image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದಕ್ಷಿಣ ಕನ್ನಡದ ಪ್ರವರ್ಗ ‘ಸಿ’ ಧಾರ್ಮಿಕ ಸಂಸ್ಥೆಗಳ ಸಮಿತಿ ರಚನೆಗೆ ಅರ್ಜಿ ಆಹ್ವಾನ

ದಕ್ಷಿಣ ಕನ್ನಡದ ಪ್ರವರ್ಗ ‘ಸಿ’ ಧಾರ್ಮಿಕ ಸಂಸ್ಥೆಗಳ ಸಮಿತಿ ರಚನೆಗೆ ಅರ್ಜಿ ಆಹ್ವಾನ

ಮಂಗಳೂರು : ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ 1997 ರ ಕಲಂ 25 ರನ್ವಯ ದಕ್ಷಿಣ ಕನ್ನಡ ಜಿಲ್ಲೆಯ ಪ್ರವರ್ಗ "ಸಿ" ವರ್ಗದ ಎರಡು ಅಧಿಸೂಚಿತ ಸಂಸ್ಥೆಗಳಿಗೆ ಒಂಬತ್ತು ಸದಸ್ಯರ ವ್ಯವಸ್ಥಾಪನಾ ಸಮಿತಿ ರಚನೆ ಹಾಗೂ ವಿವಿಧ ದೇವಸ್ಥಾನಗಳಲ್ಲಿ ಖಾಲಿ ಇರುವ ಸದಸ್ಯ ಸ್ಥಾನಗಳ ಭರ್ತಿಗೆ ಅರ್ಹ ಭಕ್ತಾದಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮುಲ್ಕಿ ತಾಲೂಕಿನ ಅತಿಕಾರಿಬೆಟ್ಟು ಶ್ರೀ ಕೊಲೆಕಾಡಿ ಶಾಸ್ತಾವು ಬ್ರಹ್ಮ ದೇವಸ್ಥಾನ ಹಾಗೂ ಕಡಬ ತಾಲೂಕಿನ ಇಚ್ಲಂಪಾಡಿ ಶ್ರೀ ಬೀಡಿನ ದೈವಗಳ ದೈವಸ್ಥಾನಗಳಿಗೆ ಪೂರ್ಣ ಪ್ರಮಾಣದ ಸಮಿತಿ ರಚಿಸಲಾಗುತ್ತಿದೆ.

ಇದರೊಂದಿಗೆ ಮಂಗಳೂರು ತಾಲೂಕು ಕೊಂಪದವಿನ ಬೊದ್ಲಾಯಿ ಶ್ರೀ ಧೂಮಾವತಿ ದೈವಸ್ಥಾನ, ಮುಲ್ಕಿಯ ಶಿಮಂತೂರು ಶ್ರೀ ಆದಿಜನಾರ್ಧನ ದೇವಸ್ಥಾನ, ಮೂಡಬಿದ್ರೆಯ ಪ್ರಾಂತ್ಯ ಶ್ರೀ ನಾಗಬ್ರಹ್ಮ ದೇವಸ್ಥಾನ, ಪುತ್ತೂರಿನ ಪಡುಮಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮಠಂತಬೆಟ್ಟು ಶ್ರೀ ಮಹಿಷಮರ್ಧಿನಿ ದೇವಸ್ಥಾನ ಹಾಗೂ ಕಡಬದ ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಗಳಲ್ಲಿ ತಲಾ ಒಂದೊಂದು ಸಾಮಾನ್ಯ ಸ್ಥಾನಗಳಿಗೆ ಅರ್ಜಿ ಕೋರಲಾಗಿದೆ. ಸುಳ್ಯ ਤಾಲೂಕಿನ ಐವತ್ತೋಕ್ಲು ಶ್ರೀ ಪೈಂದೋಡಿ ಸುಬ್ರಾಯ ದೇವಸ್ಥಾನದ ಪರಿಶಿಷ್ಟ ಜಾತಿ/ಪಂಗಡ ಮೀಸಲು ಸ್ಥಾನಕ್ಕೂ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಮಂಗಳೂರಿನ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರ ಕಚೇರಿಯಲ್ಲಿ ನಿಗದಿತ ನಮೂನೆಯ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ನವೆಂಬರ್ 30 ರೊಳಗಾಗಿ ಸಲ್ಲಿಸಬೇಕಾಗಿದೆ. ನಿಗದಿತ ಅವಧಿಯ ನಂತರ ಬರುವ ಅರ್ಜಿಗಳನ್ನು ಪುರಸ್ಕರಿಸಲಾಗುವುದಿಲ್ಲ ಎಂದು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ