image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನರಹರಿ ಪರ್ವತ

ನರಹರಿ ಪರ್ವತ

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ ಸಿ ರೊಡ್‌ನಿಂದ ಸುಮಾರು ೬ ಕಿ.ಮಿ ದೂರದಲ್ಲಿರುವ ನರಹರಿ ಪರ್ವತ ಸುಮಾರು ೩೫೦ ಅಡಿ ಎತ್ತರವಿದೆ. ಈ ಬೆಟ್ಟದ ತುದಿಯಲ್ಲಿ ಸದಾಶಿವ ದೇವಸ್ಥಾನವಿದೆೆ. ಪುರಾಣ ಕತೆಯ ಪ್ರಕಾರ ನೈಸರ್ಗಿಕವಾಗಿ ನಿರ್ಮಿತವಾದ ಶಂಖ, ಚಕ್ರ, ಗದಾ, ಪದ್ಮಗಳೆಂಬ ಆಕಾರವುಳ್ಳ ನಾಲ್ಕು ತೀರ್ಥಬಾವಿಗಳು, ನಾಗದೇವರು, ಮಹಾಗಣಪತಿ, ಶಿವಮೂರ್ತಿ ಇತ್ಯಾದಿಗಳು ಇಲ್ಲಿನ ಜನಾಕರ್ಷಣೆಯ ಕೇಂದ್ರಬಿಂದುಗಳು. ಮಹಾಭಾರತದ ಕುರುಕ್ಷೇತ್ರ ಯುದ್ಧದ ಬಳಿಕ ಪಾಂಡವರು ತಮ್ಮ ಪಾಪ ವಿಮೋಚನೆಗಾಗಿ ದಕ್ಷಿಣದ ಪುಣ್ಯ ಕ್ಷೇತ್ರಗಳಿಗೆ ಯಾತ್ರೆ ಕೈಗೊಳ್ಳುತ್ತಾರೆ.

ಅದೇ ಸಂದರ್ಭದಲ್ಲಿ ಹರಿ ಮತ್ತು ನರ ಆ ಬೆಟ್ಟವನ್ನೇರುತ್ತಾರೆ. ಅಲ್ಲಿಗೆ ಭೇಟಿ ಕೊಟ್ಟ ಕುರುಹಿಗಾಗಿ ತನ್ನ ಆಯುಧದಿಂದ ಶಂಖ, ಚಕ್ರ, ಗದಾ ಪದ್ಮ ಎಂಬ ನಾಲ್ಕು ತೀರ್ಥಬಾವಿಗಳನ್ನು ಮಾಡುತ್ತಾರೆ. ಅದರಲ್ಲಿಯೇ ಪಾಪಗಳನ್ನು ಕಳೆಯುತ್ತಾರೆ. ಹಾಗೇ ಶಿವಲಿಂಗವನ್ನು ಪ್ರತಿಷ್ಠಾಪಿಸಿ, ಹರನ ಸಮೇತವಾಗಿ ಪೂಜಿಸುತ್ತಾರೆ. ಇದರಿಂದಾಗಿಯೆ ಇಲ್ಲಿಗೆ ನರಹರಿ ಸದಾಶಿವ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ಪ್ರಕೃತಿ ವಿಸ್ಮಯ ಮೂಡಿಸುವ ತಾಣವೇ ನರಹರಿ ಪರ್ವತ. ಸೂರ್ಯೋದಯ ಹಾಗೂ ಸೂರ್ಯಾಸ್ತದ ದೃಶ್ಯ ಸೊಬಗನ್ನು ಸವಿಯಲು ಪ್ರಕೃತಿಯ ಕೊಡುಗೆಯಾದ ಈ ಪರ್ವತ ಏರಿದರೆ ಆಕಾಶ ಮುಟ್ಟಿದ ಅನುಭವ.

ನರಹರಿ ಬೆಟ್ಟ ಸಮುದ್ರ ಮಟ್ಟದಿಂದ ಸಾವಿರ ಅಡಿಗೂ ಹೆಚ್ಹು ಎತ್ತರದಲ್ಲಿದ್ದು ಪ್ರಕೃತಿಯ ಸೌಂದರ್ಯದ ನಡುವೆ ಸದಾಶಿವ ದೇವರ ಸಾನಿಧ್ಯವಿದೆ. ಕಡಲನಗರಿ ಮಂಗಳೂರಿಗೆ ಬೇಟಿ ನೀಡುವ ಸಂದರ್ಭದಲ್ಲಿ ರಮಣೀಯ ಹಾಗೂ ಪವಿತ್ರ ಸ್ಥಳವನ್ನು ಬೇಟಿ ನೀಡಲು ಮರೆಯದಿರಿ.

Category
ಕರಾವಳಿ ತರಂಗಿಣಿ