image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಟೂಲ್ ರೂಮ್ ಮೆಶಿನಿಸ್ಟ್ ತರಬೇತಿಗೆ ಅರ್ಜಿ ಆಹ್ವಾನ

ಟೂಲ್ ರೂಮ್ ಮೆಶಿನಿಸ್ಟ್ ತರಬೇತಿಗೆ ಅರ್ಜಿ ಆಹ್ವಾನ

ಮಂಗಳೂರು : ಬೈಕಂಪಾಡಿಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿ.ಟಿ.ಟಿ.ಸಿ) ಡಿಪ್ಲೋಮಾ ಕಾಲೇಜಿನಲ್ಲಿ ಒಂದು ವರ್ಷದ ಅವಧಿಯ ಟೂಲ್ ರೂಮ್ ಮೆಶಿನಿಸ್ಟ್ ಕೋರ್ಸ್ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಕೋರ್ಸ್‌ನಲ್ಲಿ ಯಾಂತ್ರಿಕ ಉತ್ಪಾದನೆಗೆ ಸಂಬಂಧಿಸಿದ ಪ್ರಮುಖ ಯಂತ್ರಗಳಾದ ಲೇತ್, ಮಿಲ್ಲಿಂಗ್ ಮೆಶಿನ್, ಡ್ರಿಲ್ಲಿಂಗ್ ಮೆಶಿನ್ ಹಾಗೂ ಗ್ರೈಂಡಿಂಗ್ ಮೆಶಿನ್‌ಗಳ ನಿರ್ವಹಣೆ ಮತ್ತು ಬಳಕೆಯ ಬಗ್ಗೆ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತದೆ. ಎಸ್‌ಎಸ್‌ಎಲ್‌ಸಿ ತೇರ್ಗಡೆ ಹೊಂದಿದ ಅಥವಾ ಅನುತ್ತೀರ್ಣರಾದ ಅಭ್ಯರ್ಥಿಗಳು ಈ ತರಬೇತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಪ್ರಸ್ತುತ ಸ್ಥಳೀಯ ಕೈಗಾರಿಕಾ ವಲಯದಲ್ಲಿ ಈ ಕೋರ್ಸ್‌ಗೆ ಭಾರಿ ಬೇಡಿಕೆಯಿದ್ದು, ಇದು ಸಂಪೂರ್ಣ ಉದ್ಯೋಗಾಧಾರಿತ ತರಬೇತಿಯಾಗಿದೆ. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಜಿ.ಟಿ.ಟಿ.ಸಿ ಸಂಸ್ಥೆಯನ್ನು ಖುದ್ದಾಗಿ ಭೇಟಿ ಮಾಡಬಹುದು ಅಥವಾ ದೂರವಾಣಿ ಸಂಖ್ಯೆಗಳಾದ 0824-2408003, 9008263660 ಹಾಗೂ 7899070548 ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ