ತುಳುನಾಡಿನ ಮಣ್ಣಿನಲ್ಲಿ ದೈವಗಳನ್ನು ವಿಶೇಷ ನಿಷ್ಟೆಯಿಂದ ಪೂಜಿಸುವುದನ್ನು ನಾವು ನೋಡಬಹುದು. ಇದಕ್ಕೆ ಕಾರಣ ದೈವಗಳ ಕಾರ್ಣಿಕ. ಅಂತಹ ದೈವಸ್ಥಾನಗಳಲ್ಲಿ ಕೊಂಡಾಣ ಶ್ರೀ ಪಿಲಿಚಾಮುಂಡಿ, ಬಂಟ, ಮುಂಡತ್ತಾಯ ದೈವಸ್ಥಾನವು ತುಳುನಾಡಿನ ಅತ್ಯಂತ ಕಾರ್ಣಿಕ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದು ಅದೆಷ್ಟೋ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿದೆ. ಎಲ್ಲೋ ಇದ್ದು ತಮ್ಮ ಕಷ್ಟಗಳನ್ನು, ಇಲ್ಲಿನ ದೈವಗಳನ್ನು ನೆನೆಸಿ ಹರಕೆ ಕಟ್ಟಿಕೊಂಡರೆ ಆದಷ್ಟು ಬೇಗನೆ ಅಂದುಕೊAಡ ಕಾರ್ಯವನ್ನು ಈಡೇರಿಸುವ ದೈವವಾಗಿದೆ. ಈ ಕ್ಷೇತ್ರವು ಮಂಗಳೂರು ತಾಲ್ಲೂಕು, ಕೋಟೆಕಾರ್ ಗ್ರಾಮದ ಕೊಂಡಾಣ ಎಂಬಲ್ಲಿದೆ. ಶ್ರೀ ಕ್ಷೇತ್ರಕ್ಕೆ ಸೋಮೇಶ್ವರ ಸೋಮನಾಥ ದೇವರು, ತಲಪಾಡಿ ಶ್ರೀ ದುರ್ಗಾಪರಮೇಶ್ವರೀ ಹಾಗು ಉದ್ಯಾವರ ಮಾಡದ ಅರಸು ದೈವಗಳಿಗು ಸಂಬAದವಿದೆ ಎಂದೂ ಹೇಳಲಾಗುತ್ತದೆ. ಈ ಕ್ಷೇತ್ರವು ಎತ್ತರದ ಸ್ಥಳದಲ್ಲಿದ್ದು ಸುಂದರ ವಾತಾವಾರಣದ ಮಧ್ಯೆ ಇದೆ. ಶ್ರೀ ಕ್ಷೇತ್ರದಲ್ಲಿ ಚಾಮುಂಡಿಯ ವಾಹನವಾಗಿರುವ ಹುಲಿಯ ಸಂಚಾರವಿದ್ದು, ಹುಲಿಯು ನೋಡಲು ಸಿಕ್ಕಿರುವ ವಿಶಯವನ್ನು ಹಿರಿಯರು ಹೇಳುತ್ತಾರೆ. ಹಿಂದೂ ಧರ್ಮದ ಜನರು ಮಾತ್ರವಲ್ಲದೆ ಮುಸ್ಲಿಮ್ ಸಾಮುದಾಯದವರು ಕೂಡಾ ಹುಲಿಯನ್ನು ನೋಡಿರುವುದರಿಂದ ಎಲ್ಲಾ ಧರ್ಮದವರು ಈ ಕ್ಷೇತ್ರಕ್ಕೆ ಬರುವುದು ಸಾಮನ್ಯವಾಗಿದೆ. ಕ್ಷೇತ್ರದ ಪಕ್ಕದ ಸ್ಥಳದಲ್ಲಿ ಸಣ್ಣ ಕೆರೆಯಿದ್ದು, ಇದು ಹುಲಿ ನೀರು ಕುಡಿಯುವ ಕೆರೆಯಾಗಿದೆ. ಈ ಕೆರೆಗೆ ಯಾರು ಕೂಡಾ ಇಳಿಯುವ ಹಾಗೆ ಇಲ್ಲ. ಹುಲಿಯು ಸೋಮೇಶ್ವರ ಸೋಮನಾಥ ದೇವರ ಭೇಟಿಗೆ ಹೋಗುತ್ತದೆ ಎನ್ನುವ ಕಥೆಯನ್ನು ಕೂಡ ಹಿರಿಯರು ಹೇಳುವುದನ್ನು ಕೇಳಬಹುದು. ಕೊಂಡಾಣದ ವಾರ್ಷಿಕ ಜಾತ್ರೆಯು ಕೊಂಡಾಣ ಬಂಡಿ ಎಂದೇ ಪ್ರಸಿದ್ದವಾಗಿದ್ದು, ಇದು ತುಳುನಾಡಿನ ಕೊನೆಯ ಜಾತ್ರೆಯಾಗಿದೆ. ಇಲ್ಲಿನ ಜಾತ್ರೆ ಪ್ರತೀ ವರ್ಷ ಮೇ ತಿಂಗಳ ೨೨ ಹಾಗು ೨೩ ರಂದು ನಡೆಯುತ್ತದೆ. ಇಲ್ಲಿನ ಜಾತ್ರೆಯ ಮರುದಿವಸ ಪತ್ತನಾಜೆಯಾಗಿದ್ದು ನಂತರ ತುಳುನಾಡಿನಲ್ಲಿ ಎಲ್ಲಿಯೂ ಕೂಡಾ ಧ್ವಜಾರೋಹಣವಾಗಿ ಜಾತ್ರೆಯಾಗುವ ಪದ್ದತಿ ಇಲ್ಲ. ಈ ಕ್ಷೇತ್ರದ ಕೀರ್ತಿ ಎಷ್ಟೇಂದರೆ ದೇಶದಲ್ಲಿಯೇ ಅಂತಿಮ ತೀರ್ಪನ್ನು ನೀಡುವ ದೆಹಲಿಯ ಸುಪ್ರೀಮ್ ಕೋರ್ಟ್ ನಲ್ಲಿ ಮುಗಿಯದ ಕೇಸು ಕೊಂಡಾಣದಲ್ಲಿ ತೀರ್ಮಾನ ವಾಗಿದೆ ಎನ್ನುವ ಮಾತು ಕೂಡ ಇದೆ. .ಶ್ರೀ ಕ್ಷೇತ್ರ ದ ಜಾತ್ರೆಯನ್ನು ಅಷ್ಟೋಂದು ದೊಡ್ಡ ರೀತಿಯಲ್ಲೀ ಮಾಡುವ ಪದ್ದತಿ ಇಲ್ಲ ಎಂಬುದು ಹಿರಿಯರ ನಂಬಿಕೆ. ಯಾವುದೇ ದೈವ ಸಾನಿಧ್ಯದಲ್ಲಿ ಕಾಣಸಿಗದ ಬಂಟ ಕಲ್ಲು ಕೊಂಡಾಣದಲ್ಲಿ ನೋಡಬಹುದಾಗಿದೆ. ನೇಮದ ಸಂದರ್ಭ ದೈವವು ಬಂಟಕಲ್ಲಿನ ಪಾಣಿಪೀಠದಲ್ಲಿ ಕುಳಿತುಕೊಳ್ಳುವ ಪದ್ದತಿ ಇದೆ. ಈ ಸಂದರ್ಭ ಶಿವಲಿಂಗಕ್ಕೆ ಮಲ್ಲಿಗೆ ಹೂವಿನ ಅಭಿಷೇಕ ಅಂದರೆ ಮಲ್ಲಿಗೆ ಹೂವಿನಿಂದ ಬಂಟಕಲ್ಲನ್ನು ಅಲಂಕರಿಸುತ್ತಾರೆ. ಮಾತು ಬರದ ಅದೆಷ್ಟೋ ಮಕ್ಕಳಿಗೆ ಇಲ್ಲಿಗೆ ಹರಕೆ ಹೇಳಿದ ನಂತರ ಮಾತು ಬಂದ ಘಟನೆಯೂ ನಡೆದಿದೆ. ಕ್ಷೇತ್ರದ ಒಳಗೆ ಯಾವುದೇ ರೀತಿಯ ವೀಡಿಯೋ ಚಿತ್ರೀಕರಣ, ಫ್ಹೋಟೋ ಚಿತ್ರೀಕರಣ ಕಡ್ದಾಯವಾಗಿ ಮಾಡುವ ಹಾಗೆ ಇಲ್ಲ. ಐತಿಹಾಸಿಕ ಹಿನ್ನೆಲೆಯ ಪ್ರಕಾರ ಈ ಕ್ಷೇತ್ರವು ಗೋಧ ಶಾಲೆ (ಕುಸ್ತಿ ಶಾಲೆ) ಯಾಗಿದ್ದು, ಇಲ್ಲಿ ಮಲ್ಲ ಯುದ್ದವನ್ನು ಕಲಿಸಿಕೊಡುವ ಪೈಲ್ವಾನ್ ಮಾಸ್ಟರ್ ಇದ್ದನೆಂದು ಹೇಳಲಾಗುತ್ತದೆ. ಕಾಲಕ್ರಮೇಣ ಇದು ದೈವಸ್ಥಾನವಾಗಿ ಬದಲಾಯಿತಂತೆ. ಈಗಲೂ ಕೂಡಾ ಇಲ್ಲಿ ಕುಸ್ತಿಯನ್ನು ಕಲಿಸುವ ಪೈಲ್ವಾನ್ ಮಾಸ್ಟರ್ ನ ಮರದ ಪ್ರತಿಮೆಯಿದೆ. ಈಗ ಈ ಶಾಲೆಯು ನೇಮ (ದೈವ ನೃತ್ಯ)ದ ಕೊಟ್ಯವಾಗಿದೆ. ಜಾತ್ರೆಯ ಮೊದಲ ದಿನ ದೈವದ ಭಂಡಾರ ಇಲ್ಲಿ ಬಂದು ಮೊದಲ ದಿನದ ನೇಮ (ದೈವನೃತ್ಯ) ಇದರೊಳಗೆ ನಡೆಯುತ್ತದೆ. ೨ನೇ ದಿನ ದೈವವು ಇಲ್ಲಿ ಸ್ವಲ್ಪ ಹೊತ್ತು ಕುಣಿದು ನಂತರ ದೈವಸ್ಥಾನದ ಅಂಗಣಕ್ಕೆ ಬಂದು ಕುಣಿಯುವ ಪದ್ದತಿ ಇಲ್ಲಿಯದ್ದಾಗಿದೆ. ಇಷ್ಟೆಲ್ಲಾ ರೀತಿಯ ವೈಶಿಷ್ಟವನ್ನು ಈ ಕ್ಷೇತ್ರ ಹೊಂದಿದೆ. ಕೊಂಡಾಣ ಕ್ಷೇತ್ರವು ಮಂಗಳೂರಿನಿAದ ಸುಮಾರು ೧೬ ಕಿ.ಮಿ ದೂರದಲ್ಲಿದ್ದು. ಕೇರಳ ಮಂಗಳೂರು ರಾಷ್ಟಿçÃಯ ಹೆದ್ದಾರಿಯಿಂದ ಕೇವಲ ೫ ಕಿ.ಮಿ ದೂರದಲ್ಲಿದೆ. ಇಂತಹ ಪುಣ್ಯ ಸ್ಥಾನಕ್ಕೆ ಒಮ್ಮೆ ಬೇಟಿಕೊಟ್ಟು ಪಾವನರಾಗಲು ಮರೆಯದಿರಿ.