image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬ್ರಹ್ಮ ದ್ವಜ...

ಬ್ರಹ್ಮ ದ್ವಜ...

ಯುಗಾದಿಯಂದು ಏರಿಸುವ ಬ್ರಹ್ಮಧ್ವಜವನ್ನು ಕೆಲವು ಕಡೆಗಳಲ್ಲಿ ಇಂದ್ರದ್ವಜ ಎಂದೂ ಕರೆಯುತ್ತಾರೆ. ಬ್ರಹ್ಮದೇವನು ಯುಗಾದಿ ಪಾಡ್ಯದಂದು ಈ ಸೃಷ್ಟಿಯನ್ನು ನಿರ್ಮಿಸಿದ್ದರೆಂದು ಧರ್ಮ ಶಾಸ್ತ್ರದಲ್ಲಿ ಧ್ವಜಕ್ಕೆ ‘ಬ್ರಹ್ಮ ಧ್ವಜ’ ಎನ್ನಲಾಗುತ್ತದೆ. ಆದುದರಿಂದ  ಉತ್ತರದ ಕೆಲವು ಬಾಗಗಳಲ್ಲಿ ಯುಗಾದಿ ದಿನ ಮನೆ ಮನೆಗಳಲ್ಲಿ ಬ್ರಹ್ಮಧ್ವಜವನ್ನು ನಿಲ್ಲಿಸುತ್ತಾರೆ. ವಿಜಯದ ಪ್ರತೀಕವು ಎತ್ತರವಾಗಿರುವುದರಿಂದ ಬ್ರಹ್ಮಧ್ವಜವನ್ನು ಎತ್ತರವಾಗಿ ನಿಲ್ಲಿಸಲಾಗುತ್ತದೆ. ಈ ದ್ವಜ ನಿಲ್ಲಿಸುವುದಕ್ಕೂ ಕೆಲವು ಕ್ರಮಗಳಿದ್ದು, ಸೂರ್ಯೋದಯದ ನಂತರ ಬ್ರಹ್ಮಧ್ವಜವನ್ನು ಕೂಡಲೇ ನಿಲ್ಲಿಸಬೇಕಾಗಿರುತ್ತದೆ. ಅಪವಾದಾತ್ಮಕ ಸ್ಥಿತಿಯಲ್ಲಿ ಪಂಚಾಂಗವನ್ನು ನೋಡಿ ಬ್ರಹ್ಮಧ್ವಜವನ್ನು ನಿಲ್ಲಿಸಬೇಕು. ಎತ್ತರವಾಗಿರುವ ಬಿದಿರಿನ ತುದಿಗೆ ಹಳದಿ ಬಣ್ಣದ ಜರತಾರಿಯ ಬಟ್ಟೆಯನ್ನು ಕಟ್ಟಿ, ಅದರ ಮೇಲೆ ಸಕ್ಕರೆಯ ಗಂಟು, ಬೇವಿನ ಚಿಗುರೆಲೆ, ಮಾವಿನ ಟೊಂಗೆ ಮತ್ತು ಕೆಂಪು ಹೂವುಗಳ ಹಾರವನ್ನು ಕಟ್ಟಿ ಮೇಲೆ ಬೆಳ್ಳಿಯ ಅಥವಾ ತಾಮ್ರದ ಕಲಶದಿಂದ ಶೃಂಗರಿಸಿ ಧ್ವಜವನ್ನು ನಿಲ್ಲಿಸುತ್ತಾರೆ. ಧ್ವಜವನ್ನು ಮುಖ್ಯದ್ವಾರದ ಎದುರಿಗೆ, ಹೊಸ್ತಿಲಿನ ಹತ್ತಿರ ಭೂಮಿಯ ಮೇಲೆ ನಿಲ್ಲಿಸಬೇಕು. ಧ್ವಜವನ್ನು ಅತೀ ನೇರವಾಗಿ ನಿಲ್ಲಿಸದೇ ಮುಂದಿನ ಬದಿಗೆ ಸ್ವಲ್ಪ ಬಾಗಿದ ಸ್ಥಿತಿಯಲ್ಲಿ ನಿಲ್ಲಿಸಿ, ಅದರ ಮುಂದೆ ಸುಂದರವಾದ ರಂಗೋಲಿಯನ್ನು ಬಿಡಿಸಲಾಗುತ್ತದೆ. ಸೂರ್ಯಾಸ್ತದ ಸಮಯದಲ್ಲಿ ಬೆಲ್ಲದ ನೈವೇದ್ಯವನ್ನು ತೋರಿಸಿ ಧ್ವಜವನ್ನು ಕೆಳಗಿಳಿಸಲಾಗುತ್ತದೆ. ಯುಗಾದಿಯ ದಿನ ಬ್ರಹ್ಮಾಂಡದಲ್ಲಿನ ಪ್ರಜಾಪತಿ ದೇವತೆಯ ಲಹರಿಗಳು ಪೃಥ್ವಿಯ ಮೇಲೆ ಎಲ್ಲಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಬರುತ್ತವೆ. ಬ್ರಹ್ಮಧ್ವಜದಿಂದಾಗಿ ವಾತಾವರಣದಲ್ಲಿನ ಪ್ರಜಾಪತಿ-ಲಹರಿಗಳು ಕಲಶದ ಸಹಾಯದಿಂದ ಮನೆಯೊಳಗೆ ಪ್ರವೇಶಿಸುತ್ತವೆ ಎನ್ನುವುದು ನಂಬಿಕೆ. ಮರುದಿನದಿಂದ ಈ ಕಲಶವನ್ನು ನೀರು ಕುಡಿಯಲು ಉಪಯೋಗಿಸುವುದರಿಂದ ವರ್ಷವಿಡೀ ಪ್ರಜಾಪತಿ-ಲಹರಿಗಳು ಪ್ರಾಪ್ತವಾಗುತ್ತವೆ ಎನ್ನುವ ಬಲವಾದ ನಂಬಿಕೆಯಿದೆ.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ