಉಗ್ರಗಾಮಿಗಳ ಅಡಗುತಾಣಕ್ಕೆ ಕಾಲಿಡುತ್ತಿದ್ದಂತೆ ಎಲ್ಲಾ ದಿಕ್ಕುಗಳಿಂದ ಭಾರೀ ಗುಂಡಿನ ದಾಳಿಯನ್ನು ಎದುರಿಸಬೇಕಾಯಿತು. ಮೇಜರ್ ಮುತ್ತಣ್ಣ ಅವರು ಪರಿಸ್ಥಿತಿಯನ್ನು ತ್ವರಿತವಾಗಿ ಅರಿತರು ಮತ್ತು ಅವರ ಕ್ಷೇತ್ರ ಕೌಶಲ್ಯಗಳನ್ನು ಬಳಸಿಕೊಂಡು ಅವರ ಸೈನಿಕರೊಂದಿಗೆ ಕಾರ್ಯರೂಪಕ್ಕೆ ಬಂದರು. ಉಗ್ರಗಾಮಿಗಳು ಭಾರಿ ಶಸ್ತ್ರಸಜ್ಜಿತರಾಗಿದ್ದರು ಮತ್ತು ವಾಂಟೇಜ್ ಪಾಯಿಂಟ್‌ಗಳಿoದ ಗುಂಡು ಹಾರಿಸುತ್ತಿದ್ದರೂ ಮೇಜರ್ ಮುತ್ತಣ್ಣ ದಾಳಿಯನ್ನು ಹಿಮ್ಮೆಟ್ಟಿಸಲು ನಿರ್ಧರಿಸಿದರು. ನಂತರ ಭೀಕರ ಗುಂಡಿನ ಕಾಳಗ ನಡೆದು ಎರಡೂ ಕಡೆಯಿಂದ ಭಾರೀ ಗುಂಡಿನ ಚಕಮಕಿ ನಡೆಯಿತು. ಎಲ್‌ಟಿಟಿಇಯಿಂದ ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಮೇಜರ್ ಮುತ್ತಣ್ಣ ಎಲ್‌ಟಿಟಿಇ ಉಗ್ರಗಾಮಿಗಳನ್ನು ತಮ್ಮ ಸ್ಥಾನಗಳನ್ನು ಬಿಟ್ಟೋಡುವಂತೆ ಹೋರಾಡಿದರು. ಕೊನೆ ಹಂತದ ಗುಂಡಿನ ಕಾಳಗದ ಸಮಯದಲ್ಲಿ, ಮೇಜರ್ ಮುತ್ತಣ್ಣ ಅವರ ಹೆಲ್ಮೆಟ್ ಮೂಲಕ ಒಳಹೊಕ್ಕ ಗುಂಡಿನಿAದಾಗಿ ಬಲಿಯಾದರು ಮತ್ತು ಹುತಾತ್ಮರಾದರು. ಮೇಜರ್ ಮುತ್ತಣ್ಣÀ ಒಬ್ಬ ವೀರ ಮತ್ತು ಬದ್ಧ ಸೈನಿಕರಾಗಿದ್ದು, ಭಾರತೀಯ ಸೇನೆಗೆ ತನ್ನ ಅತ್ಯುನ್ನತ ಶೌರ್ಯ ಪ್ರದರ್ಶಿಸಿ ಕರ್ತವ್ಯದಲ್ಲಿದ್ದಾಗಲೇ ತಮ್ಮ ಪ್ರಾಣವನ್ನು ಅರ್ಪಿಸಿದರು. ಮೇಜರ್ ರಂಜಿತ್ ಮುತ್ತಣ್ಣ ಅವರು ಅವರ ಪತ್ನಿ ಶ್ರೀಮತಿ ಗೀತಾ ಮುತ್ತಣ್ಣ ಅವರನ್ನು ಅಗಲಿದ್ದಾರೆ. ಮೇಜರ್ ರಂಜಿತ್ ಮುತ್ತಣ್ಣವರು ಕರ್ನಾಟಕದ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನವರು.
ಜುಲೈ 29, 1951 ರಂದು ಜನಿಸಿದ ಮೇಜರ್ ಮುತ್ತಣ್ಣ ಮುಂಬೈನ ಡಾನ್ ಬಾಸ್ಕೋದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಅವರು ತಮ್ಮ ಬಾಲ್ಯದಿಂದಲೂ ಸಶಸ್ತ್ರ ಪಡೆಗಳಿಗೆ ಸೇರುವ ಕಲ್ಪನೆಯನ್ನು ಬೆಳೆಸಿಕೊಂಡರು ಮತ್ತು ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಅವರ ಕನಸನ್ನು ಮುಂದುವರಿಸಿದರು. ತರುವಾಯ, ಅವರು ಪುಣೆಯಲ್ಲಿ ಪ್ರತಿಷ್ಠಿತ ಎನ್‌ಡಿಎ(ರಾಷ್ಟ್ರೀಯ ರಕ್ಷಣಾ ಅಕಾಡೆಮಿ)ಗೆ ಆಯ್ಕೆಯಾದರು ಮತ್ತು ೨೪ ಡಿಸೆಂಬರ್ 1979 ರಂದು 2 ನೇ ಲೆಫ್ಟಿನೆಂಟ್ ಆಗಿ ತಮ್ಮ ಸ್ಥಾನ ಗಳಿಸಿದರು. ಅವರು ಪ್ರಖ್ಯಾತ ರಜಪೂತ್ ರೆಜಿಮೆಂಟ್‌ಗೆ ನಿಯೋಜಿಸಲ್ಪಟ್ಟರು, ಇದು ನಿರ್ಭೀತ ಸೈನಿಕರು ಮತ್ತು ಹಲವಾರು ಯುದ್ಧ ಸಾಹಸಗಳಿಗೆ ಹೆಸರುವಾಸಿಯಾಗಿದೆ. ಅದರ ಧ್ಯೇಯವಾಕ್ಯ, "ಸರ್ವತ್ರ ವಿಜಯ್" ಎಂದರೆ "ಎಲ್ಲೆಡೆ ವಿಜಯ". ಈ ರೆಜಿಮೆಂಟ್ ಸ್ವಾತಂತ್ರ‍್ಯದ ನಂತರದ ಎಲ್ಲಾ ಯುದ್ಧಗಳಲ್ಲಿ ಭಾಗವಹಿಸಿತು ಮತ್ತು ಭಾರತೀಯ ಶಾಂತಿಪಾಲನಾ ಪಡೆಯ ಭಾಗವನ್ನೂ ಸಹ ರಚಿಸಿತು (4, 5 ಮತ್ತು 25ನೇ ರಜಪೂತರು ಶ್ರೀಲಂಕಾದಲ್ಲಿ ಭಾರತೀಯ ಶಾಂತಿಪಾಲನಾ ಪಡೆಯ ಒಂದು ಭಾಗವಾಗಿದ್ದರು).
ಮೇಜರ್ ಮುತ್ತಣ್ಣ ಅವರು ನಾಗಾಲ್ಯಾಂಡ್, ಪಾಲಂಪುರ್, ಸೂರತ್‌ಗಢ್, ಬನ್‌ಬಾಸಾ ಮತ್ತು ಶ್ರೀಲಂಕಾದಲ್ಲಿ ೫ನೇ ರಜಪೂತ್ ಅವರ ಬೆಟಾಲಿಯನ್‌ನೊಂದಿಗೆ ಸೇವೆ ಸಲ್ಲಿಸಿದರು. ಯುವ ಕ್ಯಾಪ್ಟನ್ ಆಗಿ, ಅವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಯನ್ನು ಹೊಂದಿದ್ದರು. ತರುವಾಯ, ಅವರು ವೆಲ್ಲಿಂಗ್ಟನ್‌ನಲ್ಲಿರುವ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನಿಂದ ಪದವಿ ಪಡೆದರು ಮತ್ತು 1985 ರಿಂದ 1987 ರವರೆಗೆ ಇನ್‌ಫ್ಯಾಂಟ್ರಿ ಬ್ರಿಗೇಡ್‌ನ ಮೇಜರ್ ಆಗಿ ನೇಮಕಗೊಂಡರು. ಮೇಜರ್ ಮುತ್ತಣ್ಣ 12 ನವೆಂಬರ್ 1978 ರಂದು ಗೀತಾ ಅವರನ್ನು ವಿವಾಹವಾದರು. ವೀರ ಯೋಧನಿಗೆ ಕರಾವಳಿ ತರಂಗಿಣಿಗೆ ಕರ ಜೋಡಿಸಿ ನಮಿಸುತ್ತಿದೆ.