image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಹಿಂದಿನ ಕಾಲದಲ್ಲಿ ರಾಜರುಗಳು ಗೆಲುವು ಸರ್ವ ಸಿದ್ದವೆಂದು ನಂಬಿ 'ವಿಜಯದಶಮಿ'ಯ ದಿನ ದಂಡಯಾತ್ರೆಗೆ ಹೊರಡುತ್ತಿದ್ದರಂತೆ...

ಹಿಂದಿನ ಕಾಲದಲ್ಲಿ ರಾಜರುಗಳು ಗೆಲುವು ಸರ್ವ ಸಿದ್ದವೆಂದು ನಂಬಿ 'ವಿಜಯದಶಮಿ'ಯ ದಿನ ದಂಡಯಾತ್ರೆಗೆ ಹೊರಡುತ್ತಿದ್ದರಂತೆ...

ನವರಾತ್ರಿ ಮುಗಿದು ವಿಜಯದಶಮಿ ಆಚರಿಸುವ ಈ ದಿನವನ್ನು ವಿಜಯದ ಶಮಿ ಎನ್ಬಲಾಗುತ್ತದೆ. ಹಿಂದಿನ ರಾಜರುಗಳು ಜಯವು ಸಿದ್ದವೆಂದು  ನಂಬಿ ವಿಜಯದಶಮಿಯಂದು ದಂಡಯಾತ್ರೆ ಹೊರಡುತ್ತಿದ್ದರಂತೆ.  ಇಂದಿಗೂ ಸಾಂಕೇತಿಕವಾಗಿ ತಮ್ಮ ಚತುರಂಗ ಸಮೇತವಾಗಿ ರಾಜ್ಯದ ಗಡಿಯನ್ನು ದಾಟಿದಂತೆ ಮಾಡಿ, ಹಿಂದಿರುಗುವ ಪದ್ದತಿ ಕೆಲವು ರಾಜವಂಶಸ್ಥರಲ್ಲಿ  ಉಳಿದಿದೆ.

ವಿಜಯದಶಮಿಯಂದು ಶಮೀವೃಕ್ಷವನ್ನು ಪೂಜಿಸುವುದು ರೂಡಿ. ಶಮಿ ವೃಕ್ಷವನ್ನು  ಬನ್ನಿಮರ ಎನ್ನಲಾಗುತ್ತದೆ. ಈಗಲೂ ವಿಜಯದಶಮಿಯಂದು ಮೈಸೂರು ಒಡೆಯರ ವಂಶಜರು ಸಾಂಕೇತಿಕವಾಗಿ ಮೈಸೂರಿನಲ್ಲಿ ಬನ್ನಿಮಂಟಪಕ್ಕೆ ಮೆರವಣಿಗೆ ಸಮೇತ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ. ಹೀಗೆ ಬನ್ನಿ ಅಥವಾ ಶಮೀ ಮರವು ವಿಜಯದ ಸಂಕೇತವಾದ್ದರಿಂದ ಕನ್ನಡದಲ್ಲಿ ವಿಜಯದಶಮಿಯನ್ನು  ವಿಜಯದ-ಶಮೀ ಎನ್ನುವುದೂ ರೂಡಿ. ವಿಜಯದಶಮಿಗೆ ಪುರಾಣದ ಪ್ರಕಾರ ಹಲವು ಕಥೆಗಳಿದ್ದು, ರಾಮಾಯಣದ ಪ್ರಕಾರ ರಾಮ ರಾವಣನ ಜೊತೆ ಯುದ್ಧ ಮಾಡಿ ರಾವಣನನ್ನು ಕೊಂದು ಸೀತೆಯನ್ನು ಮರಳಿ ತರುತ್ತಾನೆ ಆ ದಿನವೇ ವಿಜಯದಶಮಿ ಎಂದು ಹೇಳಲಾಗುತ್ತದೆ.ಮಹಾಭಾರತ ಕಥೆಯ ಪ್ರಕಾರ ವನವಾಸ ಮುಗಿಸಿದಂತಹ ಪಾಂಡವರು ಅಜ್ಞಾತ ವಾಸಕ್ಕೆ ಹೋಗುವ ಮೊದಲು ಬನ್ನಿ ಮರಕ್ಕೆ ತಮ್ಮ ಆಯುಧಗಳನ್ನು ಕಟ್ಟಿ ಇಟ್ಟಿರುತ್ತಾರೆ. ಅಜ್ಞಾತವಾಸ ಮುಗಿಸಿಕೊಂಡ ಬಂದ ನಂತರ ಆಯುಧಗಳನ್ನು ಬನ್ನಿ ಮರದಿಂದ ಮರಳಿ ಪಡೆಯುತ್ತಾರೆ. ಅವುಗಳನ್ನು ತೊಳೆದು ಪೂಜಿಸಿ ಕುರುಕ್ಷೇತ್ರ ಯುದ್ಧಕ್ಕೆ ಸನ್ನದರಾಗುತ್ತಾರೆ. ಆದ್ದರಿಂದ ವಿಜಯ ದಶಮಿ ತಿಥಿ ಎಂದು ಬನ್ನಿ ಮರವನ್ನು ಪೂಜಿಸುವ ಸಾಂಪ್ರದಾಯವಿದೆ. 

ಮೈಸೂರಿನಲ್ಲಿ ರಾಕ್ಷಸನಾದ ಮಹಿಷಾಸುರನನ್ನು ಚಾಮುಂಡಿಯು ಸಂಹಾರ ಮಾಡಿದ  ಆ ವಿಜಯದ ದಿನವೇ ವಿಜಯದಶಮಿ. ಇನ್ನು ಉತ್ತರ ಭಾರತದಲ್ಲಿ ವಿಜಯದಶಮಿಯಂದು ಕಾಳಿಯನ್ನು ಪೂಜಿಸಲಾಗುತ್ತದೆ. ದಸರಾ ಹಬ್ಬದಲ್ಲಿ ಆಚರಣೆಗಳು ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆಯಾದರೂ ಭಕ್ತಿ ಒಂದೆ ಆಗಿದೆ.

✍ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ