image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪ್ರದೋಷ ದಿನ ಉಪವಾಸ ಮಾಡುವುದರಿಂದ ಆಗುವ ಲಾಭ ಏನು ಗೊತ್ತೇ..?

ಪ್ರದೋಷ ದಿನ ಉಪವಾಸ ಮಾಡುವುದರಿಂದ ಆಗುವ ಲಾಭ ಏನು ಗೊತ್ತೇ..?

ಪುರಾಣಗಳ ಪ್ರಕಾರ ಒಂದು ಪ್ರದೋಷ ಉಪವಾಸದ ಫಲ ಎರಡು ಹಸುಗಳ ದಾನಕ್ಕೆ ಸಮ. ಈ ಉಪವಾಸದ ಮಹತ್ವ ವನ್ನು ವೇದಗಳ ಮಹಾನ್ ವಿದ್ವಾಂಸರಾದ ಸೂತಜಿ ಗಂಗಾನದಿಯ ದಡದಲ್ಲಿರುವ ಶೌಂಕದಿ ಋಷಿಗಳಿಗೆ ತಿಳಿಸಿದರು ಎನ್ನ ಲಾಗುತ್ತದೆ. ಕಲಿಯುಗದಲ್ಲಿ ಅಧರ್ಮವು ತಾಂಡವ ವಾಡಿದರೆ ಜನರು ಧರ್ಮದ ಹಾದಿಯನ್ನು ತೊರೆದು ಅನ್ಯಾಯದ ಹಾದಿಯಲ್ಲಿ ಸಾಗುತ್ತಾರೆ, ಆ ಸಮಯದಲ್ಲಿ ಪ್ರದೋಷ ವ್ರತವು ಉತ್ತಮ ಮಾಧ್ಯಮವಾಗುತ್ತದೆ. ಶಿವನ ಆರಾಧನೆಯಿಂದ ಪಾಪ ಪರಿಹಾರವಾಗುತ್ತದೆ ಎಂದು ಹೇಳಿದ್ದರು. ದುಃಖಗಳನ್ನು ತೊಡೆದು ಹಾಕಲು. ಈ ವ್ರತದ ಮಹತ್ವವನ್ನು ಈ ಹಿಂದೆ ಶಿವನು  ಸತಿಗೆ ಹೇಳಿದ್ದನಂತೆ. ಪ್ರತಿ ತಿಂಗಳು ಎರಡು ಪ್ರದೋಷ ವ್ರತಗಳಿರುತ್ತವೆ. ಒಂದು ಕೃಷ್ಣ ಪಕ್ಷದಲ್ಲಿ ಮತ್ತು ಇನ್ನೊಂದು ಶುಕ್ಲ ಪಕ್ಷದಲ್ಲಿ. ಪ್ರದೋಷ ಉಪವಾಸವನ್ನು ಶಿವನಿಗೆ ಸಮರ್ಪಿಸಲಾಗಿದೆ. ಪ್ರದೋಷ ವ್ರತದ ಪೂಜೆಯನ್ನು ಯಾವಾಗಲೂ ಪ್ರದೋಷ ಕಾಲದಲ್ಲಿ (ಸಂಜೆ) ಮಾತ್ರ ಮಾಡಲಾಗುತ್ತೆ. ಈ ದಿನ ಮಾತಾ ಪಾರ್ವತಿ ಮತ್ತು ಶಿವನನ್ನು ಪೂಜಿಸುವುದರಿಂದ ಉತ್ತಮ ಆರೋಗ್ಯ ಮತ್ತು ಯಶಸ್ಸು ಸಿಗುತ್ತದೆ ಎಂಬ ನಂಬಿಕೆಗಳಿವೆ. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಗಂಗಾಜಲದಿಂದ ಸ್ನಾನ ಮಾಡಿ ಭಗವಾನ್ ಸೂರ್ಯನಿಗೆ ಜಲವನ್ನು ಅರ್ಪಿಸಿ ಪ್ರಾರ್ಥನೆಯನ್ನು ಪ್ರಾರಂಭಿಸಿ, ನಂತರ ಪ್ರದೋಷ ಕಾಲದಲ್ಲಿ ಶಿವ ಮಂತ್ರಗಳನ್ನು ಪಠಿಸಬೇಕು. ಶಿವ ಮತ್ತು ಪಾರ್ವತಿ ದೇವಿಗೆ ಹೂವು, ಧೂಪ, ಹಣ್ಣು, ದಾತುರಾವನ್ನು, ಹಾಲು, ಮೊಸರು ಮತ್ತು ಪಂಚಾಮೃತವನ್ನು ಅರ್ಪಿಸಬೇಕು. ಕೊನೆಗೆ ಆರತಿ ಮಾಡಿ ಸಮೃದ್ಧಿ, ಯಶಸ್ಸು ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಬೇಕು. ಇಡೀ ದಿನ ಉಪವಾಸ ಮಾಡಿ ಆರತಿ ಮಾಡುವ ಮೂಲಕ ದಿನವನ್ನು ಮುಕ್ತಾಯಗೊಳಿಸಬೇಕು. ಈ ರೀತಿ ದೇವರನ್ನು ಪೂಜಿಸುವುದರಿಂದ ವೈವಾಹಿಕ ಜೀವನದಲ್ಲಿ ಸಂತೋಷ ಸಿಗುತ್ತದೆ. ಮಹಿಳೆಯರಿಗೆ ಸಂತಾನ ಪ್ರಾಪ್ತಿಯಾಗುತ್ತದೆ. ಕಷ್ಟ ಕಾರ್ಪಣ್ಯಗಳು ದೂರವಾಗುತ್ತದೆ ಎನ್ನುವುದು ನಂಬಿಕೆ.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ