ಬೇಕಾಗುವ ಪದಾರ್ಥಗಳು:
ತೆಂಗಿನಕಾಯಿ ತುರಿ-2 ಬಟ್ಟಲು, ಸಕ್ಕರೆ- 1.1/2 ಬಟ್ಟಲು, ಎಲ್ಲಕ್ಕಿ- ಪುಡಿ, ತುಪ್ಪ 1 ಚಮಚ ಹಾಲು-ಸ್ವಲ್ಪ
ಮಾಡುವ ವಿಧಾನ:
ದಪ್ಪತಳದ ಪಾತ್ರೆಗೆ ಕಾಯಿತುರಿ, ಸಕ್ಕರೆ ಮತ್ತು ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ತಟ್ಟೆಗೆ ತುಪ್ಪ ಸವರಿ ಇಟ್ಟುಕೊಳ್ಳಬೇಕು. ಕಾಯಿತುರಿ, ಸಕ್ಕರೆ ಮಿಶ್ರಣವನ್ನು ಒಲೆಯ ಮೇಲಿಟ್ಟು ತಿರುವಬೇಕು. ಸಕ್ಕರೆ ಪೂರ್ತಿಯಾಗಿ ಕರಗುವವರೆಗೂ ಕೈ ಬಿಡದೆ ತಿರುವುತ್ತಿರಬೇಕು ಆಗ ಮಿಶ್ರಣ ತಳದಿಂದ ಮೇಲೆ ಬಿಡುತ್ತದೆ. ತಳದಿಂದ ಬಿಟ್ಟು ಪೂರ್ತಿ ಉಂಡೆಯಾಗುತ್ತದೆ, ತಕ್ಷಣ ತುಪ್ಪ ಸವರಿದ ತಟ್ಟೆಗೆ ಸುರಿದು ಸಮತಟ್ಟಾಗಿ ಹರಡುವುದು. ಮೇಲೆ ಸಮತಟ್ಟಾಗಿ ಬರಲು ಹಾಲಿನಿಂದ ಅದ್ದಿದ ಕೈ ಇಂದ ತಟ್ಟಬಹುದು. ತಕ್ಷಣ ಚಾಕುವಿನಿಂದ ನಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ ತಣ್ಣಗಾಗಲು ಬಿಡಬೇಕು. ಬಾಯಿಗೆ ಹಾಕಿ ಕೊಂಡರೆ ರುಚಿಕರವಾದ ಮತ್ತು ಕರಗುವಂತ ಕೊಬ್ಬರಿ ಮಿಠಾಯಿ ಸವಿಯಲು ಸಿದ್ಧ.