image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮೇಜರ್ ಗುರುದೇವ್ ಸಿಂಗ್ ಜಸ್ವಾಲ್

ಮೇಜರ್ ಗುರುದೇವ್ ಸಿಂಗ್ ಜಸ್ವಾಲ್

ವಿಶ್ವ ಸಮರದ ಅನುಭವಿ ಜೆಮ್ ಲಾಧಾ ಸಿಂಗ್ ಅವರ ಮಗ “ವಿಶ್ವ ಸಮರದ ಅನುಭವಿ ಜೆಮ್ ಲಾಧಾ ಸಿಂಗ್ ಅವರ ಮಗ “ಮೇಜರ್ ಗುರುದೇವ್ ಸಿಂಗ್ ಜಸ್ವಾಲ್” ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಡಿಯೋಲಿ ಗ್ರಾಮದಲ್ಲಿ 20 ಜುಲೈ 1942 ರಂದು ಜನಿಸಿ, ಉನಾ ಬಳಿಯ ಘನಾರಿಯ ಸಾರ್ವಜನಿಕ ಪ್ರೌಢಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ಅವರ ಪದವಿಯ ನಂತರ, 10 ನೇ ಮೇ 1964 ರಂದು 22 ವರ್ಷ ವಯಸ್ಸಿನಲ್ಲಿ ಸೈನ್ಯಕ್ಕೆ ನೇಮಕಗೊಂಡು, ಪಂಜಾಬ್ ರೆಜಿಮೆಂಟ್‌ನ 22 ಪಂಜಾಬ್ ಬಿಎನ್‌ಗೆ ನಿಯೋಜಿಸಲ್ಪಟ್ಟು, 1971 ರ ಹೊತ್ತಿಗೆ, ಮೇಜರ್ ಹುದ್ದೆಗೆ ಬಡ್ತಿ ಪಡೆದಯುವುದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸುಮಾರು 7 ವರ್ಷಗಳ ಸೇವೆಯನ್ನು ಸಲ್ಲಿಸಿದ್ದರು. 1971 ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಮೇಜರ್ ಗುರುದೇವ್ ಅವರ ಘಟಕ 22 ಪಂಜಾಬನ್ನು ಪಶ್ಚಿಮ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ 39 ಪದಾತಿ ದಳದ ಕಾರ್ಯಾಚರಣೆಯ ಅಡಿಯಲ್ಲಿ ಇರಿಸಲಾಯಿತು. ಡಿಸೆಂಬರ್ 1971ರಲ್ಲಿ, ಮೇಜರ್ ಗುರುದೇವ್ ಅವರ ಘಟಕ 22 ಪಂಜಾಬ್ ಅನ್ನು ಪಶ್ಚಿಮ ಗಡಿಯಲ್ಲಿರುವ ಶಕರ್ಗಢ್ ಸೆಕ್ಟರ್ನಲ್ಲಿ ನಿಯೋಜಿಸಲಾಯಿತು. ಆ ಸಮಯದಲ್ಲಿ ಮೇಜರ್ ಗುರುದೇವ್ ಸಿಂಗ್ ರೈಫಲ್ ಕಂಪನಿಗೆ ಕಮಾಂಡರ್ ಆಗಿದ್ದರು ಮತ್ತು ಡಿಸೆಂಬರ್ 7 ಮತ್ತು 8 1971 ರಂದು ಶಾಕರ್‌ಗಢ್ ಸೆಕ್ಟರ್‌ನಲ್ಲಿ ಚಕ್ ಅಮ್ರು ರೈಲು ನಿಲ್ದಾಣವನ್ನು ವಶಪಡಿಸಿಕೊಳ್ಳುವ ಜವಾಬ್ದಾರಿಯನ್ನು ವಹಿಸಲಾಯಿತು. ಪಾಕಿಸ್ಥಾನಿ ಸೈನ ವಶಪಡಿಸಿಕೊಂಡಿದ್ದ ಚಕ್ ಅಮ್ರು ರೈಲು ನಿಲ್ದಾಣವು ಪಾಕಿಸ್ಥಾನಿ ಸೈನ್ಯದ ಕಾರ್ಯಾಚರಣೆಗೆ ಸಹಾಯಕವಾಗಿದ್ದ ತಾಣ. ತನ್ನ ಕಾರ್ಯಾಚರಣೆಯನ್ನು ಮುಂದುವರೆಸಲು ಭಾರತೀಯ ಸೇನೆಗೆ ಅತ್ಯಗತ್ಯ ಚಕ್ ಅಮ್ರು ರೈಲು ನಿಲ್ದಾಣ. ಮೇಜರ್ ಗುರುದೇವ್ ಅವರು 900ಗಜಗಳಷ್ಟು ಆಳವಾದ ಕಂದಕದ ಮೂಲಕ ದಾಳಿಯನ್ನು ಮುನ್ನಡೆಸಿದರು. ಈ ಧೈರ್ಯಶಾಲಿ ದಾಳಿಯು ಶತ್ರುವನ್ನು ಆಶ್ಚರ್ಯಕ್ಕೆ ಒಳಪಡಿಸಿತು ಮತ್ತು ಸೋಲಿಸಲ್ಪಟ್ಟಿತು. ಪಾಕಿಸ್ಥಾನಿ ಸೈನ್ಯದ ಮರುಸಂಘಟನೆಯ ಸಮಯದಲ್ಲಿ, ಮೇಜರ್ ಗುರುದೇವ್‌ರ ಕಂಪನಿಯು ತೀವ್ರವಾದ ಮಧ್ಯಮ ಮೆಷಿನ್ ಗನ್ ಮತ್ತು ಫಿರಂಗಿ ಗುಂಡಿನ ದಾಳಿಗೊಳಪಟ್ಟಿತು. ಇದರ ಹೊರತಾಗಿಯೂ, ಮೇಜರ್ ಗುರುದೇವ್ ತಮ್ಮ ಸ್ಥಾನಗಳನ್ನು ಹಿಡಿದಿಡಲು ತಮ್ಮ ಸಂಗಡಿಗರನ್ನು ಪ್ರೋತ್ಸಾಹಿಸಲು ಒಂದು ಕಂದಕದಿoದ ಇನ್ನೊಂದು ಕಂದಕಕ್ಕೆ ತೆರಳಿದರು. ಹಾಗೆ ಮಾಡುವಾಗ, ಮೇಜ್ ಗುರುದೇವ್ ಶತ್ರುವಿನ ಮಧ್ಯಮ ಮೆಷಿನ್ ಗನ್ ದಾಳಿಯಿಂದ ತೀವ್ರವಾಗಿ ಗಾಯಗೊಂಡರು. ಆದಾಗ್ಯೂ, ಅವರು ಹಿಂದಿರುಗಲು ನಿರಾಕರಿಸಿದರು ಮತ್ತು ತಮ್ಮ ಕಂಪನಿಯು ಚಕ್ ಅಮ್ರು ರೈಲು ನಿಲ್ದಾಣವನ್ನು ವಶಪಡಿಸಿಕೊಳ್ಳುವವರೆಗೂ ತನ್ನ ಸೈನಿಕರನ್ನು ನಿರ್ದೇಶಿಸುತ್ತಲೇ ಇದ್ದರು. ಮೇಜ್ ಗುರ್ದೇವ್ ಅವರನ್ನು ನಂತರ ವೈದ್ಯಕೀಯ ಸೌಲಭ್ಯಕ್ಕೆ ಸ್ಥಳಾಂತರಿಸುವಾಗ ಹುತಾತ್ಮರಾದರು. ಮೇಜರ್ ಗುರುದೇವ್ ಸಿಂಗ್ ಜಸ್ವಾಲ್ ಅವರ ಶೌರ್ಯ, ಮಣಿಯದ ಹೋರಾಟದ ಮನೋಭಾವ ಮತ್ತು ಅತ್ಯುನ್ನತ ತ್ಯಾಗಕ್ಕಾಗಿ "ವೀರ ಚಕ್ರ" ಪ್ರಶಸ್ತಿಯನ್ನು ನೀಡಲಾಯಿತು. ಇವರಿಗೆ ಕರಾವಳಿ ತರಂಗಿಣಿಯ ಹೆಮ್ಮೆಯ ಸಲ್ಯೂಟ್.” ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಡಿಯೋಲಿ ಗ್ರಾಮದಲ್ಲಿ 20 ಜುಲೈ 1942 ರಂದು ಜನಿಸಿ, ಉನಾ ಬಳಿಯ ಘನಾರಿಯ ಸಾರ್ವಜನಿಕ ಪ್ರೌಢಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ಅವರ ಪದವಿಯ ನಂತರ, 10 ನೇ ಮೇ 1964 ರಂದು 22 ವರ್ಷ ವಯಸ್ಸಿನಲ್ಲಿ ಸೈನ್ಯಕ್ಕೆ ನೇಮಕಗೊಂಡು, ಪಂಜಾಬ್ ರೆಜಿಮೆಂಟ್‌ನ 22 ಪಂಜಾಬ್ ಬಿಎನ್‌ಗೆ ನಿಯೋಜಿಸಲ್ಪಟ್ಟು, 1971 ರ ಹೊತ್ತಿಗೆ, ಮೇಜರ್ ಹುದ್ದೆಗೆ ಬಡ್ತಿ ಪಡೆದಯುವುದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸುಮಾರು 7 ವರ್ಷಗಳ ಸೇವೆಯನ್ನು ಸಲ್ಲಿಸಿದ್ದರು. 1971 ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಮೇಜರ್ ಗುರುದೇವ್ ಅವರ ಘಟಕ 22 ಪಂಜಾಬನ್ನು ಪಶ್ಚಿಮ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ 39 ಪದಾತಿ ದಳದ ಕಾರ್ಯಾಚರಣೆಯ ಅಡಿಯಲ್ಲಿ ಇರಿಸಲಾಯಿತು. ಡಿಸೆಂಬರ್ 1971ರಲ್ಲಿ, ಮೇಜರ್ ಗುರುದೇವ್ ಅವರ ಘಟಕ 22ಪಂಜಾಬ್ ಅನ್ನು ಪಶ್ಚಿಮ ಗಡಿಯಲ್ಲಿರುವ ಶಕರ್ಗಢ್ ಸೆಕ್ಟರ್ನಲ್ಲಿ ನಿಯೋಜಿಸಲಾಯಿತು. ಆ ಸಮಯದಲ್ಲಿ ಮೇಜರ್ ಗುರುದೇವ್ ಸಿಂಗ್ ರೈಫಲ್ ಕಂಪನಿಗೆ ಕಮಾಂಡರ್ ಆಗಿದ್ದರು ಮತ್ತು ಡಿಸೆಂಬರ್ 7 ಮತ್ತು 8 1971 ರಂದು ಶಾಕರ್‌ಗಢ್ ಸೆಕ್ಟರ್‌ನಲ್ಲಿ ಚಕ್ ಅಮ್ರು ರೈಲು ನಿಲ್ದಾಣವನ್ನು ವಶಪಡಿಸಿಕೊಳ್ಳುವ ಜವಾಬ್ದಾರಿಯನ್ನು ವಹಿಸಲಾಯಿತು. ಪಾಕಿಸ್ಥಾನಿ ಸೈನ ವಶಪಡಿಸಿಕೊಂಡಿದ್ದ ಚಕ್ ಅಮ್ರು ರೈಲು ನಿಲ್ದಾಣವು ಪಾಕಿಸ್ಥಾನಿ ಸೈನ್ಯದ ಕಾರ್ಯಾಚರಣೆಗೆ ಸಹಾಯಕವಾಗಿದ್ದ ತಾಣ. ತನ್ನ ಕಾರ್ಯಾಚರಣೆಯನ್ನು ಮುಂದುವರೆಸಲು ಭಾರತೀಯ ಸೇನೆಗೆ ಅತ್ಯಗತ್ಯ ಚಕ್ ಅಮ್ರು ರೈಲು ನಿಲ್ದಾಣ. ಮೇಜರ್ ಗುರುದೇವ್ ಅವರು 900ಗಜಗಳಷ್ಟು ಆಳವಾದ  ಕಂದಕ ಮೂಲಕ ದಾಳಿಯನ್ನು ಮುನ್ನಡೆಸಿದರು. ಈ ಧೈರ್ಯಶಾಲಿ ದಾಳಿಯು ಶತ್ರುವನ್ನು ಆಶ್ಚರ್ಯಕ್ಕೆ ಒಳಪಡಿಸಿತು ಮತ್ತು ಸೋಲಿಸಲ್ಪಟ್ಟಿತು. ಪಾಕಿಸ್ಥಾನಿ ಸೈನ್ಯದ ಮರುಸಂಘಟನೆಯ ಸಮಯದಲ್ಲಿ, ಮೇಜರ್ ಗುರುದೇವ್‌ರ ಕಂಪನಿಯು ತೀವ್ರವಾದ ಮಧ್ಯಮ ಮೆಷಿನ್ ಗನ್ ಮತ್ತು ಫಿರಂಗಿ ಗುಂಡಿನ ದಾಳಿಗೊಳಪಟ್ಟಿತು. ಇದರ ಹೊರತಾಗಿಯೂ, ಮೇಜರ್ ಗುರುದೇವ್ ತಮ್ಮ ಸ್ಥಾನಗಳನ್ನು ಹಿಡಿದಿಡಲು ತಮ್ಮ ಸಂಗಡಿಗರನ್ನು ಪ್ರೋತ್ಸಾಹಿಸಲು ಒಂದು ಕಂದಕದಿಂದ ಇನ್ನೊಂದು ಕಂದಕಕ್ಕೆ ತೆರಳಿದರು. ಹಾಗೆ ಮಾಡುವಾಗ, ಮೇಜ್ ಗುರುದೇವ್ ಶತ್ರುವಿನ ಮಧ್ಯಮ ಮೆಷಿನ್ ಗನ್ ದಾಳಿಯಿಂದ ತೀವ್ರವಾಗಿ ಗಾಯಗೊಂಡರು. ಆದಾಗ್ಯೂ, ಅವರು ಹಿಂದಿರುಗಲು ನಿರಾಕರಿಸಿದರು ಮತ್ತು ತಮ್ಮ ಕಂಪನಿಯು ಚಕ್ ಅಮ್ರು ರೈಲು ನಿಲ್ದಾಣವನ್ನು ವಶಪಡಿಸಿಕೊಳ್ಳುವವರೆಗೂ ತನ್ನ ಸೈನಿಕರನ್ನು ನಿರ್ದೇಶಿಸುತ್ತಲೇ ಇದ್ದರು. ಮೇಜ್ ಗುರ್ದೇವ್ ಅವರನ್ನು ನಂತರ ವೈದ್ಯಕೀಯ ಸೌಲಭ್ಯಕ್ಕೆ ಸ್ಥಳಾಂತರಿಸುವಾಗ ಹುತಾತ್ಮರಾದರು. ಮೇಜರ್ ಗುರುದೇವ್ ಸಿಂಗ್ ಜಸ್ವಾಲ್ ಅವರ ಶೌರ್ಯ, ಮಣಿಯದ ಹೋರಾಟದ ಮನೋಭಾವ ಮತ್ತು ಅತ್ಯುನ್ನತ ತ್ಯಾಗಕ್ಕಾಗಿ "ವೀರ ಚಕ್ರ" ಪ್ರಶಸ್ತಿಯನ್ನು ನೀಡಲಾಯಿತು. ಇವರಿಗೆ ಕರಾವಳಿ ತರಂಗಿಣಿಯ ಹೆಮ್ಮೆಯ ಸಲ್ಯೂಟ್.

Category
ಕರಾವಳಿ ತರಂಗಿಣಿ