image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸೇನಾ ದಿನದಂದು ಹುಟ್ಟಿ, ಸೇನೆಗೆ ಮುಡಿಪಾದ ದೀರ ಕ್ಯಾಪ್ಟನ್ ಪವನ್ ಕುಮಾರ್...

ಸೇನಾ ದಿನದಂದು ಹುಟ್ಟಿ, ಸೇನೆಗೆ ಮುಡಿಪಾದ ದೀರ ಕ್ಯಾಪ್ಟನ್ ಪವನ್ ಕುಮಾರ್...

ಸೇನಾ ದಿನದಂದು ಹುಟ್ಟಿ ಸೇನೆಗೇ ಮುಡಿಪಾದ ವೀರ. ಸೇನಾ ದಿನವಾದ ಜನವರಿ 15, 1993ರಂದು ತನ್ನ ಹೆತ್ತವರಿಗೆ ಒಬ್ಬನೇ ಮಗನಾಗಿ ಹುಟ್ಟಿದವರು ಪವನ್ ಕುಮಾರ್. ಅದೇನೋ ಸೇನಾ ದಿನದಂದು ಹುಟ್ಟಿದ ಈ ವೀರ ಸೇನೆ ಸೇರುವುದನ್ನೇ ಗುರಿಯಾಗಿಸಿಕೊಂಡು. ಸಣ್ಣ ವಯಸ್ಸಿನಲ್ಲೇ ದೇಶ ರಕ್ಷಣೆಗಾಗಿ ಪ್ರಾಣ ತ್ಯಾಗಮಾಡಿದರು. 2013ರರಲ್ಲಿ ತನ್ನ ಇಪ್ಪತ್ತನೇ ವಯಸ್ಸಿಗೇ ಸೈನ್ಯ ಸೇರಿದ ಇವರು ಡೋಗ್ರಾ ರೆಜಿಮೆಂಟಿನ ಭಾಗವಾಗಿದ್ದರು. ಅಲ್ಲಿಂದ ಸೇನೆಯ ಸ್ಪೆಷಲ್ ಫೋರ್ಸ್ "ಮರೂನ್ ಬೆರೆಟ್" ಅಥವಾ 'ಪಾರಾಚೂಟ್ ರೆಗಿಮೆಂಟ್'ಗೆ ಹೆಸರು ನೊಂದಾಯಿಸಿದರು. ಮರೂನ್ ಬೆರೆಟ್ ಟ್ರೇನಿಂಗ್ ಹೇಗಿರುತ್ತದೆ ಎಂದರೆ ನರಕ ಎಂಬ ಕಲ್ಪನೆಯನ್ನೇ ಈ ಯೋಧರಿಗೆ ಮರೆಸುತ್ತದೆ. ಮುಂದೆ ನರಕವನ್ನು ಆಳುವಂಥ ಮನಸ್ಥಿತಿ ಮತ್ತು ಧೃಢತೆ ಇವರಲ್ಲಿ ಅವ್ಯಕ್ತವಾಗುತ್ತದೆ. ಹಾಗೇ ಸಾವಿರದಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಈ ತರಬೇತಿಯನ್ನು ಪೂರ್ಣಗೋಳಿಸುತ್ತಾರೆ. ಅಂಥ ಕಠಿಣಾಥಿ ಕಠಿಣ ತರಬೇತಿ ಪಡೆದ ಪವನ್ ಕುಮಾರ್ 'ಡೆಸರ್ಟ್ ಸ್ಕಾರ್ಪಿಯನ್' ಎಂದೇ ಹೆಸರು ಪಡೆದವರು. ಮುಂದೆ ಕ್ಯಾಪ್ಟನ್ ಪವನ್ ಕುಮಾರ್ ಪ್ಯಾರಾ ಎಸ್ ಎಫ್ ಪಡೆಯಲ್ಲಿ ಸೇರಿಕೊಂಡರು. 2016 ರ ಫೆಬ್ರವರಿಯಲ್ಲಿ ಲಷ್ಕರ್ ಎ ತೋಯ್ಬಾದ ನಾಲ್ಕು ಶಸ್ತ್ರಸಜ್ಜಿತ ಉಗ್ರರು ಕಾಶ್ಮೀರದ ಪಾಂಪೋರ್‌ನಲ್ಲಿ ದಾಳಿ ಮಾಡಿ ಇಬ್ಬರು ಸಿಆರ್‌ಪಿಎಫ್ ಪೋಲಿಸ್ ಹಾಗೂ ಒಬ್ಬ ನಾಗರೀಕನನ್ನು ಕೊಂದು ಭಾರತದ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆಯ ಕಟ್ಟಡದಲ್ಲಿ ಒತ್ತೆಯಾಳುಗಳನ್ನು ಇಟ್ಟುಕೊಳ್ಳುತ್ತಾರೆ. ಇವರನ್ನು ಸದೆಬಡಿಯಲು ಸೇನೆಯ ಸ್ಪೆಷಲ್ ಫೋರ್ಸ್ ಗೆ ಆಹ್ವಾನ ನೀಡಲಾಯಿತು. ಸೇನೆಯ ಸ್ಪೆಷಲ್ ಫೋರ್ಸ್ ತಂಡದಲ್ಲಿ ಮುಂಚೂಣಿಯಲ್ಲಿದ್ದವರು ಕ್ಯಾಪ್ಟನ್ ಪವನ್ ಕುಮಾರ್. ಎರಡು ದಿನ ನಡೆದ ಈ ಕಾರ್ಯಚರಣೆಯು ಇತಿಹಾಸವನ್ನೇ ಸೃಷ್ಟಿಸಿದೆ. ತಮ್ಮ ಈ ತಂಡವನ್ನು ಮುನ್ನಡೆಸಿದ ಕ್ಯಾಪ್ಟನ್ ಪವನ್ ಕುಮಾರ್ ಅವರ ಮುಂದೆ ಇದ್ದ ದೊಡ್ಡ ಸವಾಲೆಂದರೆ ಉಗ್ರರಿಂದ ಒತ್ತೆಯಾಳುಗಳ ರಕ್ಷಣೆ, ಏಕೆಂದರೆ ಉಗ್ರರು ಅತೀ ದೊಡ್ಡ ದಾಳಿಗೆ ತಯಾರಿ ಮಾಡಿಕೊಂಡೇ ಬಂದಿರುತ್ತಾರೆ. ಇಂಥ ಸನ್ನಿವೇಶದಲ್ಲಿ ಎದುರಾಳಿಗೆ ಎದೆಕೊಟ್ಟು ಹೋರಾಡುವುದೇ ಉಳಿದಿರುವ ಮಾರ್ಗ. ಮುಂದಿಡುವ ಹೆಜ್ಜೆ ತನ್ನ ಸಾವನ್ನು ಹತ್ತಿರ ಕರೆಯುತ್ತದೆ ಎನ್ನುವುದು ತಿಳಿದಿದ್ದರೂ ಕ್ಯಾಪ್ಟನ್ ಪವನ್ ಕುಮಾರ್ ಮುಂದೆ ಹೋಗಿ ಉಗ್ರರಿಗೆ ಚಾಲೆಂಜ್ ಮಾಡಿ ಅವರ ಗಮನವನ್ನು ತಮ್ಮೆಡೆ ಸೆಳೆದು ಒತ್ತೆಯಾಳುಗಳನ್ನು ಬಿಡಿಸುವಲ್ಲಿ ಯಶಸ್ವಿಯಾದರು. ಈ ಸಂಧರ್ಭ ಉಗ್ರರೋಡನೆ ನೇರಾನೇರ ಹೋರಾಡಿ ಇಬ್ಬರನ್ನು ಹೊಡೆದುರುಳಿಸಿದಾಗ ಹಲವಾರು ಗುಂಡುಗಳು ಇವರ ದೇಹದೊಳನುಸುಳಿ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಕೊನೆಯುಸಿರೆಳೆದರು. ಈ ಕಾರ್ಯಾಚರಣೆ ನಡೆಯುವ ಮೂರು ದಿನದ ಹಿಂದೆ ಬೇರೊಂದು ಕಾರ್ಯಾಚರಣೆಯಲ್ಲಿ ಗಾಯಗೋಡಿದ್ದರು ಕ್ಯಾಪ್ಟನ್ ಪವನ್ ಕುಮಾರ್. ಮೆಡಿಕಲ್ ಲೀವ್ ಪಡೆಯಬಹುದಾಗಿತ್ತಾದ್ದರೂ ತನ್ನ ದಕ್ಷತೆಯಿಂದ ಪಾಂಪೋರ್‌ನ ಕಾರ್ಯಾಚರಣೆಯಲ್ಲಿ ತೊಡಗಿಕೊಂಡು ಪ್ರಾಣವನ್ನೇ ತ್ಯಾಗ ಮಾಡಿದರು. ಇವರ ತಂದೆ ತನ್ನ ಒಬ್ಬನೇ ಮಗನ ತ್ಯಾಗವನ್ನು ನೆನೆಯುತ್ತಾ ಮರಣೋತ್ತರ ಶೌರ್ಯ ಪ್ರಶಸ್ತಿ ಸ್ವೀಕರಿಸಿದರು. ಕ್ಯಾಪ್ಟನ್ ಪವನ್ ಕುಮಾರ್ ತ್ಯಾಗಕ್ಕೆ ಕರಾವಳಿ ತರಂಗಿಣಿ ಶಿರಬಾಗಿ ನಮಿಸುತ್ತದೆ.

✍ಪ್ರೀತಂ ರೈ ಇಳಂತಾಜೆ

Category
ಕರಾವಳಿ ತರಂಗಿಣಿ