image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಲೆಫ್ಟಿನೆಂಟ್ ಕರ್ನಲ್ ಪಿಕೆಪಿವಿ ಪಣಿಕರ್ ಮಗ ಈ ವೀರ "ಕ್ಯಾಪ್ಟನ್ ಪಿ ವಿ‌ ವಿಕ್ರಮ್"

ಲೆಫ್ಟಿನೆಂಟ್ ಕರ್ನಲ್ ಪಿಕೆಪಿವಿ ಪಣಿಕರ್ ಮಗ ಈ ವೀರ "ಕ್ಯಾಪ್ಟನ್ ಪಿ ವಿ‌ ವಿಕ್ರಮ್"

ಕಾರ್ಗಿಲ್ ಎಂದೊಡನೆ ವಿಕ್ರಮ್ ಎಂಬ ಹೆಸರೂ ನೆನಪಾಗುತ್ತದೆ. ಆದರೆ ನಾವಿಲ್ಲಿ ಕ್ಯಾಪ್ಟನ್ ವಿಕ್ರಮ್ ಭಾತ್ರರ ಬಗ್ಗೆ ಹೇಳುತ್ತಿಲ್ಲ. ಕಾರ್ಗಿಲ್ ಯುದ್ಧದಲ್ಲಿ ಆರ‍್ಟಿಲರಿ ಸಪೋರ್ಟ್ ನೀಡಿದ 141 ಫೀಲ್ಡ್ ರೆಜಿಮೆಂಟ್‌ನ ಕ್ಯಾಪ್ಟನ್ ಪಿ.ವಿ. ವಿಕ್ರಮರನ್ನು ನೆನಪಿಸಿ ಕೊಳ್ಳುತ್ತಿದ್ದೇವೆ. ತಮ್ಮ ತಂದೆ ಲೆಫ್ಟಿನೆಂಟ್ ಕರ್ನಲ್ ಪಿಕೆಪಿವಿ ಪಣಿಕರ್ ಕಾರ್ಯನಿರ್ವಹಿಸಿದ ಅದೇ 141 ಫೀಲ್ಡ್ ರೆಜಿಮೆಂಟ್‌ನಲ್ಲಿ ಕ್ಯಾಪ್ಟನ್ ಪಿ.ವಿ. ವಿಕ್ರಮ್ ದೇಶ ಸೇವೆ ಮಾಡಲು ಸೇರಿಕೊಂಡರು. ತಮ್ಮ ತಂದೆ ಸೈನ್ಯಾಧಿಕಾರಿಯಾದ್ದರಿಂದ ಸೈನ್ಯದ ನಿಕಟ ಪರಿಚಯ ಮತ್ತು ತಂದೆಯ ಸ್ಪೂರ್ತಿ ಸೈನ್ಯದ ಮೇಲೆ ಕ್ಯಾಪ್ಟನ್ ಪಿ.ವಿ. ವಿಕ್ರಮ್ ಒಲವು ಹೊಂದುವಂತೆ ಮಾಡಿತು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಕಕ್ಸಾರ್ಸೆಸೆಕ್ಟರ್ ನಲ್ಲಿ ಭಾರತೀಯ ಪೋಸ್ಟನ್ನು ಪಾಕಿಸ್ಥಾನಿ ಸೇನೆ ವಶಪಡಿಸಿಕೊಂಡಾಗ ಅದನ್ನು ಹಿಂಪಡೆಯಲು ತೆರಳಿದ  4ನೇ ಜಾಟ್ ರೆಜಿಮೆಂಟಿನ ಯೋಧರಿಗೆ ಆರ‍್ಟಿಲರಿ ಸಪರ‍್ಟ್ ನೀಡುವ ಜವಾಬ್ದಾರಿ ಕ್ಯಾಪ್ಟನ್ ಪಿ.ವಿ. ವಿಕ್ರಮ್ ರ ತಂಡಕ್ಕೆ ವಹಿಸಲಾಯಿತು. ಆರ‍್ಟಿಲರಿ ವೀರನ ಬಲಿದಾನ ನಮ್ಮ ಯೋಧರು ಬೆಟ್ಟ ಹತ್ತಿ ವೈರಿಗಳ ಬಳಿ ಹೋಗುವಾಗ, ವೈರಿಗಳ ಗಮನ ಬೇರೆಡೆ ಸೆಳೆಯಲು ಮತ್ತು ನಮ್ಮ ಯೋಧರು ವೈರಿಗಳನ್ನು ಹತ್ತಿರದಿಂದ ಗುರುತಿಸಿ ಅವರನ್ನು ಹೊಡೆದುರುಳಿಸಲು ರ‍್ಟಿಲರಿ ಸಪರ‍್ಟ್ ತುಂಬಾ ಮುಖ್ಯ. ಈ ಆರ‍್ಟಿಲರಿ ಪಡೆಯ ದಾಳಿಯಲ್ಲಿ ಕೆಲವೊಮ್ಮೆ ಶತ್ರುಗಳ ಬಂಕರ್‌ಗಳು ಹೇಳ ಹೆಸರಿಲ್ಲದಂತೆ ನಾಶವಾಗುತ್ತವೆ. ಇಂಥ ಆರ‍್ಟಿಲರಿ ಪಡೆಯನ್ನು ಮುನ್ನಡೆಸಿದವರು ಕ್ಯಾಪ್ಟನ್ ಪಿ.ವಿ. ವಿಕ್ರಮ್. ಕರಾರುವಕ್ಕಾಗಿ ಆರ‍್ಟಿಲರಿ ದಾಳಿ ಮಾಡುತ್ತಾ ತನ್ನ ಯೋಧರು ಬೆಟ್ಟ ಹತ್ತಿ ಹೋಗಲು ಅನುವು ಮಾಡಿ ಕೊಡುತ್ತಿದ್ದರು. ಹೀಗೆ ಕಕ್ಸಾರ್ ಸೆಕ್ಟರ್‌ನಲ್ಲೂ ದಾಳಿ ಮಾಡುತ್ತಿದ್ದಾಗ ಶತ್ರು ಸೈನ್ಯದಿಂದ ತೀವ್ರವಾದ ಗುಂಡಿನ ದಾಳಿ ನಡೆದು ಕ್ಯಾಪ್ಟನ್ ಪಿ.ವಿ. ವಿಕ್ರಮ ಗಾಯಗೊಂಡರೂ ತಮ್ಮ ಆಕ್ರಮಣವನ್ನು ನಿಲ್ಲಿಸದೇ, ಶತ್ರುಗಳೂ ತನ್ನತ್ತ ಆರ‍್ಟಿಲರಿ ಅಟಾಕ್ ಶುರು ಮಾಡಿದರೂ, ಪ್ರಾಣವನ್ನು ಲೆಕ್ಕಿಸದೆ ತಮ್ಮ ದಾಳಿಯನ್ನು ಮುಂದುವರೆಸಿ ಹಲವಾರು ಬಾರತೀಯ ಪೋಸ್ಟನ್ನು  4ನೇ ಜಾಟ್ ರೆಜಿಮೆಂಟಿನ ಯೋಧರು ವಶಪಡಿಸಿಕೋಳ್ಳುವಲ್ಲಿ ಕ್ಯಾಪ್ಟನ್ ಪಿ.ವಿ. ವಿಕ್ರಮ್ ಮಹತ್ವದ ಪಾತ್ರ ವಹಿಸಿದ್ದರು. ಹೀಗೆ ದಾಳಿ ಆಗುತ್ತಿರುವಾಗ ವೈರಿಗಳ ಕಡೆಯಿಂದ ಸಿಡಿದ ಮಾರ್ಟರ್ ಶೇಲ್ ಒಂದು ಕ್ಯಾಪ್ಟನ್ ಪಿ.ವಿ. ವಿಕ್ರಮರ ಹತ್ತಿರವೇ ಸಿಡಿದಿದ್ದರಿಂದ ಕ್ಯಾಪ್ಟನ್ ಪಿ.ವಿ. ವಿಕ್ರಮ್ ಕಾರ್ಗಿಲ್ ಲ್ಲಿ ವೀರ ಮರಣವನ್ನಪ್ಪಿದರು. ಈ ವಿಷಯವನ್ನು ಅವರ ತಂದೆಗೆ ತಿಳಿಸಿದಾಗ "ನಾನು ದೇಶಕ್ಕಾಗಿ ಎರಡು ಯುದ್ಧದಲ್ಲಿ ಭಾಗಿಯಾದರೂ ನನಗೆ ದೊರೆಯದ ವೀರ ಮರಣ ನನ್ನ ಮಗನಿಗೆ ದೊರೆಯಿತು" ಎಂದು ಉಮ್ಮಳಿಸಿ ಬಂದ ದುಃಖವನ್ನು ಸಹಿಸುತ್ತಾ ನುಡಿದರು. ತಮ್ಮ ಮಗನ ಸೇನಾ ಮೆಡಲ್‌ಗಳು, ಪತ್ರಗಳು, ಶುಭಾಶಯ ಪತ್ರಗಳು ಮತ್ತು ಇತರೆ ವಸ್ತುಗಳನ್ನು ಜೋಪಾನವಾಗಿ ಇಟ್ಟು, ತಮ್ಮಲ್ಲಿ ಬಂದವರಿಗೆ ಹೆಮ್ಮೆಯಿಂದ ತೋರಿಸುತ್ತಾರೆ ಈ ವೀರ ಯೋಧನ ತಂದೆ. ದೇಶ ಸೇವೆಯನ್ನೇ ಉಸಿರಾಗಿಸಿಕೊಂಡಿರುವ ಲೆಫ್ಟಿನೆಂಟ್ ಕರ್ನಲ್ ಪಿಕೆಪಿವಿ ಪಣಿಕರ್ ಕುಟುಂಬಕ್ಕೆ ಕರಾವಳಿ ತರಂಗಿಣಿಯ ಮನದಾಳದ ಸೆಲ್ಯೂಟ್.

Category
ಕರಾವಳಿ ತರಂಗಿಣಿ