image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ಅಡುಗೆ

ಬಾದುಷ

ಬಾದುಷ

ಬೇಕಾಗುವ ಪದಾರ್ಥಗಳು:
೩ ಕಪ್ ಮೈದಾ ಹಿಟ್ಟು,

5 ಚಮಚ ತುಪ್ಪ,

1ಕಪ್ ಸಕ್ಕರೆ,

ಚಿಟಿಕೆ ಏಲಕ್ಕಿ ಪುಡಿ,

ಉಪ್ಪು ರುಚಿಗೆ ತಕ್ಕಷ್ಟು,

ಕರಿಯಲು ಎಣ್ಣೆ

ಮಾಡುವ ವಿಧಾನ:


ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಉಪ್ಪು ಮತ್ತು ತುಪ್ಪ ಹಾಕಿ ಕಲಸಿ. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಮೃದುವಾದ ಚಪಾತಿ ಹಿಟ್ಟಿನ ಹದಕ್ಕೆ ಕಲಸಬೇಕು ಹಾಗೆ ನಿಂಬೆ ಹಣ್ಣಿನ ಗಾತ್ರದ ಉಂಡೆ ಮಾಡಿ ಸ್ವಲ್ಪ ಚಪ್ಪಟೆಯಾಕಾರ ಮಾಡಿ ಇಟ್ಟುಕೊಳ್ಳಬೇಕು. ಈಗ 1 ಕಪ್ ಸಕ್ಕರೆಗೆ 1/2 ಕಪ್ ನೀರು ಹಾಕಿ, ಏಲಕ್ಕಿ ಪುಡಿ ಸೇರಿಸಿ ಒಂದೆಳೆ ಪಾಕ ಮಾಡಿಕೊಳ್ಳಬೇಕು. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ನಂತರ ಚಪ್ಪಟೆಯಾಕಾರದ ಉಂಡೆಯನ್ನು ಬಿಸಿಯಾದ ಎಣ್ಣೆಯಲ್ಲಿ ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಿ. ಬಿಸಿಯಾದ ಸಕ್ಕರೆ ಪಾಕದಲ್ಲಿ ಅದ್ದಿ ತೆಗೆದರೆ ರುಚಿಯಾದ ಬಾದುಷ ಸವಿಯಲು ಸಿದ್ದ.

Category
ಕರಾವಳಿ ತರಂಗಿಣಿ