ಓಂಕಾರೇಶ್ವರ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ನರ್ಮದಾ ನದಿಯ ದಡದಲ್ಲಿರುವ ಮತ್ತೊಂದು ಪವಿತ್ರ ಸ್ಥಳ. ಇದು ಭಾರತದ ೧೨ ಜೋರ್ತಿಲಿಂಗಗಳಲ್ಲಿ ಒಂದಾಗಿದೆ, ಅಲ್ಲಿ ಶಿವನು ಬೆಳಕಿನ ರೂಪದಲ್ಲಿ ಕಾಣಿಸಿಕೊಂಡನು. ಆದ್ದರಿಂದ, ಇದು ಭಾರತದ ಅತ್ಯಂತ ಪೂಜ್ಯ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಪ್ರತಿವರ್ಷ ಲಕ್ಷಾಂತರ ಹಿಂದೂ ಭಕ್ತರು ಮತ್ತು ಪ್ರವಾಸಿಗರು ಭೇಟಿ ನೀಡುತ್ತಾರೆ.
ನರ್ಮದಾ ನದಿಯ ದಡದಲ್ಲಿರುವ ಮತ್ತೊಂದು ತೀರ್ಥಯಾತ್ರೆಯ ತಾಣವಾದ ಮಹೇಶ್ವರ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿದೆ ಮತ್ತು ಇದು ಪ್ರಾಚೀನ ದೇವಾಲಯಗಳು, ಅರಮನೆಗಳು ಮತ್ತು ರಾಜರ ಕಾಲದ ಕಟ್ಟಡಗಳು ಇರುವ ಐತಿಹಾಸಿಕ ಸ್ಥಳಗಳಿಗೆ ಹೆಸರುವಾಸಿಯಾಗಿದೆ.ಭರೂಚ್ ಗುಜರಾತ್ ರಾಜ್ಯದಲ್ಲಿರುವ ಒಂದು ಪ್ರಸಿದ್ದ ತಾಣವಾಗಿದೆ, ಸಾವಿರಾರು ವರ್ಷಗಳ ಹಿಂದೆ ವೈದಿಕ ಕಾಲದಲ್ಲಿ ಸ್ಥಾಪಿತವಾಗಿದೆ ಎಂದು ನಂಬಲಾಗಿದೆ. ಆದ್ದರಿಂದ, ಇಲ್ಲಿ ಸಾಕಷ್ಟು ಐತಿಹಾಸಿಕ ಸ್ಮಾರಕಗಳು ಮತ್ತು ಧಾರ್ಮಿಕ ಸ್ಥಳಗಳನ್ನು ಅದರ ಗಡಿಯೊಳಗೆ ಗುರುತಿಸಬಹುದು.
ಭಾರತದ ಬಹುತೇಕ ಶಿವ ಮಂದಿರದ ಮೂರ್ತಿಗಳನ್ನು ನರ್ಮದೆಯಲ್ಲಿ ಸಿಗುವ ಶಿಲೆಗಳಿಂದ ಮಾಡಿದ್ದಾಗಿದೆ. ಇದಕ್ಕೂ ಒಂದು ಪೌರಾಣಿಕ ಹಿನ್ನಲೆಯಿದೆ. ಒಮ್ಮೆ ನರ್ಮದೆಯು ಕಾಶಿಯಲ್ಲಿ ತಪಸ್ಸು ಮಾಡಿ ಶಿವನನ್ನು ಮೆಚ್ಚಿಸಿದಳು ಆಗ ಶಿವನು ನರ್ಮದಾ ನದಿಯಲ್ಲಿನ ಪ್ರತಿಯೊಂದು ಕಲ್ಲಿಗೂ ಶಿವ ಲಿಂಗದ ಮಹತ್ವ ಸಿಗಲಿ ಎಂದು ವರ ನೀಡಿದನು. ನರ್ಮದೆಯ ಬಗ್ಗೆ ನಮ್ಮ ಋಷಿ ಮುನಿಗಳು ನರ್ಮದಾ ಪುರಾಣವನ್ನು ರಚಿಸಿದ್ದಾರೆ. ಹೀಗೆ ದೇವರು ನಮಗೆ ಪ್ರಕೃತಿಯನ್ನು ಕಾಮದೇನುವಿನಂತೆ ಕರುಣಿಸಿದ್ದಾನೆ.