ವರ್ಷಾವರ್ಷ ನಾವೆಲ್ಲರೂ ಕಾರ್ಗಿಲ್ ಯುಧ್ಧದ ವಿಜಯವನ್ನು ನೆನಪಿಸಿಕೊಂಡು, ಸಂಭ್ರಮಿಸುತ್ತಿದ್ದೇವೆ. ಯುಧ್ಧ ಎಂದಾಗ ಗಡಿಯಲ್ಲಿ ಸೈನಿಕರಿದ್ದಾರೆ ಅವರ ಕೆಲಸವೇ ಯುದ್ಧದಲ್ಲಿ ಹೋರಾಡುವುದು ಎಂದು ಅಂದುಕೊಂಡ ಮೂರ್ಖರು ಇಂದಿಗೂ ನಮ್ಮಲ್ಲಿದ್ದಾರೆ. ಮೂರ್ಖರೆನ್ನುವುದಕ್ಕಿಂತ ತಿಳಿದೂ ಮೂರ್ಖರಂತೆ ನಟಿಸುವ ದ್ರೋಹಿಗಳು ಎನ್ನುವುದು ತಪ್ಪಾಗಲಾರದು.
ಯೋಧರೂ ನಮ್ಮಂತೆ ಮನುಷ್ಯರು, ಅವರಿಗೂ ತನ್ನದೇ ಆದ ಕುಟುಂಬವಿರುತ್ತದೆ. ಆ ಕುಟುಂಬ ಇವರ ಬರುವಿಕೆಗಾಗಿ ಕಾಯುತ್ತಿರುತ್ತದೆ ಎನ್ನುವುದನ್ನು ಮರೆಯಲಾಗದು. ಕಾರ್ಗಿಲ್‌ನ ಕೆಲ ಯುಧ್ಧ ಪ್ರದೇಶಗಳು 18000 ಅಡಿ ಎತ್ತರದಲ್ಲಿದ್ದು, ಇವು ಕಡಿದಾದ ಕಣಿವೆಗಳು. ಅಂದು 83 ದಿನಗಳು ನಡೆದ ಈ ಯುಧ್ಧದಲ್ಲಿ 1363 ಯೋಧರು ಗಾಯಗೋಡಿದ್ದಾರೆ ಮತ್ತು 527 ಯೋಧರು ದೇಶಕ್ಕಾಗಿ ಮಡಿದಿದ್ದಾರೆ. ಪರಮ್ ವೀರ್ ಚಕ್ರ (ಪಿವಿಸಿ) ಭಾರತದ ಅತ್ಯುನ್ನತ ಮಿಲಿಟರಿ ಪ್ರಶಸ್ತಿಯಾಗಿದೆ.
ಇದು ಯುದ್ಧಕಾಲದಲ್ಲಿ ಶೌರ್ಯದ ವಿಶಿಷ್ಟ ಕಾರ್ಯಗಳನ್ನು ಪ್ರದರ್ಶಿಸಿದ್ದಕ್ಕಾಗಿ ನೀಡಲಾಗುತ್ತದೆ, ಇದರಲ್ಲಿ 4 ವೀರ ಯೋಧರು ಪರಮ್ ವೀರ ಚಕ್ರ ಪಡೆದಿದ್ದಾರೆ. ‘ಯೋಗೇಂದ್ರ ಸಿಂಗ್ ಯಾದವ್’, ಲೆಫ್ಟಿನೆಂಟ್ ‘ಮನೋಜ್ ಕುಮಾರ್ ಪಾಂಡೆ’, ಕ್ಯಾಪ್ಟನ್ ‘ವಿಕ್ರಮ್ ಬಾತ್ರ’, ರೈಫಲ್ಮನ್ ‘ಸಂಜಯ್ ಕುಮಾರ್’. ಇವರಲ್ಲಿ ಮನೋಜ್ ಕುಮಾರ್ ಪಾಂಡೆ ಮತ್ತು ವಿಕ್ರಮ್ ಬಾತ್ರ ರಿಗೆ ಮರಣೋತ್ತರ ಪರಮ್ ವೀರ್ ಚಕ್ರ ನೀಡಿ ಗೌರವಿಸಲಾಗಿದೆ. ಮಹಾ ವೀರ್ ಚಕ್ರ (ಎಂವಿಸಿ) (ಅಕ್ಷರಶಃ ಶ್ರೇಷ್ಠ ಯೋಧ ಪದಕ) ಪರಮ್ ವೀರ್ ಚಕ್ರದ ನಂತರ ಭಾರತದ ಎರಡನೇ ಅತ್ಯುನ್ನತ ಮಿಲಿಟರಿ ಗೌರವವಾಗಿದೆ.
ಇದನ್ನು 11 ಜನ ವೀರರು ಪಡೆದಿದ್ದಾರೆ. ಕ್ಯಾಪ್ಟನ್ ‘ಅನುಜ್ ನಾಯರ್’, ಮೇಜರ್ ‘ರಾಜೇಂದ್ರ ಸಿಂಗ್ ಅಧಿಕಾರಿ’, ಕ್ಯಾಪ್ಟನ್ ‘ಗರ‍್ಜಿಂದರ್ ಸಿಂಗ್ ಸುರಿ" ನಾಯಕ್ ‘ದಿಗೇಂದ್ರ ಕುಮಾರ್’. ಲೆಫ್ಟಿನೆಂಟ್ ‘ ಬಲವಾನ್ ಸಿಂಗ್’,ನಾಯಕ್ ‘ಇಮ್ಲಿಯಾಕುಮ್ ಅಒ’, ಕ್ಯಾಪ್ಟನ್ ‘ಕೀಶಿಂಗ್ ಕ್ಲಿಫೊರ್ಡ್ ನಾಗ್ರಮ್’, ಕ್ಯಾಪ್ಟನ್ ‘ನೈಕೆಜಾಕುವೊ ಕೆಂಗರೂಸ್’,ಮೇಜರ್ ‘ಪದ್ಮಪತಿ ಆಚಾರ್ಯ’,ಮೇಜರ್ ‘ಸೋನಮ್ ವಾಂಗ್ ಚುಕ್’,ಮೇಜರ್ ‘ವಿವೇಕ್ ಗುಪ್ತ’. ಇವರಲ್ಲಿ ಅನುಜ್ ನಾಯರ್, ರಾಜೇಂದ್ರ ಸಿಂಗ್ ಅಧಿಕಾರಿ, ಗರ‍್ಜಿಂದರ್ ಸಿಂಗ್ ಸುರಿ,ಕೀಶಿಂಗ್ ಕ್ಲಿಫೊರ್ಡ್ ನಾಗ್ರಮ್,ನೈಕೆಜಾಕುವೊ ಕೆಂಗರೂಸ್, ಪದ್ಮಪತಿ ಆಚಾರ್ಯ ಮತ್ತು ವಿವೇಕ್ ಗುಪ್ತ ರಿಗೆ ಮರಣೋತ್ತರ ಮಹಾ ವೀರ್ ಚಕ್ರ ನೀಡಿ ಗೌರವಿಸಲಾಗಿದೆ. ಹಾಗೇ ಸುಮಾರು 9 ಯೋಧರನ್ನು ವೀರ ಚಕ್ರದೊಂದಿಗೆ ಸನ್ಮಾನಿಸಲಾಗಿದೆ.
ಪಾಕಿಸ್ಥಾನದ ಪಾಪಿಗಳು ವಂಚನೆಯಿಂದ ಕಸಿದುಕೊಂಡಿದ್ದ ಭಾರತೀಯ ಪೋಸ್ಟಗಳನ್ನು ವಾಪಸ್ ಪಡೆಯುವಲ್ಲಿ ನಮ್ಮ ಯೋಧರು ಸಫಲರಾಗುವುದರೊಂದಿಗೆ ಜುಲೈ 26 1999 ರಂದು ಆಪರೇಷನ್ ವಿಜಯ್ ಯಶಸ್ವಿಯಾಗಲು ಕಾರಣಿಭೂತರಾದರು ಮತ್ತು ಭಾರತಾಂಬೆಯ ವೀರ ಪುತ್ರರ ಬಲಿದಾನವು ದೇಶ ದ್ರೋಹಿಗಳ ಎದೆ ನಡುಗುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಈ ಯುದ್ಧದಲ್ಲಿ ವೀರ ಮರಣವನ್ನು ಹೊಂದಿದ ಎಲ್ಲಾ ಯೋಧರಿಗೂ ಕರಾವಳಿ ತರಂಗಿಣಿ ಕರ ಮುಗಿದು ನಮಿಸುತ್ತಿದೆ.
✍ ಪ್ರೀತಂ ರೈ ಇಳಂತಾಜೆ