image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದೇಶ ಸೇವೆಗೆ ಜಾತಿ ಧರ್ಮದ ಹಂಗಿಲ್ಲ ಎನ್ನುವುದನ್ನು ನಿರೂಪಿಸಿದ ವೀರಯೋಧ ಕ್ಯಾಪ್ಟನ್ ಹನೀಫುದ್ದೀನ್

ದೇಶ ಸೇವೆಗೆ ಜಾತಿ ಧರ್ಮದ ಹಂಗಿಲ್ಲ ಎನ್ನುವುದನ್ನು ನಿರೂಪಿಸಿದ ವೀರಯೋಧ ಕ್ಯಾಪ್ಟನ್ ಹನೀಫುದ್ದೀನ್

ಜೀವನದೊಂದಿಗಿನ ತಾಯಿಯ ಸಂಘರ್ಷ ಹನೀಫುದ್ದೀನ್ ಮೇಲೆ ಅಪಾರ ಪರಿಣಾಮ ಬೀರಿತ್ತು, ಹಾಗೆ ತಾಯಿಯು ಶಾಸ್ತ್ರೀಯ ಯ ಸಂಗೀತದ ಒಲವು ಇವರನ್ನೂ ಆವರಿಸಿತ್ತು. ತಾಯಿಯಿಂದಾಗಿ ಶಿಸ್ತು, ಸಂಯಮ, ಶ್ರದ್ಧೆಯನ್ನು ಮೈಗೂಡಿಸಿಕೊಂಡಿದ್ದು, ಹನೀಫುದ್ದೀನ್ ಸೈನ್ಯಕ್ಕೆ ಸೇರಲು ಪ್ರೇರಣೆಯಾಯಿತು. ಸೈನ್ಯಕ್ಕೆ ಸೇರುವ ಬಯಕೆ ಇದ್ದರೂ ಸರಿಯಾದ ಮಾರ್ಗದರ್ಶನ ಸಿಗದೆ ಇದ್ದಾಗಲೂ ಹಿಂಜರಿಯದೆ ಸತತ ಪ್ರಯತ್ನದಿಂದಾಗಿ 1996 ರಲ್ಲಿ ಸೈನ್ಯ ಸೇರಿದರು. ಹನೀಫುದ್ದೀನ್ 11ನೇ ರಜಪೂತಾನ ರೈಫಲ್ಸನಲ್ಲಿ ಲೆಫ್ಟಿನೆಂಟ್ ಆಗಿ 1997 ರಲ್ಲಿ ಸೇರಿಕೊಂಡರು.

ಅವರು ಟ್ರೇನಿಂಗ್‌ಗೆ ಅಥವಾ ಎಲ್ಲಾದರೂ ಪೋಸ್ಟಿಂಗ್ ಆದಾಗಲೂ ತಮ್ಮ ಸಂಗಡದವರನ್ನು ಹುರಿದುಂಬಿಸುತ್ತಾ ಸಂತೋಷವಾಗಿಡುತ್ತಿದ್ದರು. ಇಂತಹ ಲೆಫ್ಟಿನೆಂಟ್ ಹನೀಫುದ್ದೀನ್ ಕ್ಯಾಪ್ಟನ್ ಹನೀಫುದ್ದೀನ್ ಆಗಿ 1999 ರಲ್ಲಿ ಕಾರ್ಗಿಲ್ ನಲ್ಲಿ ನಿಯೋಜನೆಗೊಂಡರು. ಕಾರ್ಗಿಲ್ ಯುದ್ಧ ಇನ್ನೂ ಪೂರ್ಣ ಪ್ರಮಾಣದಲ್ಲಿ ಶುರು ಆಗಿರಲಿಲ್ಲ, ಆಗ ಆಪರೇಷನ್ ಥಂಡರ್ ಬೋಲ್ಟನ್ ಮುಖಾಂತರ ಪರಿಸ್ಥಿತಿ ಅವಲೋಕಿಸಲು ಶತ್ರುಗಳ ಸ್ವರೂಪ ಮತ್ತು ಚಲನವಲನ ತಿಳಿಯಲು ಹಲವು ತಂಡಗಳನ್ನು ಕಳುಹಿಸಲಾಗಿತ್ತು. ಒಂದು ತಂಡವನ್ನು ಮುನ್ನಡೆಸಿದವರು ಕ್ಯಾಪ್ಟನ್ ಹನೀಫುದ್ದೀನ್. ಕ್ಯಾಪ್ಟನ್ ಹನೀಫುದ್ದೀನ್ ಮತ್ತು ತಂಡ ತುರ್ತುಕ್ ಪೋಸ್ಟನ್ನು ವಶಪಡಿಕೋಳ್ಳುವ ಗುರಿಯನ್ನು ಹೊಂದಿದ್ದರು.

ತುರ್ತುಕ್ ಪೋಸ್ಟ್ ಗೆ ಹತ್ತಿರವಾಗುತ್ತಿದ್ದಾಗ ಇವರ ಮೇಲೆ ಆಕ್ರಮಣವಾಯಿತು. ಅಲ್ಲಿವರೆಗೆ ಶತ್ರುಗಳು ಬರೀ ಹತ್ತಾರು ಮುಜಾಹಿದಿನ್‌ಗಳು ಎಂದುಕೋಡವರಿಗೆ ದಿಗ್ಭ್ರಮೆ ಕಾದಿತ್ತು. ಏಕೆಂದರೆ ಈ ಬಾರಿ ಆಕ್ರಮಣ ನಡೆಸಿದ್ದು ಮೆಶಿನ್‌ಗನ್ ಮಾತ್ರವಲ್ಲ, ಬದಲಾಗಿ ಆರ್ಟಿಲರಿ ಶೆಲ್‌ಗಳು ಕೂಡ. ಈ ಬಗ್ಗೆ ಬೇಸ್‌ಗೆ ಸುದ್ದಿ ಮುಟ್ಟಿಸಿದ ಕ್ಯಾಪ್ಟನ್ ಹನೀಫುದ್ದೀನ್ ತನ್ನ ಸಂಗಡಿಗರು ಸುರಕ್ಷಿತರಾಗಿರಬೇಕೆಂದು ತಾನು ಮಾತ್ರ ಮುನ್ನುಗ್ಗಿ ಶತ್ರುಗಳನ್ನು  ಎದುರಿಸಿದರು. "ರಾಜಾ ರಾಮಚಂದ್ರಕೀ ಜೈ" ಎಂದು ಘೋಷಣೆ ಕೋಗುತ್ತಾ ಶತ್ರುಗಳ ಮೇಲೆ ಗಂಡು ಹಾರಿಸುತ್ತಾ ಮುನ್ನುಗ್ಗುತ್ತಾರೆ. ತುರ್ತುಕ್ ಪೋಸ್ಟನಿಂದ 200 ಮೀಟರ್ ದೂರದಲ್ಲಿರುವಾಗ ಹಲವಾರು ಗುಂಡುಗಳು ಅವರ ದೇಹವನ್ನು ಹೊಕ್ಕಿದ್ದವು. ತನ್ನವರನ್ನು ರಕ್ಷಿಸಿ ತಾನು ಹೋರಾಡುತ್ತಾ ಮಡಿದರು. ಕ್ಯಾಪ್ಟನ್ ಹನೀಫುದ್ದೀನ್‌ರಿಂದ ಭಾರತ ಸೈನ್ಯಕ್ಕೆ. ಶತ್ರುಪಾಳಯದಲ್ಲಿ ಉಗ್ರರೋಂದಿಗೆ ಪಾಕಿಸ್ಥಾನಿ ಸೇನೆಯು ಸೇರಿಕೋಂಡಿದೆ ಎಂಬ ವಿಷಯ ಸ್ಪಷ್ಟವಾದವು. ಹಾಗೆಯೆ ತುರ್ತುಕ್ ಪೋಸ್ಟ್ ವಶಪಡಿಸಿಕೊಳ್ಳದೆ ಕ್ಯಾಪ್ಟನ್ ಹನೀಫುದ್ದೀನ್ ಶರೀರವನ್ನು ಹಿಂಪಡೆಯಲು ಅಸಾಧ್ಯವಾಗಿತ್ತು. ಈ ವಿಷಯವನ್ನು ಕ್ಯಾಪ್ಟನ್ ಹನೀಫುದ್ದೀನ್ ರ ತಾಯಿಗೆ ತಿಳಿಸಿದಾಗ ಅವರು "ಮಡಿದ ನನ್ನ ಒಬ್ಬ ಮಗನಿಗಾಗಿ ಸೈನ್ಯದಲ್ಲಿರುವ ಇನ್ನೊಬ್ಬ ಮಗನನ್ನು ಕಳೆದುಕೊಳ್ಳಲಾರೆ" ಎಂದು ತನ್ನ ಮಗನ ವೀರ ಮರಣವನ್ನು ಹೆಮ್ಮಯಿಂದ ಸ್ವೀಕರಿಸಿ, ದೇಶದಕ್ಕಾಗಿ ಹೋರಾಡುವ ಸೈನಿಕರೆಲ್ಲಾ ತನ್ನ ಮಕ್ಕಳಂತೆ ಎಂಬ ವಿಶಾಲ ಹೃದಯವನ್ನು ತೋರಿದರು. ಈ ತಾಯಿಗೆ ಹಾಗೂ ದೇಶಕ್ಕಾಗಿ ಮಡಿದ ವೀರ ಯೋಧನಿಗೆ ಕರಾವಳಿ ತರಂಗಿಣಿಯ ಸಲಾಂ.

✍ ಪ್ರೀತಂ ರೈ ಇಳಂತಾಜೆ

 

Category
ಕರಾವಳಿ ತರಂಗಿಣಿ