image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಲೆಕ್ಕೆಸಿರಿ

ಲೆಕ್ಕೆಸಿರಿ

ರಕ್ತೇಶ್ವರಿ ದೈವ ತುಳುವರ ಆದಿಮೂಲ ದೈವ, ಎಲ್ಲಿ ನೀರಿನ ಒಸರು ಹೆಚ್ಚಾಗಿ ಇರುತ್ತದೋ, ಎಲ್ಲಿ ಹಚ್ಚ ಹಸಿರಾಗಿ ಕೃಷಿ, ಬೇಸಾಯ ತುಂಬಿ ತುಳುಕುತ್ತಾ ಬರುತ್ತದೋ ಅಲ್ಲಿ ಲೆಕ್ಕೆಸಿರಿ(ರಕ್ತೇಶ್ವರಿ)ಎಂಬ ಶಕ್ತಿ ತಾನಗಿಯೆ ಉದ್ಬವಗೊಳ್ಳುತ್ತದೆ ಎಂಬುದು ತುಳುವರ ನಂಬಿಕೆ. ಭೂಮಿ ತೂಕದ ದೈವ, ಗರಿಕೆ ಹುಲ್ಲು ಹುಟ್ಟಿಕೊಂಡಾಗ ಹುಟ್ಟಿದ ಶಕ್ತಿ ಎನ್ನುತ್ತಾರೆ. ತುಳುವರ ಆದಿಮೂಲ ಅಲಡೆಗಳಲ್ಲಿ ಅನಾದಿ ಕಾಲದಿಂದಲೂ ಆರಾಧಿಸಿಕೊಂಡು ಬಂದ ಆದಿಮೂಲ ದೈವಶಕ್ತಿಗಳಲ್ಲಿ ಲೆಕ್ಕೆಸಿರಿಯು ಒಂದು. ಹಾಗೆಯೇ ತುಳುನಾಡಿನ ದೈವಗಳು "ಆನ ತರೆ, ಪೊಣ್ಣ ನೆರಿ" ಅಂದರೆ "ಮಮತೆಯಲ್ಲಿ ಹೆಣ್ಣು, ಶೌರ್ಯದಲ್ಲಿ ಗಂಡು" ಎಂದೂ ಹೇಳುತ್ತಾರೆ. ಹಾಗೆಯೇ ಸಮರ ದೇವತೆ ರೂಪದ ದೈವಗಳಲ್ಲಿ ಲೆಕ್ಕೆಸಿರಿಯು ಒಂದಾಗಿದೆ. ಲೆಕ್ಕೆಸಿರಿ ಮೊದಮೊದಲು ಬನದಲ್ಲಿ ಆರಾಧಿಸಿಕೊಂಡು ಬರುತ್ತಿದ್ದು ಕೇವಲ ಕಲ್ಲು, ಬಂಡೆಕಲ್ಲಿನಲ್ಲಿ ಆರಾಧನೆ ಮಾಡಿದ ಕಾಲದಲ್ಲಿ ಲೆಕ್ಕೆಸಿರಿಗೆ ಪರ್ವ ತಂಬಿಲ ಮಾತ್ರ ನಡೆಯುತ್ತಿತ್ತು ಎಂದು ಹೇಳುತ್ತಾರೆ. ನಂತರ ಲೆಕ್ಕೆಸಿರಿಯನ್ನು ಮೂರ್ತಿ ಆರಾಧಕರಾದ ಜೈನರಸರ ಆಳ್ವಿಕೆಯ ಕಾಲದಲ್ಲಿ ಚಾವಡಿಯಲ್ಲಿ ಸ್ಥಾಪನೆ ಮಾಡಿ ನಂಬಲಾರAಬಿಸಿದರು. ಮೂರ್ತಿ ಬಂದಾಗ ಮೂರ್ತಿಯ ಒಂದು ಕೈಯಲ್ಲಿ ಕತ್ತಿ ಇನ್ನೊಂದು ಕೈಯಲ್ಲಿ ಗುರಾಣಿ, ತಲೆಯಲ್ಲಿ ಸಿರಿಮುಡಿ ಇತ್ಯಾದಿ ವರ್ಣನೆ ಬಂತು ಎನ್ನಲಾಗುತ್ತದೆ. ಲೆಕ್ಕೆಸಿರಿಗೆ ಮೊದಲು ಎಲ್ಲಾ ಗುತ್ತು ಬೂಡುಗಳ ಮನೆಗಳಲ್ಲಿ ಚಾವಡಿಯ ಒಳಗಡೆಯೆ ಹೆಚ್ಚಾಗಿ ನೇಮ ನಡೆಯುವ ಪದ್ದತಿಯೂ ಇತ್ತು ಎನ್ನಲಾಗುತ್ತದೆ. ಚಾವಡಿಯ ಒಂದು ಬದಿಯಲ್ಲಿ ಕದಿಕೆ ಇಲ್ಲವೆ ಸೀರೆ ಸುತ್ತು ಕಟ್ಟಿ ಅದರ ಒಳಗೆ ದೈವದ ಹಿಂಬಾಲಕ ಕುಳಿತು ತೆಂಬರೆ ಬಡಿಯುತ್ತ ಸಂಧಿ ಹೇಳುತ್ತ ಹದಿನಾರು ಅವತಾರವಾಗಿ ಅನಂತರದಲ್ಲಿ ಅಣಿಮುಡಿ ಏರಲೂ ಮತ್ತು ಇನ್ನೂ ಕೆಲವೆಡೆ ಬೆಂಕಿಯಲ್ಲಿ ಕುಣಿಯಲು ದೈವ ಲೆಕ್ಕೆಸಿರಿ ಅಂಗಲಕ್ಕೆ ಪ್ರವೇಶಿಸುತ್ತಿತ್ತಂತೆ. ಅಂಗ ದೇಶ ಕೊಂಗನಾಡು ಪೆರಿಯ ಬಡಕಾಯಿ ಗಂಗೆ ಲೆಕ್ಕೆಸಿರಿಯ ಜನನ ಎಂದು ಪಾಡ್ದನದಲ್ಲಿ ಉಲ್ಲೇಖ ಬರುತ್ತದೆ. ಬಾನು ಸೇನಪ್ಪರ ಬೂಡಿನಲ್ಲಿ ಏಳು ವರ್ಷ ಪ್ರಾಯದ ಹೆಣ್ಣು ಮಗಳಾಗಿ ಒಮ್ಮೆ ಕುಣಿದು, ಒಮ್ಮೆ ನಲಿದು, ಒಮ್ಮೆ ಅತ್ತು ಕಾರ್ನಿಕ ತೋರಿದ ಶಕ್ತಿ ಲೆಕ್ಕೆಸಿರಿ. ಅಂದಿನಿAದ ಈ ದೈವ ಹೆಣ್ಣು ಶಕ್ತಿ ಎಂದು ಪ್ರದಾನವಾಗುತ್ತ ಬಂತು. ಆದರೆ ಕೆಲವು ಕಡೆಗಳಲ್ಲಿ ಮೂರ್ತಿಯಲ್ಲಿ ಗಂಡು ಸ್ವರೂಪವನ್ನು ಹೊಂದಿದೆ. ದೈವಕ್ಕೆ ಮೊದಮೊದಲು ಕೋಳಿ ಹೊರಗಡೆ ಕೊಯ್ಯುತ್ತಿದ್ದರಂತೆ ಆದರೆ ಬಾಹ್ಮಣರ ಬಾಹುಳ್ಯ ಹೆಚ್ಚಾದಂತೆ ರಕ್ತಹಾರದ ಸೇವೆ ನಿಂತಿದೆ ಎನ್ನಬಹುದು. ಅರಳು, ಅವಲಕ್ಕಿ, ಬೆಲ್ಲ, ಬಾಳೆಹಣ್ಣು, ತೆಂಗಿನ ಕಾಯಿ, ವಿಲ್ಯದೆಲೆ ಅಡಿಕೆ ಹೊಳು ಇಟ್ಟು ತಂಬಿಲ ಮಾಡಿ, ಸೀಯಾಳ ಇಟ್ಟು ಕೈ ಮುಗಿಯುವ ಪದ್ದತಿ. ಒಟ್ಟಾರೆಯಾಗಿ ಹೇಳಬೇಕೆಂದರೆ ದೇವ ಕ್ರೀಯೆಯಲ್ಲಿ ಇತ್ತೀಚೆಗೆ ಸೇವೆ ಪಡೆಯುವ ಶಕ್ತಿ. ಹದಿನಾರು ಬಾಳೆಎಲೆಗಳಲ್ಲಿ ತಂಬಿಲ ಪಡೆಯುವ ಅಗಾಧ ಶಕ್ತಿಯ ಮೂಲ ದೈವ ಅಂದರೆ ಅದು ಲೆಕ್ಕೆಸಿರಿ.

Category
ಕರಾವಳಿ ತರಂಗಿಣಿ