image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಲ್ಯಾನ್ಸ್ ನಾಯಕ್ ಅಹಮದ್ ನಜೀರ್ ವನಿ

ಲ್ಯಾನ್ಸ್ ನಾಯಕ್ ಅಹಮದ್ ನಜೀರ್ ವನಿ

ಇದು ಉಗ್ರನಾಗಲು ತರಬೇತಿ ಪಡೆಯುತ್ತಿದ್ದ ಕಾಶ್ಮೀರಿ ಯುವಕನೊಬ್ಬ ಉಗ್ರವಾದದ ಸಿದ್ದಾಂತಗಳು ಸರಿಯಾದುದಲ್ಲವೆಂದು ಗ್ರಹಿಸಿ ಉಗ್ರವಾದವನ್ನು ಮನಸಾರೆ ತ್ಯಜಿಸಿ ದೇಶಪ್ರೇಮಿ ಸೈನಿಕನಾಗಿ ನೂರಾರು ಯುವಕರಿಗೆ ಮಾದರಿಯಾಗಿ ದೇಶಸೇವೆ ಮಾಡುತ್ತಾ ಪ್ರಾಣ ತ್ಯಾಗ ಮಾಡಿದ, ಹಾಗೆ ಸುಮಾರು 15 ವರ್ಷಗಳ ಕಾಲ ಭಾರತೀಯ ಸೈನ್ಯದ ಸೇವೆ ಮಾಡುತ್ತಾ ಮೂತ್ತಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಿದ ಲ್ಯಾನ್ಸ್ ನಾಯಕ್ ಅಹಮದ್ ನಜೀರ್ ವನಿಯವರ ಸಣ್ಣ ಪರಿಚಯ. ಉಗ್ರವಾದದಿಂದ ಹೊರಬಂದ ಲ್ಯಾನ್ಸ್ ನಾಯಕ್ ಅಹಮದ್ ನಜೀರ್ ವನಿ 2004 ರಲ್ಲಿ ಟೆರಿಟೋರಿಯಲ್ ಆರ್ಮಿಯ 162 ಬೆಟಾಲಿಯನ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. 162 ಟಿಎ ಯ ಸೈನಿಕರು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಸ್ಥಳೀಯ ಪ್ರದೇಶಗಳಿಂದ ಬರುವ ಈ ಸೈನಿಕರು ಸೌಂಡ್ ನೆಟ್ವರ್ಕ್(ಸ್ಥಳಿಯವಾಗಿ ಪ್ರಭಾವಿತ) ಹೊಂದಿದ್ದು, ಭಯೋತ್ಪಾದಕರ ಇರುವಿಕೆಯ ಮಾಹಿತಿಯನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ, ಇದರಿಂದ ಹಲವಾರು ಉಗ್ರ ಚಟುವಟಿಕೆಗಳ ಮಾಹಿತಿ ಸೈನ್ಯಕ್ಕೆ ಸಿಗುತ್ತರುತ್ತದೆ. ವನಿಯು 34 ರಾಷ್ಟ್ರೀಯ ರೈಫಲ್ಸ್ನೊಂದಿಗೆ 23 ನವೆಂಬರ್ 2014 ರಂದು ಕಾರ್ಯನಿರ್ವಹಿಸುತ್ತಿದ್ದರು, ಆಗ ಬಟಗುಂದ ಗ್ರಾಮದಲ್ಲಿ ಆರು ಭಾರೀ ಶಸ್ತ್ರಸಜ್ಜಿತ ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಲಷ್ಕರ್-ಇ-ತೊಯ್ಬಾ ಭಯೋತ್ಪಾದಕರು ಇರುವುದಾಗಿ ಗುಪ್ತಚರ ಮಾಹಿತಿ ಪಡೆಯಿತು. ವಾನಿ ಮತ್ತು ಆತನ ತಂಡವು ಭಯೋತ್ಪಾದಕರ ತಪ್ಪಿಸಿಕೊಳ್ಳುವ ಮಾರ್ಗವನ್ನು ತಡೆಯುವ ಕೆಲಸ ಮಾಡಿದರು. ಅಪಾಯವನ್ನು ಗ್ರಹಿಸಿದ ಭಯೋತ್ಪಾದಕರು ಒಳಗಿಂದಲೇ ಪ್ರಯತ್ನಿಸಿದರು, ಮನಬಂದAತೆ ಗುಂಡು ಹಾರಿಸಿದರು ಮತ್ತು ಗ್ರೆನೇಡ್‌ಗಳನ್ನು ಎಸೆದರು. ಸನ್ನಿವೇಶದಿಂದ ವಿಚಲಿತರಾಗದೆ, ವಾನಿ ತನ್ನ ಹಿಡಿತವನ್ನು ಬಿಗಿಗೊಳಿಸಿದರು ಮತ್ತು ಒಬ್ಬ ಭಯೋತ್ಪಾದಕನನ್ನು ತೀರಾ ಹತ್ತಿರದಿಂದ ಕೊಂದರು. ಇನ್ನೊಬ್ಬ ಭಯೋತ್ಪಾದಕ ಅಡಗಿದ್ದ ಮನೆಯೊಂದನ್ನು ಪ್ರವೇಶಿಸಿದರು. ಭಯೋತ್ಪಾದಕ ಪಲಾಯನ ಮಾಡಲು ಯತ್ನಿಸುತ್ತಿದ್ದಂತೆ, ವಾನಿ ಆತನೊಂದಿಗೆ ಬರಿ ಕೈಯಿಂದ ಹೋರಾಡಿ ಕೊಂದರು, ತಾವೂ ಗಾಯಗೊಂಡರು. ಇನ್ನೊಬ್ಬ ಉಗ್ರನನ್ನು ಹೊಡೆದುರುಳಿಸುವಾಗ ಅವನ ಗನ್‌ನಿಂದ ಬಂದ ಗುಂಡುಗಳು ಲ್ಯಾನ್ಸ್ ನಾಯಕ್ ಅಹಮದ್ ನಜೀರ್ ವನಿಯವರನ್ನು ತೀವ್ರ ಗಾಯಗೊಳಿಸಿ ಕೊನೆಗೆ, ವಾನಿ ಮಿಲಿಟರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಈ ಹೋರಾಟದಲ್ಲಿ ಕೊಲ್ಲಲ್ಪಟ್ಟ ಉಗ್ರರು ಭಾರತೀಯ ಸೈನ್ಯದ "ಮೋಸ್ಟ ವಾಂಟೆಡ್" ಪಟ್ಟಿಯಲ್ಲಿದ್ದವರು. ವನಿ ಅವರಿಗೆ ಎರಡು ಬಾರಿ ಸೇನಾ ಮೆಡಲನ್ನು ನೀಡಿ ಗೌರವಿಸಲಾಗಿದೆ. ಮರಣೋತ್ತರ "ಅಶೋಕ ಚಕ್ರ" ಲ್ಯಾನ್ಸ್ ನಾಯಕ್ ಅಹಮದ್ ನಜೀರ್ ವನಿಯವರನ್ನು ಹುಡುಕಿಕೊಂಡು ಬಂದಿತ್ತು. ಕಾಶ್ಮೀರ ಎಂದರೆ ಬುಹ್ರಾನ್ ವಾನಿ ಎನ್ನುತ್ತಿದ್ದ ದೇಶ ದ್ರೋಹಿಗಳಿಗೆ ಅದು ತಪ್ಪು, ಕಾಶ್ಮೀರ ಎಂದರೆ ಲ್ಯಾನ್ಸ್ ನಾಯಕ್ ಅಹಮದ್ ನಜೀರ್ ವನಿ ಎಂದು ಕಾಶ್ಮೀರಿಗಳು ಎದೆಯುಬ್ಬಿಸಿ ಹೇಳುವಂತೆ ಬಾಳಿದರು ಲ್ಯಾನ್ಸ್ ನಾಯಕ್ ಅಹಮದ್ ನಜೀರ್ ವನಿ, ಏಕೆಂದರೆ ಸೇನಾ ಗೌರವದೊಂದಿಗೆ ನಡೆದ ಅವರ ಅಂತ್ಯ ಸಂಸ್ಕಾರಕ್ಕೆ ಹಾಜರಾಗಿದ್ದ ಕಾಶ್ಮೀರಿ ಜನಸ್ತೋಮವೇ ಅದನ್ನು ಹೇಳುತ್ತಿತ್ತು. ಮಹಾವೀರನಿಗೆ ಕರಾವಳಿ ತರಂಗಿಣಿ ನಮಿಸುತ್ತದೆ. 

Category
ಕರಾವಳಿ ತರಂಗಿಣಿ