ಮಂಗಳೂರು : ಮಂಗಳೂರು ಗ್ರಾಮಾಂತರ ಹಾಗೂ ಮಂಗಳೂರು ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ವ್ಯಾಪ್ತಿಯಲ್ಲಿ ಖಾಲಿ ಇರುವ ವಿವಿಧ ಅಂಗನವಾಡಿ ಕಂ ಕ್ರಷ್ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಂಗಳೂರು ಗ್ರಾಮಾಂತರ ವ್ಯಾಪ್ತಿಯ ಬಬ್ಬುಕಟ್ಟೆ, ಮದನಿನಗರ-2, ಒಂಭತ್ತುಕೆರೆ, ಮೊಂಟೆಪದವು, ಐಕುಕೊಪ್ಪಳ, ಪೆರ್ಮುದೆ, ತಾರಿಕಂಬಳ, ಮೇಲೆಕ್ಕಾರುಪದವು ಹಾಗೂ ಲಿಂಗಪ್ಪಯ್ಯಕಾಡು-2 ಕೇಂದ್ರಗಳಲ್ಲಿ ಒಟ್ಟು 9 ಕಂ ಕ್ರಷ್ ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಅದೇ ರೀತಿ ನಾಗರಕಟ್ಟೆ, ಮದನಿನಗರ-2, ಒಂಭತ್ತುಕೆರೆ, ಮೊಂಟೆಪದವು, ಐಕುಕೊಪ್ಪಳ, ಪೆರ್ಮುದೆ, ತಾರಿಕಂಬಳ, ಮೇಲೆಕ್ಕಾರುಪದವು, ಲಿಂಗಪ್ಪಯ್ಯಕಾಡು-2, ಮಾರಿಯಾಡಿ ಹಾಗೂ ಮಾಡೂರು ಕೇಂದ್ರಗಳಲ್ಲಿ ಒಟ್ಟು 11 ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಡಿಸೆಂಬರ್ 2ರೊಳಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗೆ ಉರ್ವ ಮಾರ್ಕೆಟ್ ಕಟ್ಟಡದ 3ನೇ ಮಹಡಿಯಲ್ಲಿರುವ ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಛೇರಿಯನ್ನು ಸಂಪರ್ಕಿಸಬಹುದು.
ಮಂಗಳೂರು ನಗರ ವ್ಯಾಪ್ತಿಯ ಹೊಯಿಗೆ ಬಜಾರ್, ಪೋಲಿಸ್ ಲೈನ್-2, ಕೆ.ಪಿ.ಟಿ., ಕೋಡಿಕಲ್-1, ಬೆಂಗ್ರೆ ಮಹಿಳಾ ಸಮಾಜ, ಉರ್ವ ಕ್ಯಾಶ್ಯೂ, ಯೂತ್ ಸ್ಪೋರ್ಟ್ಸ್ ತಣ್ಣೀರು ಬಾವಿ, ಕೋಡಿಕಲ್ ಕ್ರಾಸ್, ಬಂಗ್ರ ಕೂಳೂರು, ನ್ಯೂ ಫ್ರೆಂಡ್ಸ್ ಮುಲ್ಲಕಾಡು, ಬಸವನಗರ-1, ಪಣಂಬೂರು ಗ್ರಾಮ ಪಂಚಾಯತ್, ವ್ಯಾಯಾಮ ಶಾಲೆ ಕೂರಿಕಟ್ಟ, ಗುಡ್ಡಕೊಪ್ಳ, ಕಾಟಿಪಳ್ಳ 4ನೇ ಬ್ಲಾಕ್, ಕಾಟಿಪಳ್ಳ 5ನೇ ಬ್ಲಾಕ್ ಯುವಕ ಮಂಡಲ, ಅತ್ತಾವರ ಶಾಲೆ, ಫೈಸಲ್ ನಗರ, ಕಾರ್ಮಿಕ ಕಾಲೋನಿ ಹಾಗೂ ಮಯೂರ ಗೇಮ್ಸ್ ಕ್ಲಬ್ ಕೇಂದ್ರಗಳಲ್ಲಿ ಒಟ್ಟು 20 ಕಂ ಕ್ರಷ್ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 21 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗೆ ವೆಲೆನ್ಸಿಯಾ ಸಿಲ್ವಾ ಕ್ರಾಸ್ ರೋಡ್ನಲ್ಲಿರುವ ಮಂಗಳೂರು ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಛೇರಿಯನ್ನು ಸಂಪರ್ಕಿಸಬಹುದು.
ಕಾರ್ಯಕರ್ತೆ ಹುದ್ದೆಗೆ ದ್ವಿತೀಯ ಪಿ.ಯು.ಸಿ. ಉತ್ತೀರ್ಣರಾಗಿರಬೇಕು (ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ 10ನೇ ತರಗತಿ ಉತ್ತೀರ್ಣ). ಸಹಾಯಕಿ ಹುದ್ದೆಗೆ 10ನೇ ತರಗತಿ ಉತ್ತೀರ್ಣರಾಗಿರಬೇಕು (ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಕನಿಷ್ಠ 7ನೇ ತರಗತಿ ಉತ್ತೀರ್ಣ). ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.