ಚೈತ್ರ ಮಾಸದ ಕೊನೆಯ ದಿನದಂದು ಆಚರಿಸಲಾಗುವ "ಗಜನ್ ನೃತ್ಯ"ವು ತ್ರಿಪುರಾದ ಗ್ರಾಮೀಣ ಪ್ರದೇಶಗಳಲ್ಲಿ ಜನಪ್ರಿಯವಾಗಿದೆ. ಈ ನೃತ್ಯದಲ್ಲಿ ಜನರು ಶಿವ ಮತ್ತು ಗೌರಿ ದೇವತೆಗಳ ವೇಷವನ್ನು ಧರಿಸುತ್ತಾರೆ. ನರ್ತಕರು ಮನೆ ಮನೆಗೆ ತೆರಳಿ ನೃತ್ಯ ಮಾಡಿ ಅಕ್ಕಿ ಮತ್ತು ಹಣವನ್ನು ಸಂಗ್ರಹಿಸುವ ಬಂಗಾಳಿ ಸಮುದಾಯದವರು ಗಜನ್ ಹಬ್ಬವನ್ನು ಆಚರಿಸುತ್ತಾರೆ. ಹೊಸ ವರ್ಷದ ಸಂತೋಷ ಮತ್ತು ಸಮೃದ್ಧಿಗಾಗಿ ಶಿವನಿಗೆ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ. ಶಿವ, ದುರ್ಗಾ ಮಾತೆ, ಕಾಳಿ, ನಂದಿ ಮತ್ತು ಭೃಂಗಿ ವೇಷ ಧರಿಸಿದ ಕಲಾವಿದರು ಡ್ರಮ್‌ಗಳ ಬಡಿತಕ್ಕೆ ನೃತ್ಯ ಮಾಡುತ್ತಾ ಶಿವನನ್ನು ಸ್ತುತಿಸಿ ಹಾಡುಗಳನ್ನು ಹಾಡುತ್ತಾರೆ. ತ್ರಿಪುರಾದಲ್ಲಿ ಇನ್ನೊಂದು ಪ್ರಮುಖವಾದ "ಗಲಾಮುಚಮೋ ನೃತ್ಯ" ಸುಗ್ಗಿಯ ಋತುವಿನ ಕೊನೆಯಲ್ಲಿ ಆಚರಿಸಲಾಗುತ್ತದೆ. ಉತ್ತಮ ಸುಗ್ಗಿಗಾಗಿ ದೇವರಿಗೆ ಧನ್ಯವಾದ ಅರ್ಪಿಸಲು ಗಾಲಾಮುಚಮೊ ನೃತ್ಯವನ್ನು ನಡೆಸಲಾಗುತ್ತದೆ. ಈ ನೃತ್ಯದ ಸಮಯದಲ್ಲಿ ನೃತ್ಯಗಾರರು ಸಾಂಪ್ರದಾಯಿಕ ವೇಷಭೂಷಣಗಳನ್ನು ಧರಿಸುತ್ತಾರೆ ಮತ್ತು ತಮ್ಮ ಸಂಗೀತ ವಾದ್ಯಗಳನ್ನು ನುಡಿಸುತ್ತಾರೆ. ಈ ನೃತ್ಯವು ತ್ರಿಪುರಾ ಜನ ಸಮುದಾಯದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ನೃತ್ಯದ ಮೂಲಕ ಸಮುದಾಯವು ಉತ್ತಮ ಫಸಲುಗಾಗಿ ದೇವರಿಗೆ ಧನ್ಯವಾದಗಳನ್ನು ನೀಡುತ್ತದೆ. ಗಲಾಮುಚಮೊ ನೃತ್ಯವನ್ನು ಸಾಂಪ್ರದಾಯಿಕ ವೇಷಭೂಷಣಗಳನ್ನು ಧರಿಸಿದ ನೃತ್ಯಗಾರರು ಪ್ರದರ್ಶಿಸುತ್ತಾರೆ. ನೃತ್ಯದ ಸಮಯದಲ್ಲಿ ನುಡಿಸುವ ಸಂಗೀತ ವಾದ್ಯಗಳು ತ್ರಿಪುರದ ವಿಶಿಷ್ಟವಾಗಿದೆ. ಹಾಗೆ ಇನ್ನೊಂದು ವಿಶಿಷ್ಟ ನೃತ್ಯವಾದ "ಚೆರಾವ್ಲಂ ನೃತ್ಯ"ವನ್ನು ತ್ರಿಪುರಾದ ಲುಶೈ ಸಮುದಾಯದ ಹುಡುಗಿಯರು ಪ್ರದರ್ಶಿಸುತ್ತಾರೆ. ಅಕಾಲಿಕ ಮರಣ ಹೊಂದಿದವರ ಗೌರವಾರ್ಥವಾಗಿ ಈ ನೃತ್ಯವನ್ನು ಮಾಡಲಾಗುತ್ತದೆ. ಸಾವಿನ ನಂತರ ಮನುಷ್ಯ ಸ್ವರ್ಗಕ್ಕೆ ಹೋಗುತ್ತಾನೆ ಎಂದು ಅವರು ನಂಬುತ್ತಾರೆ. ಬಿದಿರಿನ ಸದ್ದಿನಿಂದ ಸಾಧಿಸಿದ ಕುಣಿತದ ಲಯದಿಂದ ಗಳಿಸಿದ ಆನಂದ ಮತ್ತು ಧೈರ್ಯ ಮತ್ತು ಆತ್ಮಸ್ಥೈರ್ಯದಿಂದ ಸ್ವರ್ಗಕ್ಕೆ ಹೋಗಲು ಸಾಧ್ಯ ಎಂಬ ನಂಬಿಕೆಯಿದೆ.
✍ಲಲಿತಶ್ರೀ ಪ್ರೀತಂ ರೈ