1996 ರ ಗಣರಾಜ್ಯೋತ್ಸವದಲ್ಲಿ ಮರಣೋತ್ತರ 'ಅಶೋಕ ಚಕ್ರ' ಪಡೆದವರು ಕಾಪ್ಟನ್ ಅರುಣ್ ಸಿಂಗ್ ಜಸ್ರೋಟಿಯ. ಆ “ಅಶೋಕ ಚಕ್ರ”ವನ್ನು ಸ್ವೀಕರಿಸಿದವರು ಅರುಣ್ ಸಿಂಗ್ ರ ತಂದೆ ಲೆಪ್ಟಿನೆಂಟ್ ಕರ್ನಲ್ ಪ್ರಭಾತ್ ಸಿಂಗ್ ಜಸ್ರೋಟಿಯ. ಇವರ ಕುಟುಂಬದಲ್ಲಿ ಕಾಪ್ಟನ್ ಅರುಣ್ ಸಿಂಗ್ ಜಸ್ರೋಟಿಯ 3 ನೇ ತಲೆಮಾರಿನ ಸೈನಿಕ. 1996 ರ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ್ದ ಅಮೇರಿಕದ ರಾಯಭಾರಿಯಾಗಿದ್ದ ಫ್ರಾಂಕ್ ವಿಸ್ನರ್, ಮುಂದೆ ಅರುಣ್ ಸಿಂಗ್‌ರ ತಂದೆ ಪ್ರಭಾತ್ ಸಿಂಗ್ ಜಸ್ರೋಟಿಯರಿಗೆ ಪತ್ರ ಬರೆದು ಕಾಪ್ಟನ್ ಅರುಣ್ ಸಿಂಗ್ ಜಸ್ರೋಟಿಯರನ್ನು ಡೆಹ್ರಾಡೂನ್‌ನಲ್ಲಿ ಭೇಟಿಯಾದ ವಿಷಯವನ್ನು ತಿಳಿಸಿತ್ತಾ ಅರುಣ್ ಸಿಂಗ್‌ರ ವೃತ್ತಿಪರತೆಯನ್ನು ಕೊಂಡಾಡಿದ್ದರು. ತನ್ನ ಅಜ್ಜ ಮತ್ತು ತಂದೆಯoತೆ ಸೈನಿಕನಾಗಬೇಕೆಂದು ಬಾಲ್ಯದಲ್ಲಿಯೇ ಕನಸು ಕಂಡಿದ್ದ ಅರುಣ್. ಅದರಂತೆಯೇ ಸೈನಿಕರಾಗಿ 1988 ರಲ್ಲಿ ಸೇನೆಯ 8ನೇ ಬಿಹಾರ ರೆಜಿಂಮೆoಟ್‌ನಲ್ಲಿ ಸೇರಿಕೋಡರು. ನಂತರ ಶತ್ರುಜಿತ್ ಎನ್ನುವ 9 ಪ್ಯಾರಾ ಸ್ಪೆಷಲ್ ಫೋರ್ಸಸ್‌ನಲ್ಲಿ ಸೇರಿಕೋಡರು.
(9 ಪ್ಯಾರಾ ಸ್ಪೆಷಲ್ ಫೋರ್ಸಸ್ ನ್ನು ಅತ್ಯಂತ ಭಯಾನಕ ಎಂದೇ ಕರೆಯಲ್ಪಡುತ್ತದೆ). ಆಗಲೇ ಅರುಣ್ ಸಿಂಗ್ ಸೇನಾ ಮೆಡಲ್‌ನ ಗೌರವ ಕೂಡ ಪಡೆದಿರುತ್ತಾರೆ. ಅಂದು 1995 ರ ಸೆಪ್ಟೆಂಬರ್ 15, ಜಮ್ಮು ಮತ್ತು ಕಾಶ್ಮೀರದ ಲೋಲಾಬ್ ಕಣಿವೆಯ ಗುಹೆಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಉಗ್ರರು ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಅಡಗಿ ಕುಳಿತಿದ್ದಾರೆ ಎನ್ನುವ ಮಾಹಿತಿ ಬರುತ್ತದೆ. ಕೂಡಲೇ ಕಾರ್ಯನಿರತರಾದ ಕಾಪ್ಟನ್ ಅರುಣ್ ಸಿಂಗ್ ಜಸ್ರೋಟಿಯ ತನ್ನ ತಂಡ ಕಟ್ಟಿಕೋಡು ಹೊರಡುತ್ತಾರೆ. ಸುಮಾರು 3000 ಅಡಿ ಎತ್ತರದಲ್ಲಿದ್ದ ಗುಹೆ ತಲುಪಲು ಜಸ್ರೋಟಿಯ ತಂಡ ಹತ್ತು ಗಂಟೆಗಳ ಕಾಲ ಬೆಟ್ಟವನ್ನು ಹತ್ತಿ ಜಾಗರೂಕರಾಗಿ ಗುಹೆಯ ಹತ್ತಿರ ಬರುತ್ತಲೇ ಉಗ್ರರ ಕಡೆಯಿಂದ ಭಾರೀ ಗುಂಡಿನ ಧಾಳಿ ಶುರುವಾಗುತ್ತದೆ. ಇದಕ್ಕೂ ಮೊದಲೇ ತನ್ನ ತಂಡವನ್ನು ಎಚ್ಚರಿಸಿದ್ದ ಜಸ್ರೋಟಿಯಗೆ ಪರಿಸ್ಥತಿಯನ್ನು ಅವಲೋಕಿಸುತ್ತಲೇ ತಿಳಿಯಿತು "ಸುಮ್ಮನೆ ಇಲ್ಲೇ ಕುಳಿತರೆ ತಾನು ಮತ್ತು ತಂಡದವರು ಮುಂದೆ ಹೋಗಲಾರೆವು ಹಾಗು ಸಾವು ನೋವುಗಳು ಹೆಚ್ಚಾದೀತು. ಅದಕ್ಕೆ ತನಗೆ ಕವರ್ ಫೈರ ನೀಡಲು ಹೇಳಿ ತಾನು ಮುನ್ನುಗ್ಗಿದರು".
ಇವರು ಬರುವುದನ್ನು ನೋಡಿದ ಉಗ್ರನೊಬ್ಬ ಇವರತ್ತ ಗುಂಡು ಹಾರಿಸುತ್ತಲೇ ಜಸ್ರೋಟಿಯ ಕೈಯಲಿದ್ದ ಗ್ರೆನೇಡ್‌ನ್ನು ಗುಹೆಯ ಒಳಗೆ ಎಸೆದು ಗುಂಡು ಹಾರಿಸಿದ ಉಗ್ರನನ್ನು ತಮ್ಮ ಡ್ರಾಗರ್‌ನಿಂದ ಕೊಂದರು. ಆಗಲೇ ಅರುಣ್‌ರ ಭುಜಕ್ಕೆ 3 ಗುಂಡು ತಗಲಿದ್ದವು. ಮತ್ತೆ ಮುಂದೆ ನುಗ್ಗಿದ ಜಸ್ರೋಟಿಯ ಗುಂಡಿನ ಮಳೆಗರೆಯುತ್ತಾ ತಮ್ಮ ತಂಡದವರಿಗೆ ಅಚುಕಟ್ಟಾಗಿ ಆಕ್ರಮಣ ಮಾಡಲು ಅನುವು ಮಾಡಿಕೊಟ್ಟರು. ಎಲ್ಲಾ ಉಗ್ರರನ್ನು ಸದೆ ಬಡಿದರು ಮತ್ತು ತಮ್ಮ ಎದೆಗೆ ಹೊಕ್ಕಿದ್ದ ಗುಂಡಿನ ಕಾರಣ ಹತ್ತು ದಿನಗಳ ಕಾಲ ಸೇನಾ ಆಸ್ಪತ್ರೆಯಲ್ಲಿ ಸಾವಿನೊಂದಿಗೂ ಹೋರಾಡಿ ಕೊನೆಯುಸಿರೆಳೆರೆದರು. ಜಸ್ರೋಟಿಯಾರ ಈ ಬಲಿದಾನವು ಇಂದಿಗೂ ಸೇನೆಯಲ್ಲಿ ಪರಚಲಿತದಲ್ಲಿದೆ. ಇವರಿಗೆ ಮರಣೋತ್ತರ ಅಶೋಕ ಚಕ್ರ ನೀಡಿ ಗೌರವಿಸಲಾಗಿದೆ. ಪ್ರಶಸ್ತಿಯನ್ನು ಅವರ ತಂದೆ ಎದೆಯುಬ್ಬಿಸಿ, ಸ್ವಲ್ಪವೂ ವಿಚಲಿತರಾಗದೆ ಸ್ವೀಕರಿಸಿದರು. ಭಾರತಮಾತೆಯ ವೀರ ಪುತ್ರನಿಗೆ ಕರಾವಳಿ ತರಂಗಿಣಿ ನಮಿಸುತ್ತಿದೆ.
✍ ಪ್ರೀತಂ ರೈ ಇಳಂತಾಜೆ